ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

E-Passport : ಬಜೆಟ್‌ 2022-23ರಲ್ಲಿ ಇ-ಪಾಸ್‌ಪೋರ್ಟ್ ಜಾರಿಗೆ: ವಿತ್ತ ಸಚಿವೆ

|
Google Oneindia Kannada News

ನವದೆಹಲಿ, ಫೆಬ್ರವರಿ 01: ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ 2022-23 ವರ್ಷದಿಂದ ಇ-ಪಾಸ್‌ಪೋರ್ಟ್‌ಗಳನ್ನು ಜಾರಿಗೆ ತರಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ, "ಇ-ಪಾಸ್‌ಪೋರ್ಟ್‌ಗಳಲ್ಲಿ ಎಂಬೆಡೆಡ್ ಚಿಪ್ಸ್ ಮತ್ತು ಫ್ಯೂಚರಿಸ್ಟಿಕ್ ಎಂಬ ತಂತ್ರಜ್ಞಾನವನ್ನು ಬಳಸಲಾಗುತ್ತದೆ," ಎಂದು ಕೂಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

 ಶೀಘ್ರದಲ್ಲೇ ಇ-ಪಾಸ್‌ಪೋರ್ಟ್ ಬಿಡುಗಡೆ: ಏನಿದು?, ಇಲ್ಲಿದೆ ವಿವರ ಶೀಘ್ರದಲ್ಲೇ ಇ-ಪಾಸ್‌ಪೋರ್ಟ್ ಬಿಡುಗಡೆ: ಏನಿದು?, ಇಲ್ಲಿದೆ ವಿವರ

ಅಧಿಕಾರಿಗಳ ಪ್ರಕಾರ, ಇ-ಪಾಸ್‌ಪೋರ್ಟ್‌ಗಳು ಹೆಚ್ಚಿನ ಭದ್ರತಾ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಪಾಸ್‌ಪೋರ್ಟ್‌ನಲ್ಲಿ ಎಕ್ಟ್ರಾನಿಕ್ ಚಿಪ್ ಇದ್ದು ಅದರ ಮೇಲೆ ಎನ್‌ಕೋಡ್ ಮಾಡಲಾದ ಭದ್ರತೆಗೆ ಸಂಬಂಧಿಸಿದ ಡೇಟಾ ಇರುತ್ತದೆ.

Budget 2022: Issuance of E-passports Will Be Rolled Out in 2022-23: FM Nirmala Sitharaman

ಈ ಹಿಂದೆ ಘೋಷಣೆ ಮಾಡಿದ್ದ ವಿದೇಶಾಂಗ ಸಚಿವಾಲಯ

ಈ ಹಿಂದೆ ಕಳೆದ ತಿಂಗಳು ಭಾರತೀಯರಿಗೆ ಶೀಘ್ರದಲ್ಲೇ ಮೈಕ್ರೋ ಚಿಪ್‌ ಹೊಂದಿರುವ ಇ-ಪಾಸ್‌ಪೋರ್ಟ್ ಲಭ್ಯವಾಗಲಿದೆ ಎಂದು ವಿದೇಶಾಂಗ ಸಚಿವಾಲಯವು ಘೋಷಣೆ ಮಾಡಿದೆ. ಈ ಇ ಪಾಸ್‌ಪೋರ್ಟ್ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿಗೆ, ವಲಸಿಗರಿಗೆ ಎಲ್ಲಾ ನಾಗರಿಕರು ಲಭ್ಯವಾಗಲಿದೆ ಎಂದು ಕೂಡಾ ಸಚಿವಾಲಯ ಮಾಹಿತಿ ನೀಡಿದೆ. ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್‌ ಭಟ್ಟಾಚಾರ್ಯ ಈ ಬಗ್ಗೆ ಟ್ವಿಟ್ಟರ್‌ ಮೂಲಕ ಘೋಷಣೆ ಮಾಡಿದ್ದಾರೆ.

ಈ ಹೊಸ ಇ-ಪಾಸ್‌ಪೋರ್ಟ್ ಹೊಸ ಹೊಸ ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ ಮೈಕ್ರೋಚಿಪ್‌ ಇರಲಿದೆ. ಇದು ಪಾಸ್‌ಪೋರ್ಟ್‌ದಾರರ ಬಯೊಮೆಟ್ರಿಕ್‌ ಡೇಟಾ, ಭದ್ರತೆಯ ವಿಚಾರಗಳು ಇರಲಿದೆ. ಇನ್ನು ಈ ಇ-ಪಾಸ್‌ಪೋರ್ಟ್‌ಅನ್ನು ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ತಯಾರಿ ಮಾಡಲಾಗುತ್ತದೆ.

ಇ ಪಾಸ್‌ಪೋರ್ಟ್ ಪ್ರಯಾಣ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮಾಡಲಿದೆ. ಇನ್ನು ಇ ಪಾಸ್‌ಪೋರ್ಟ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಟ್ವೀಟ್‌ ಮಾಡಿರುವ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್‌ ಭಟ್ಟಾಚಾರ್ಯ, "ಭಾರತದ ನಾಗರಿಕರಿಗೆ ಮುಂದಿನ ಪೀಳಿಗೆಗೆ ತಕ್ಕುದಾದ ಇ ಪಾಸ್‌ಪೋರ್ಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಇದು ಬಯೋಮೆಟ್ರಿಕ್‌ ಡೇಟಾವನ್ನು ಸುರಕ್ಷತೆ ಮಾಡಲಿದೆ. ಜಾಗತಿಕವಾಗಿ ಸುಲಭವಾಗಿ ಪ್ರಯಾಣ ಮಾಡಲು ಇದು ಸಹಕಾರಿ ಆಗಲಿದೆ. ಇದನ್ನು ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ತಯಾರಿ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.

ಪ್ರಸ್ತುತ ಪಾಸ್‌ಪೋರ್ಟ್ ಮುದ್ರಿತ ಪುಸ್ತಕದ ರೂಪದಲ್ಲಿ ಇದೆ. ಕೇಂದ್ರ ಸರ್ಕಾರವು ಆರಂಭಿಕ ಹಂತದಲ್ಲಿ ಸುಮಾರು 20,000 ಅಧಿಕಾರಿಗಳು ಹಾಗೂ ರಾಜತಾಂತ್ರಕರಿಗೆ ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಿದೆ. ಉಳಿದವರು ಈ ಸಂದರ್ಭದಲ್ಲಿ ಮುದ್ರಿತ ಪಾಸ್‌ಪೋರ್ಟ್‌ಗಳನ್ನೇ ಎಂದಿನಂತೆ ಬಳಕೆ ಮಾಡಬಹುದು. ಆರಂಭಿಕ ಹಂತದಲ್ಲಿ ಇ ಪಾಸ್‌ಪೋರ್ಟ್ ಯಶಸ್ವಿಯಾದರೆ ಬಳಿಕ ನಾಗರಿಕರಿಗೂ ಕೂಡಾ ಈ ಹೊಸ ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಾಗುತ್ತದೆ. ಈ ಮೂಲಕ ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತದೆ ಎಂದು ವರದಿ ಆಗಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ಇವತ್ತು ನಿರ್ಮಲಾ ಸೀತಾರಾಮನ್ ಎಷ್ಟು ಗಂಟೆಗಳ ಕಾಲ ಬಜೆಟ್ ಮಂಡಿಸ್ತಾರೆ? | Oneindia Kannada | Oneindia Kannada

English summary
Issuance of E-passports will be rolled out in 2022-23 to enhance convenience for citizens: Finance Minister Nirmala Sitharaman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X