ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2022; ರೈಲು ಪ್ರಯಾಣದರ ಏರಿಕೆ ಮಾಡಲ್ಲ?

|
Google Oneindia Kannada News

ನವದೆಹಲಿ, ಜನವರಿ 28; ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ರೈಲು ಪ್ರಯಾಣ ದರ ಏರಿಕೆ ಮಾಡುವ ಸಾಧ್ಯತೆ ಕಡಿಮೆ ಇದೆ.

ಸಾಮಾನ್ಯ ಬಜೆಟ್ ಜೊತೆ ರೈಲು ಬಜೆಟ್ ವಿಲೀನಗೊಂಡಿದೆ. ಆದ್ದರಿಂದ ರೈಲ್ವೆ ಇಲಾಖೆಗಳ ಹೊಸ ಯೋಜನೆ, ಅನುದಾನ ಹಂಚಿಕೆ ಸಾಮಾನ್ಯ ಬಜೆಟ್‌ನಲ್ಲಿಯೇ ನಡೆಯಲಿದೆ. ದರ ಏರಿಕೆ ಮಾಡಲಾಗುತ್ತದೆಯೇ? ಎಂಬುದು ಸದ್ಯದ ಪ್ರಶ್ನೆ.

ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲು ಸಂಚಾರ? ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲು ಸಂಚಾರ?

ಕೋವಿಡ್ ಸಂದರ್ಭದಲ್ಲಿ ರೈಲ್ವೆ ಇಲಾಖೆಗೆ ಅಪಾರ ನಷ್ಟವಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿದ್ದ ಹಲವಾರು ರೈಲುಗಳು ಇನ್ನೂ ಹಳಿಗೆ ಮೇಲೆ ಬಂದಿಲ್ಲ. ನಷ್ಟದ ಕಾರಣದಿಂದಾಗಿ ಪ್ರಯಾಣ ದರ ಏರಿಕೆ ಮಾಡಬಹುದು ಎಂಬುದು ಲೆಕ್ಕಾಚಾರವಾಗಿದೆ.

ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ವಿಲೀನಗೊಂಡಿದ್ದು ಏಕೆ? ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ವಿಲೀನಗೊಂಡಿದ್ದು ಏಕೆ?

Budget 2022 No Proposal To Hike Railway Passenger Fare

ಆದರೆ ರೈಲ್ವೆ ಇಲಾಖೆ ಮುಂದೆ ಪ್ರಯಾಣ ದರ ಏರಿಕೆಯ ಯಾವುದೇ ಪ್ರಸ್ತಾಪವಿಲ್ಲ. ಪ್ರಯಾಣ ದರ ಏರಿಕೆ ಮಾಡಿ ಜನರಿಗೆ ಹೊರೆಯಾಗದೇ ಸರಕು ಸಾಗಣೆ ಮತ್ತು ಇತರ ಮಾರ್ಗದ ಮೂಲಕ ಆದಾಯ ಸಂಗ್ರಹಣೆಗೆ ಬಜೆಟ್‌ನಲ್ಲಿ ಒತ್ತು ನೀಡುವ ನಿರೀಕ್ಷೆ ಇದೆ.

ಬಜೆಟ್; ಬೆಂಗಳೂರು-ಕಣ್ಣೂರು ರೈಲು ಕೋಜಿಕ್ಕೋಡ್ ತನಕ ವಿಸ್ತರಣೆ ಬಜೆಟ್; ಬೆಂಗಳೂರು-ಕಣ್ಣೂರು ರೈಲು ಕೋಜಿಕ್ಕೋಡ್ ತನಕ ವಿಸ್ತರಣೆ

ಕೋವಿಡ್ ಲಾಕ್‌ಡೌನ್ ಬಳಿಕ ರೈಲುಗಳ ಸಂಚಾರ ಆರಂಭವಾದರೂ ಕಳೆದ ವರ್ಷ ರೈಲ್ವೆಗೆ 26,338 ಕೋಟಿ ನಷ್ಟವಾಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಪ್ರಯಾಣ ದರ ಏರಿಕೆ ಮಾಡುವ ಮೂಲಕ ನಷ್ಟ ತುಂಬಿಕೊಳ್ಳುವ ಚಿಂತನೆ ನಡೆದಿತ್ತು. ಆದರೆ ಸರ್ಕಾರ ದರ ಏರಿಕೆಗೆ ಒಪ್ಪಿಗೆ ಕೊಡಲಿಲ್ಲ.

ಕೋವಿಡ್ ಸಂದರ್ಭದಲ್ಲಿ ಸರಕು ಸಾಗಣೆಯಿಂದ ರೈಲ್ವೆಗೆ ಹೆಚ್ಚಿನ ಆದಾಯ ಬಂದಿದೆ. ಸಾಮಾನ್ಯ ದಿನಗಳಲ್ಲಿ ಸರಕು ಸಾಗಣೆ ಮೂಲಕವೇ ಆದಾಯ ಸಂಗ್ರಹಕ್ಕೆ ಬಜೆಟ್‌ನಲ್ಲಿ ಉಪಕ್ರಮಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.

ಬುಲೆಟ್ ರೈಲು; ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ದೆಹಲಿ-ವಾರಣಾಸಿ ಹೈಸ್ಪೀಡ್ ರೈಲು (ಬುಲೆಟ್) ಯೋಜನೆ ಘೋಷಣೆ ಮಾಡುವ ನಿರೀಕ್ಷೆ ಇದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿಯೇ ಈ ಯೋಜನೆ ಕುರಿತು ಡಿಪಿಆರ್ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ದೇಶದ ಮೊದಲ ಬುಲೆಟ್ ರೈಲು ಯೋಜನೆ ಮುಂಬೈ-ಅಹಮದಾಬಾದ್ ಕಾಮಗಾರಿ ತಡವಾಗಿಯಾದರೂ ನಡೆಯುತ್ತಿದೆ. ಮುಂಬೈ-ನಾಗ್ಪುರ ಬುಲೆಟ್ ರೈಲು ಯೋಜನೆ ಪ್ರಸ್ತಾಪವೂ ಸರ್ಕಾರದ ಮುಂದಿದೆ. ಆದರೆ ಈ ಯೋಜನೆ ಡಿಪಿಆರ್ ತಯಾರಾಗಲು ಇನ್ನೂ 3 ತಿಂಗಳು ಬೇಕಾಗಿದೆ.

ರೈಲ್ವೆ ವೆಚ್ಚ ತಗ್ಗಿಸಲು ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಲು ವಿದ್ಯುದೀಕರಣಕ್ಕೆ ಒತ್ತು ನೀಡಲಾಗುತ್ತಿದೆ. 2030ರ ಸಂಪೂರ್ಣ ವಿದ್ಯುದೀಕರಣ ಘೋಷಣೆಗೆ ಸಹಕಾರಿಯಾಗುವಂತೆ ಉಪ ಕ್ರಮಗಳ ಘೋಷಣೆ ನಿರೀಕ್ಷೆ ಮಾಡಲಾಗಿದೆ.

ರೈಲು ನಿಲ್ದಾಣಗಳಲ್ಲಿ ಸೌರ ಶಕ್ತಿ ಮೂಲಕ ವಿದ್ಯುತ್ ತಯಾರಿಕೆ ಯೋಜನೆ ರೂಪಿಸಲಾಗುತ್ತಿದ್ದು, ಈ ಕುರಿತು ಕೆಲವು ಘೋಷಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಕೆಲವು ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಬಜೆಟ್‌ನಲ್ಲಿ ರೈಲ್ವೆಯು ತನ್ನ ವೆಚ್ಚವನ್ನು ಶೇ 15 ರಿಂದ 20ರಷ್ಟು ಏರಿಕೆ ಮಾಡಲಿದೆ. ಪ್ರಯಾಣಿಕರಿಗೆ ಸಹ ಹಲವಾರು ಸೌಲಭ್ಯಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. 10 ಹೊಸ ರೈಲು ಮಾರ್ಗವನ್ನು ಘೋಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇದೆ.

ರೈಲು ನಿಲ್ದಾಣಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಒದಗಿಸುವುದು, ಸೌರ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ, ರೈಲು ನಿಲ್ದಾಣಗಳ ಆಧುನೀಕರಣ, ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ತಗ್ಗಿಸುವುದು ಸೇರಿದಂತೆ ಹಲವಾರು ಘೋಷಣೆಗಳ ನಿರೀಕ್ಷೆ ಬಜೆಟ್‌ನಲ್ಲಿದೆ.

ಹೊಸ ರೈಲು ಮಾರ್ಗಗಳ ಸಮೀಕ್ಷೆಗೆ ಸಹ ಸರ್ಕಾರ ಅನುದಾನ ನೀಡುವ ಸಾಧ್ಯತೆ ಇದೆ. ದೇಶದ ವಿವಿಧ ರೈಲು ಮಾರ್ಗಗಳ ವಿದ್ಯದೀಕರಣಕ್ಕೆ ಬಜೆಟ್‌ನಲ್ಲಿ ಆದ್ಯತೆ ದೊರೆಯಲಿದೆ.

Recommended Video

Congress ಪಕ್ಷ ಬಿಡೋಕೆ ಕಾರಣ ಯಾರೆಂದು ಹೇಳಿದ CM Ibrahim | Oneindia Kannada

English summary
Indian Railways is unlikely to hike the passenger fare in the budget 2022-23. There is no proposal to hike passenger fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X