ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Railway Budget 2022; ರೈಲ್ವೆ ಇಲಾಖೆಯ ಪ್ರಮುಖ ಘೋಷಣೆಗಳು

|
Google Oneindia Kannada News

ನವದೆಹಲಿ, ಫೆಬ್ರವರಿ 01; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. 2017ರಲ್ಲಿ ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಂಡಿದೆ. ಆದ್ದರಿಂದ ರೈಲ್ವೆ ಇಲಾಖೆಯ ಘೋಷಣೆಗಳನ್ನು ಸಾಮಾನ್ಯ ಬಜೆಟ್ ಭಾಷಣದಲ್ಲಿಯೇ ಮಾಡಿದರು.

ಮಂಗಳವಾರ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದರು. ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್ ಜೊತೆ ವಿಲೀನಗೊಂಡ ಬಳಿಕ ಮಂಡನೆಯಾದ 6ನೇ ಬಜೆಟ್ ಇದಾಗಿದೆ.

ಕೇಂದ್ರ ಬಜೆಟ್ 2022 ನಂತರ ಯಾವುದು ಏರಿಕೆ ಯಾವುದು ಇಳಿಕೆ?ಕೇಂದ್ರ ಬಜೆಟ್ 2022 ನಂತರ ಯಾವುದು ಏರಿಕೆ ಯಾವುದು ಇಳಿಕೆ?

ವಂದೇ ಭಾರತ್ ಎಕ್ಸ್‌ಪ್ರೆಸ್ ಸದ್ಯ ದೇಶದ ಅತಿ ವೇಗದ ಐಷಾರಾಮಿ ರೈಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲು ತಯಾರು ಮಾಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.

Budget 2022; 400 ವಂದೇ ಭಾರತ್ ರೈಲುಗಳ ನಿರ್ಮಾಣ Budget 2022; 400 ವಂದೇ ಭಾರತ್ ರೈಲುಗಳ ನಿರ್ಮಾಣ

Budget 2022 Highlights For Railway Sector In Kannada

ದೇಶದ ಹಲವು ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎಂಬ ಪ್ರಸ್ತಾವನೆ ಇದೆ. ಈ ಘೋಷಣೆಯಿಂದ ಹೊಸ ಮಾರ್ಗದಲ್ಲಿ ರೈಲು ಓಡಿಸಲು ಸಹಕಾರಿಯಾಗಲಿದೆ.

Budget 2022; ಕೃಷಿ ಕ್ಷೇತ್ರ, ರೈತರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? Budget 2022; ಕೃಷಿ ಕ್ಷೇತ್ರ, ರೈತರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

2 ಸಾವಿರ ಕಿಲೋ ಮೀಟರ್ ರೈಲು ಜಾಲವನ್ನು ಕವಚ್ ಅಡಿ ತರಲಾಗುತ್ತದೆ. ಈ ಮೂಲಕ ಅಂತರಾಷ್ಟ್ರೀಯ ದರ್ಜೆಯ ಸೇವೆ ಮತ್ತು ಸುರಕ್ಷತೆಗೆ ಒತ್ತು ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.

'ಒಂದು ಜಿಲ್ಲೆ ಒಂದು ಉತ್ಪನ್ನ'ದ ಮಾದರಿಯಲ್ಲಿ 'ಒನ್ ಮಾದರಿ ಒಂದು ರೈಲು ನಿಲ್ದಾಣ' ಎಂಬ ಪರಿಕಲ್ಪನೆ ಜಾರಿಗೆ ತರಲಾಗುತ್ತದೆ. ಇದರಿಂದಾಗಿ ಸ್ಥಳೀಯ ಮಾರಾಟಗಾರರಿಗೆ ಅನುಕೂಲವಾಗಲಿದೆ.

ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಸರಕು ಸಾಗಣೆಗೆ ಸಹಾಯಕವಾಗುವಂತೆ 100 ಕಾರ್ಗೊ ನಿಲ್ದಾಣ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಬಜೆಟ್ ಭಾಷಣ ಮಾಡುವಾಗ ಸಚಿವರು, "ರೈಲ್ವೇ ಸಣ್ಣ, ಮಧ್ಯಮ ರೈತರ ಉತ್ಪನ್ನಗಳಿಗೆ ದಕ್ಷ ಸರಕು ಸೇವೆಯನ್ನು ನೀಡುವ ಮೂಲಕ ನೆರವಾಗಲಿದೆ. ಭವಿಷ್ಯದಲ್ಲಿ ನಾವು ಅಂಚೆ ಮತ್ತು ರೈಲ್ವೆ ಜಾಲದ ಏಕೀಕರಣದಲ್ಲಿ ಮುಂದಾಳತ್ವವನ್ನು ವಹಿಸುತ್ತವೆ" ಎಂದರು.

"ಸಮೂಹ ನಗರ ಸಾರಿಗೆ ಮತ್ತು ರೈಲು ನಿಲ್ದಾಣಗಳ ನಡುವಿನ ಸಂಪರ್ಕವನ್ನು ಆದ್ಯತೆಯ ಮೇಲೆ ಸುಗಮಗೊಳಿಸಲಾಗುತ್ತದೆ" ಎಂದು ಹೇಳಿದರು.

ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ 1.4 ಲಕ್ಷ ಕೋಟಿ ರೂ.ಗಳ ಅನುದಾನವನ್ನು ನೀಡಲಾಗಿದೆ.

English summary
Budget 2022 for Railways: Know about Union Budget 2022 Highlights for Railway sector. Check New reforms & schemes announced for the railway sector in budget 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X