ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Digital Rupee: ಬಜೆಟ್ 2022: ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನ

|
Google Oneindia Kannada News

ನವದೆಹಲಿ, ಫೆಬ್ರವರಿ 1: ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಬ್ಲಾಕ್‌ಚೈನ್‌ ಟೆಕ್ನಾಲಜಿ ಮೂಲಕ ಡಿಜಿಟಲ್ ರೂಪಾಯಿ ವಿತರಣೆಗೆ ನಿರ್ಧರಿಸಿದೆ.

2022-23ರಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಡಿಜಿಟಲ್ ಹಣ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆರ್‌ಬಿಐ ತನ್ನದೇ ಆದ ವರ್ಚ್ಯುವಲ್ ಕರೆನ್ಸಿ ಆವೃತ್ತಿಯನ್ನು ಹೊರತರುವ ಪ್ರಕ್ರಿಯೆಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಈ ಬಾರಿಯ ಬಜೆಟ್​ನಲ್ಲಿ ಬಂಡವಾಳ ವೆಚ್ಚವನ್ನು (Capital Expenditure) ಶೇ 35.4ರಷ್ಟು ಹೆಚ್ಚಿಸಲಾಗಿದೆ. ದೇಶದ ರಾಷ್ಟ್ರೀಯ ಆಸ್ತಿ ಹೆಚ್ಚಿಸುವ ಉದ್ದೇಶಕ್ಕೆ ಈ ನಿಧಿ ಬಳಕೆಯಾಗಲಿದೆ. ಒಟ್ಟು ಜಿಡಿಪಿಯ ಶೇ 2.9ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. 2022-2023ರ ಆರ್ಥಿಕ ವರ್ಷದಲ್ಲಿ ಭಾರತ ಸರ್ಕಾರವು 10.9 ಲಕ್ಷ ಕೋಟಿ ರೂ. ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಬಳಸಲು ನಿರ್ಧರಿಸಿದೆ.

Budget 2022 Digital Rupee : Digital Currency To Be Issued By RBI In 2022-2023: FM

ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ಜಾರಿಗೊಳಿಸಲಾಗುವುದು. ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು. 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ನಿರ್ಧಾರ ಮಾಡಿದೆ.

ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಪ್​ಡೇಟೆಡ್​ ರಿಟರ್ನ್ ಫೈಲ್ ಮಾಡಬಹುದು. ಆ ಅಸೆಸ್​ಮೆಂಟ್​ನಿಂದ ಎರಡು ವರ್ಷದೊಳಗೆ ಮಾಡಬಹುದು. ದೇಶದಲ್ಲಿ ಹೊಸ ರಿಟರ್ನ್ಸ್ ಪರಿಚಯ ಮಾಡಲು ಕೇಂದ್ರ ತೀರ್ಮಾನಿಸಿದೆ. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿ ಜಾರಿಮಾಡಲಾಗುವುದು. ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ 2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ.

ಸಹಕಾರ ಸಂಘಗಳ ಮೇಲಿನ ಸರ್​ಚಾರ್ಜ್ ಇಳಿಕೆ ಮಾಡಲಾಗಿದೆ. ಶೇಕಡಾ 12ರಿಂದ ಶೇಕಡಾ 7ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದ್ದು, ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 10 ಕೋಟಿಯೊಳಗಿನ ಆದಾಯದ ಸಹಕಾರ ಸಂಘಗಳಿಗೆ ಇದು ಅನ್ವಯವಾಗುತ್ತದೆ. ಕೋ- ಆಪರೇಟಿವ್ ಸೊಸೈಟಿಗಳಿಗೂ ಇನ್ನು ಮುಂದೆ ಶೇ 15ರ ತೆರಿಗೆ. ತೆರಿಗೆ ಪದ್ಧತಿಯಲ್ಲಿ ಇರುವ ಹಲವು ಸಂಕೀರ್ಣ ಅಂಶಗಳನ್ನು ಸರಳಗೊಳಸಲಿ ಸರ್ಕಾರ ಮುಂದಾಗಿದೆ.

ಆದಾಯ ತೆರಿಗೆ ಘೋಷಣೆ ಅಥವಾ ಆದಾಯ ತೆರಿಗೆ ಸಲ್ಲಿಕೆ ವೇಳೆ ಯಾವುದಾದರೂ ಆದಾಯ ಬಿಟ್ಟುಹೋಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಹಾಗೂ ಹೊಸದಾಗಿ ಮತ್ತೊಮ್ಮೆ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸಲು ಎರಡು ವರ್ಷಗಳ ಅವಕಾಶ ಸಿಗಲಿದೆ. ಅಂಗ ವೈಕಲ್ಯ ಇರುವವರಿಗೆ ಹೆಚ್ಚುವರಿಯಾದ ತೆರಿಗೆ ಡಿಡಕ್ಷನ್. ಅಂಥವರ ಪೋಷಕರು, ಪಾಲಕರಿಗೆ ದೊರೆಯಲಿದೆ.

ಕ್ರಿಪ್ಟೋಕರೆನ್ಸಿ ಎಂದರೆ ಅದು ಡಿಜಿಟಲ್ ಆಸ್ತಿ. ಕೈನಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಅದು ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ ನಿಮ್ಮ ಖಾತೆಯಲ್ಲಿ ಇರುತ್ತದೆ. ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಒದಗಿಸಲಾಗಿರುತ್ತದೆ.

'ಬ್ಲಾಕ್‌ ಚೈನ್' ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕರೆನ್ಸಿಯನ್ನು ವಿತರಿಸುವ ಹಲವು ಖಾಸಗಿ ಸಂಸ್ಥೆಗಳಿವೆ. ಆದ್ರೆ, ಸರ್ಕಾರವಾಗಲಿ, ಸರ್ಕಾರಿ ಸಂಸ್ಥೆಯಾಗಲಿ ಈ ವ್ಯವಹಾರ ನಡೆಸೋದಿಲ್ಲ ಹಾಗೂ ಭಾಗಿಯಾಗುವುದಿಲ್ಲ.

ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್. ಇದು ಇಂದಿಗೂ ಅತ್ಯಂತ ಜನಪ್ರಿಯವಾದ ಕ್ರಿಪ್ಟೋ ಕರೆನ್ಸಿ. ಜೊತೆಯಲ್ಲೇ ಸಾವಿರಾರು ಬಗೆಯ ಕ್ರಿಪ್ಟೋಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕೆಲವು ಬಿಟ್‌ ಕಾಯಿನ್‌ಗಳ ರೂಪಾಂತರದಂತೆಯೂ ಇವೆ.

Recommended Video

One Class One Tv channel ಯೋಜನೆಯಡಿ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ | Oneindia Kannada

2009ರಲ್ಲಿ ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿತು. ಇದೀಗ ಮಾರ್ಚ್‌ 2021ರ ಅಂಕಿಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್..

English summary
Finance minister Nirmala Sitharaman announced that the RBI will roll out the Central Bank Digital Currency (CBDC) in FY23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X