ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್; ಅಪಾರ ನಿರೀಕ್ಷೆಯಲ್ಲಿ ಆಟೋಮೊಬೈಲ್ ಕ್ಷೇತ್ರ

|
Google Oneindia Kannada News

ನವದೆಹಲಿ, ಜನವರಿ 16; ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬೇಡಿಕೆ ಕುಸಿತ, ಬಿಎಸ್‌-6 ಪದ್ಧತಿ ಜಾರಿಯಾದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಉಂಟಾಗಿದೆ. ಸಂಕಷ್ಟದ ಪರಿಸ್ಥಿತಿಯಿಂದ ಹೊರ ಬರಲು ಕ್ಷೇತ್ರ ಬಜೆಟ್‌ನಲ್ಲಿ ನೆರವಿನ ನಿರೀಕ್ಷೆಯಲ್ಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಕೋವಿಡ್ ಪರಿಸ್ಥಿತಿ ಬಳಿಕ ಕುಸಿತಕಂಡಿರುವ ಆಟೋಮೊಬೈಲ್ ಕ್ಷೇತ್ರ ಬಜೆಟ್‌ ಮೇಲೆ ಹಲವಾರು ನಿರೀಕ್ಷೆ ಇಟ್ಟಿದೆ.

ಬಜೆಟ್; ಒಂದೇ ಮಾದರಿ ಜಿಎಸ್‌ಟಿಗೆ ಉತ್ಪಾದನಾ ವಲಯದ ಬೇಡಿಕೆ ಬಜೆಟ್; ಒಂದೇ ಮಾದರಿ ಜಿಎಸ್‌ಟಿಗೆ ಉತ್ಪಾದನಾ ವಲಯದ ಬೇಡಿಕೆ

ಬಜೆಟ್‌ನಲ್ಲಿ ತೆರಿಗೆ ಸುಧಾರಣೆಯನ್ನು ಸರ್ಕಾರ ಘೋಷಣೆ ಮಾಡಿದರೂ ಸಹ ಇನ್ನೂ ಹಲವು ಉಪಕ್ರಮಗಳ ಅಗತ್ಯವಿದೆ ಎಂದು ಕ್ಷೇತ್ರದ ತಜ್ಞರು ಹೇಳಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಬಲ್ಲ ಕ್ಷೇತ್ರಗಳಲ್ಲಿ ಆಟೋಮೊಬೈಲ್‌ ಸಹ ಒಂದಾಗಿದೆ.

ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು

Budget 2022 Auto Industry Seeking Some Relaxation

ಬಿಎಸ್-6 ನೀತಿ 2020ರಲ್ಲಿ ಜಾರಿಯಾದ ಬಳಿಕ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ನಿರೀಕ್ಷೆ ಮಾಡಲಾಗಿತ್ತು. ಆದರೆ ತೈಲ ಬೆಲೆ ಏರಿಕೆ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬೇಡಿಕೆ ಕಡಿಮೆಯಾಗಿದ್ದು, ಕ್ಷೇತ್ರಕ್ಕೆ ಕುಸಿತಕ್ಕೆ ಕಾರಣವಾಗಿದೆ.

ಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆ ಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆ

2021ರ ಡಿಸೆಂಬರ್‌ನಲ್ಲಿ ಸರ್ಕಾರ ವಲಯಕ್ಕೆ ಪೂರಕವಾಗುವ ಉತ್ಪಾದನೆ ಆಧಾರಿತ ಇನ್ಸೆಂಟಿವ್ ಯೋಜನೆ ಘೋಷಣೆ ಮಾಡಿತು. ಆದರೆ ಈಗ ಕೋವಿಡ್ 3ನೇ ಅಲೆ ಪ್ರಭಾವ ಕ್ಷೇತ್ರದ ಮೇಲೆ ಮತ್ತೆ ಪರಿಣಾಮ ಬೀರಿದೆ. ಆದ್ದರಿಂದ ನಿರೀಕ್ಷಿತ ಬೆಳವಣಿಗೆ ಕಂಡುಬಂದಿಲ್ಲ.

2018-19ರಲ್ಲಿ ಆಟೋಮೊಬೈಲ್ ಉದ್ಯಮ ಉತ್ತಮ ಪ್ರಗತಿ ದಾಖಲು ಮಾಡಿತ್ತು. ಆದರೆ 2020-21ರಲ್ಲಿ ಇಳಿಮುಖದ ಹಾದಿಯತ್ತ ಸಾಗಿತ್ತು. 2020-21ನೇ ಮೂರನೇ ತ್ರೈ ಮಾಸಿಕದ ಅವಧಿಯಲ್ಲಿ ದೇಶದಲ್ಲಿ ಕೋವಿಡ್ ಅಲೆ ಆರಂಭವಾಯಿತು. 2021ರಲ್ಲಿಯೂ ಅದು ಮುಂದುವರೆಯಿತು.

ದೇಶದ ಜಿಡಿಪಿಗೆ ಆಟೋಮೊಬೈಲ್ ಕ್ಷೇತ್ರದ ಕೊಡುಗೆ ಸುಮಾರು ಶೇ 7.5ರಷ್ಟಿದೆ. ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿ ಮಾಡಬಲ್ಲ ಕ್ಷೇತ್ರ ಕೋವಿಡ್ ಪರಿಸ್ಥಿತಿ ಬಳಿಕ ಬಿಕ್ಕಟ್ಟಿಗೆ ಸಿಲುಕಿದೆ. ಆದ್ದರಿಂದ ಬಜೆಟ್‌ನಲ್ಲಿ ತೆರಿಗೆ ನೀತಿ ಸೇರಿದಂತೆ ಹಲವು ಉಪಕ್ರಮಗಳ ನಿರೀಕ್ಷೆಯಲ್ಲಿದೆ.

ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿನ ನಿರ್ಬಂಧಗಳಿಂದಾಗಿ ಖರೀದಿಗೆ ಹೊಡೆತ ಬಿತ್ತು. ಉತ್ಪಾದನೆ ವೆಚ್ಚವೂ ಅಧಿಕವಾಯಿತು. ಆಗ ಅನಿವಾರ್ಯವಾಗಿ ಉದ್ಯೋಗ ಕಡಿತ ಮಾಡುವ ಸಂದರ್ಭವೂ ಎದುರಾಯಿತು. ಬಳಿಕ ತೈಲ ಬೆಲೆ ಏರಿಕೆ ಉದ್ಯಮಕ್ಕೆ ಸವಾಲು ತಂದೊಡ್ಡಿತು.

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸರ್ಕಾರವೇ ಆದ್ಯತೆ ನೀಡುತ್ತಿದೆ. ಆದ್ದರಿಂದ ಪೆಟ್ರೋಲ್, ಡೀಸೆಲ್ ವಾಹನಗಳ ಖರೀದಿ ಮಾಡಬೇಕಾದ ಜನರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಬಜೆಟ್‌ನಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಮತ್ತಷ್ಟು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡರೆ ಆಟೋಮೊಬೈಲ್ ಕ್ಷೇತ್ರದ ಲೆಕ್ಕಾಚಾರವೇ ಬದಲಾಗಲಿದೆ.

2021ರಲ್ಲಿ ಆಟೋಮೊಬೈಲ್ ಕ್ಷೇತ್ರ ಶೇ 27ರಷ್ಟು ಪ್ರಗತಿ ಕಂಡಿದೆ ಎಂದು ವರದಿ ಹೇಳಿತ್ತು. ಕಸ್ಟಮ್ಸ್ ನೀತಿಯಲ್ಲಿ ಬದಲಾವಣೆ ಮಾಡಬೇಕು. ಗಡಿಯಾಚೆಗಿನ ಡೀಲ್‌ಗಳಿಗೆ ಸಂಬಂಧಿಸಿದಂತೆ ಕೆಲವು ವಿನಾಯಿತಿ ನೀಡಬೇಕು ಎಂಬುದು ಕ್ಷೇತ್ರದ ಪ್ರಮುಖ ಬೇಡಿಕೆಯಾಗಿದೆ.

2017ರಲ್ಲಿ 30 ಲಕ್ಷ, 2018ರಲ್ಲಿ 33.95 ಲಕ್ಷ ಪ್ರಯಾಣಿಕರ ವಾಹನಗಳ ಮಾರಾಟ ದಾಖಲಾಗಿತ್ತು. 2019ರಲ್ಲಿ ಅದು ಮತ್ತೆ 29.62 ಲಕ್ಷಕ್ಕೆ ಇಳಿಕೆ ಕಂಡಿತ್ತು. ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ 2021ರಲ್ಲಿ 13.65 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ ಎಂದು ವರದಿ ತಿಳಿಸಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಜನರು ಹೆಚ್ಚು ಒಲವು ತೋರುತ್ತಿದ್ದು ಸರ್ಕಾರ ಸಹ ಇದನ್ನು ಪ್ರೋತ್ಸಾಹಿಸುತ್ತಿದೆ. ಆದ್ದರಿಂದ 2022ರಲ್ಲಿ ವಾಹನಗಳ ಬೇಡಿಕೆಯಲ್ಲಿ ಕೆಲವು ಏರುಪೇರು ನಿರೀಕ್ಷೆ ಮಾಡಲಾಗಿದೆ. ಹಲವು ಪ್ರತಿಷ್ಠಿತ ಕಾರು ಕಂಪನಿಗಳು ವಿದ್ಯುತ್ ಚಾಲಿತ ಕಾರುಗಳ ಉತ್ಪಾದನೆಗೆ ಆದ್ಯತೆ ನೀಡುತ್ತಿವೆ.

ದೇಶದ ಮಹಾನಗರಗಳಲ್ಲಿ ವಿದ್ಯುತ್ ಚಾಲಿತ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸರ್ಕಾರ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಸೇರಿದಂತೆ ಇದಕ್ಕೆ ಪೂರಕವಾದ ವ್ಯವಸ್ಥೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡುವ ನಿರೀಕ್ಷೆ ಇದೆ.

English summary
Nirmala Sitharaman will present 2022 budget on February 1. The auto industry seeking some relaxations after suffered a significant dent in the time of Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X