ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್; ಒಂದೇ ಮಾದರಿ ಜಿಎಸ್‌ಟಿಗೆ ಉತ್ಪಾದನಾ ವಲಯದ ಬೇಡಿಕೆ

|
Google Oneindia Kannada News

ನವದೆಹಲಿ, ಜನವರಿ 14; ಕೇಂದ್ರ ಬಜೆಟ್ 2022-23 ಫೆಬ್ರವರಿ 1ರಂದು ಮಂಡನೆಯಾಗಲಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ವಿವಿಧ ವಲಯಗಳಲ್ಲಿ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇದೆ. ವಾಹನಗಳ ಬಿಡಿ ಭಾಗಗಳನ್ನು ತಯಾರು ಮಾಡುವವರು ಒಂದೇ ಮಾದರಿಯ ಜಿಎಸ್‌ಟಿ ನೀತಿ ಜಾರಿಗೆ ತನ್ನಿ ಎಂದು ಆಗ್ರಹಿಸಿದ್ದಾರೆ.

ಆಟೋಮೊಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಎಸಿಎಂಎ) ಒಂದೇ ಮಾದರಿಯ ಶೇ 18ರಷ್ಟು ಜಿಎಸ್‌ಟಿ ತೆರಿಗೆ ನೀತಿ ಜಾರಿಗೆ ಬರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದೆ. ಬೇರೆ-ಬೇರೆ ಮಾದರಿ ಜಿಎಸ್‌ಟಿ ಉದ್ಯಮಕ್ಕೆ ನಷ್ಟ ಉಂಟು ಮಾಡುತ್ತಿದೆ ಎಂದು ಹೇಳಿದೆ.

ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು

ವಾಹನಗಳ ಮಾರಾಟ ಕುಸಿತ, ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಬಿಡಿ ಭಾಗಗಳ ಉತ್ಪಾದನಾ ವಲಯದಲ್ಲಿಯೂ ಹಲವಾರು ಸಮಸ್ಯೆಗಳು ಉಂಟಾಗಿವೆ. ಬಿಡಿ ಭಾಗಗಳ ರಫ್ತಿಗೆ ಹೆಚ್ಚಿನ ತೆರಿಗೆ ಹಾಕಲಾಗುತ್ತಿದೆ. ಇದರಿಂದಾಗಿ ಉದ್ಯಮಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಬಜೆಟ್ ಪೂರ್ವ ಸಭೆಯಲ್ಲಿ ವಿವರಣೆ ನೀಡಿದೆ.

ಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆ ಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆ

Budget 2022 ACMA Urged For Uniform GST Rate

"ಬಿಡಿ ಭಾಗಗಳ ಉತ್ಪಾದನಾ ವಲಯ ಎಲ್ಲಾ ಉತ್ಪನ್ನಗಳಿಗೆ ಶೇ 18ರಷ್ಟು ಒಂದೇ ಮಾದರಿಯ ಜಿಎಸ್‌ಟಿ ನೀತಿ ಜಾರಿಗೆ ತನ್ನಿ ಎಂದು ಸರ್ಕಾರವನ್ನು ಆಗ್ರಹಿಸಿದೆ" ಎಂದು ಎಸಿಎಂಎ ಅಧ್ಯಕ್ಷ ಸಂಜಯ್ ಕಪೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಜೆಟ್ 2022; ಉದ್ಯೋಗ ಸೃಷ್ಟಿ ಜೊತೆಗೆ ಕೌಶಲ್ಯ ತರಬೇತಿಗೆ ಆದ್ಯತೆ ಬಜೆಟ್ 2022; ಉದ್ಯೋಗ ಸೃಷ್ಟಿ ಜೊತೆಗೆ ಕೌಶಲ್ಯ ತರಬೇತಿಗೆ ಆದ್ಯತೆ

ದೇಶದ ಜಿಡಿಪಿಗೆ ಶೇ 7ಕ್ಕೂ ಅಧಿಕ ಕೊಡಗು ನೀಡುವ ವಲಯ ಇದಾಗಿದೆ. ಶೇ 28ರಷ್ಟು ಜಿಎಸ್‌ಟಿಯ ಕಾರಣದಿಂದಾಗಿ ಉದ್ಯಮ ಹಲವಾರು ಸವಾಲುಗಳನ್ನು ಎದುರಿಸುವಂತಾಗಿದೆ. ಒಂದೇ ಮಾದರಿ ಜಿಎಸ್‌ಟಿ ನೀತಿಯ ಅಗತ್ಯವಿದೆ ಎಂದು ಸರ್ಕಾರಕ್ಕೆ ಎಸಿಎಂಎ ಹೇಳಿದೆ.

ವಾಹನಗಳ ಬಿಡಿ ಭಾಗಗಳ ಉತ್ಪಾದನಾ ವಲಯ ಹೊಸ ಹೊಸ ತಂತ್ರಜ್ಞಾನವನ್ನು ಆಳವಡಿಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ದೇಶಿಯ ಮತ್ತು ವಿದೇಶಿ ಬೇಡಿಕೆಯನ್ನು ಪೂರೈಸಲು ಪ್ರಯತ್ನ ನಡೆಸುತ್ತಿದೆ. ವಲಯದ ಭವಿಷ್ಯದ ಅಗತ್ಯತೆಗಾಗಿ ಏಕರೂಪದ ಜಿಎಸ್‌ಟಿ ನೀತಿ ಬೇಕು ಎಂದು ಸರ್ಕಾರಕ್ಕೆ ವಿವರಣೆಯನ್ನು ನೀಡಿದೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ತಯಾರಿಕೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆ ಬಿಡಿ ಭಾಗಗಳ ಉತ್ಪಾದನಾ ವಲಯಕ್ಕೆ ಪೂರಕವಾಗಿದೆ. ಇದರಿಂದಾಗಿ ದೇಶಿಯ ಮತ್ತು ವಿದೇಶಿ ಬೇಡಿಕೆಗಳಿಗೆ ತಕ್ಕಂತೆ ಕೆಲಸ ಮಾಡಲು ಅನುಕೂಲವಾಗಿದೆ ಎಂದು ಹೇಳಿದೆ.

ಕೋವಿಡ್ ಪರಿಸ್ಥಿತಿಯ ಬಳಿಕ ವಲಯ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ತೆರಿಗೆ ಹೆಚ್ಚಳ, ಬೇಡಿಕೆ ಕುಸಿತ ಮುಂತಾದ ಪರಿಸ್ಥಿತಿಯಿಂದಾಗಿ ಉತ್ಪಾದನಾ ವಲಯದಲ್ಲಿ ಹಲವಾರು ಉದ್ಯಮಿಗಳು ಬಾಗಿಲು ಹಾಕುವ ಹಂತಕ್ಕೆ ತಲುಪಿದ್ದಾರೆ ಎಂದು ಬಜೆಟ್ ಪೂರ್ವ ಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದೆ.

ಯಂತ್ರೋಪಕರಣ ಉದ್ಯಮದಲ್ಲಿ 25 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡುವ ಉತ್ಪಾದನಾ ಕಂಪನಿಗಳಿಗೆ ಶೇಕಡಾ 15 ರಷ್ಟು ಹೂಡಿಕೆ ಭತ್ಯೆಯನ್ನು ಮರುಪರಿಚಯಿಸಬೇಕು. ಇದು ಹೂಡಿಕೆದಾರರನ್ನು ಪ್ರೇರೆಪಿಸುತ್ತದೆ ಎಂದು ಎಸಿಎಂಎ ವಿವರಣೆ ನೀಡಿದೆ.

ವಾಹನ ಕ್ಷೇತ್ರದ ಪುನಶ್ಚೇತನಕ್ಕೆ ತೆರಿಗೆ ಕಡಿತ, ಮಾರಾಟಗಾರರಿಗೆ ಮತ್ತು ಖರೀದಿದಾರರಿಗೆ ಸುಲಭವಾಗಿ ಸಾಲ ಸೌಲಭ್ಯ ಮುಂತಾದ ಕ್ರಮಗಳನ್ನು ಘೋಷಣೆ ಮಾಡಿದರೆ ಸಹಾಯಕವಾಗಲಿದೆ. ಕೋವಿಡ್ ಸಂದರ್ಭದಿಂದ ವಾಹನ ಕ್ಷೇತ್ರ ಭಾರೀ ಸಂಕಷ್ಟಕ್ಕೆ ಸಿಲುಕಿದೆ.

ವಾಹನಗಳ ಖರೀದಿ, ಮಾರಾಟ, ಬಿಡಿ ಭಾಗಗಳ ಉತ್ಪಾದನೆ, ಸಾಗಣೆ ಸೇರಿದಂತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಮಾರು 3.5 ಕೋಟಿ ಜನರಿಗೆ ಉದ್ಯೋಗ ಒದಗಿಸಿದೆ. ಕೋವಿಡ್ ಪರಿಸ್ಥಿತಿ ಬಳಿಕ ಬಿಡಿ ಭಾಗಗಳ ಉತ್ಪಾದನಾ ವಲಯ ಇನ್ನೂ ಚೇತರಿಕೆ ಕಂಡಿಲ್ಲ.

Recommended Video

ಭಾರತೀಯ ಸೇನೆಯಿಂದ ಸ್ಪೆಷಲ್ ವಿಡಿಯೋ ಬಿಡುಗಡೆ | Oneindia Kannada

ಜನವರಿ 31ರಂದು ಬಜೆಟ್ ಅಧಿವೇಶನ ಆರಂಭವಾಲಿದೆ. ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.

English summary
In a pre budget meeting auto components industry body (ACMA) urged the government for a uniform GST rate of 18 per cent on all auto parts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X