ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2022; 400 ವಂದೇ ಭಾರತ್ ರೈಲುಗಳ ನಿರ್ಮಾಣ

|
Google Oneindia Kannada News

ನವದೆಹಲಿ, ಫೆಬ್ರವರಿ 01; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಭಾಷಣದಲ್ಲಿ 400 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ಬಜೆಟ್ ಭಾಷಣದಲ್ಲಿ ರೈಲ್ವೆ ವಲಯದಲ್ಲಿ ಪಿಎಂ ಗತಿಶಕ್ತಿ ಯೋಜನೆಯಡಿ ಹಾಕಿಕೊಂಡಿರುವ ಕಾರ್ಯಕ್ರಮಗಳ ವಿವರಗಳನ್ನು ಸಚಿವರು ನೀಡಿದರು. ನಿರ್ಮಲಾ ಸೀತಾರಾಮನ್ ಮುಂದಿನ ಮೂರು ವರ್ಷಗಳಲ್ಲಿ 400 ಆಧುನಿಕ ವಂದೇ ಭಾರತ್ ರೈಲುಗಳನ್ನು ಅಭಿವೃದ್ಧಿಗೊಳಿಸಿ ತಯಾರು ಮಾಡಲಾಗುತ್ತದೆ ಎಂದರು.

Budget 2022 Live Updates: 4ನೇ ಬಾರಿ ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್ Budget 2022 Live Updates: 4ನೇ ಬಾರಿ ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್

"ಒನ್ ಸ್ಟೇಷನ್ ಒನ್ ಪ್ರಾಡಕ್ಟ್' ಮಾದರಿಯನ್ನು ಜಾರಿಗೆ ತರಲಾಗುತ್ತದೆ. ಈ ಮೂಲಕ ಸ್ಥಳೀಯ ವ್ಯಾಪಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಮುಂದಿ ಮೂರು ವರ್ಷಗಳಲ್ಲಿ 100 ಕಾರ್ಗೋ ಟರ್ಮನಿಲ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

 Budget 2022; ಆತ್ಮ ನಿರ್ಭರ ಭಾರತದಡಿ 6 ಲಕ್ಷ ಉದ್ಯೋಗ ಸೃಷ್ಟಿ Budget 2022; ಆತ್ಮ ನಿರ್ಭರ ಭಾರತದಡಿ 6 ಲಕ್ಷ ಉದ್ಯೋಗ ಸೃಷ್ಟಿ

Budget 2022 ; 400 Vande Bharat Trains Will Be Manufactured

ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 'ಪಿಎಂಗತಿಶಕ್ತಿ' ಬಹು ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ಗೆ 2021 ಅಕ್ಟೋಬರ್ 13 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಚಾಲನೆ ನೀಡಿದ್ದರು.

Budget 2022; ಪಿಎಂ ಗತಿಶಕ್ತಿ ರಾಷ್ಟ್ರೀಯ ಯೋಜನೆ ವಿವರಗಳು Budget 2022; ಪಿಎಂ ಗತಿಶಕ್ತಿ ರಾಷ್ಟ್ರೀಯ ಯೋಜನೆ ವಿವರಗಳು

'ಪಿಎಂ ಗತಿಶಕ್ತಿ' ಯೋಜನೆಯು ಹಿಂದಿನ ಸಮಸ್ಯೆಗಳನ್ನು ಪ್ರಮುಖ ಮೂಲಸೌಕರ್ಯಗಳ ವ್ಯವಸ್ಥೆಯಲ್ಲಿನ ದೋಷಗಳನ್ನು ಸಮಗ್ರ ಯೋಜನೆ ಮೂಲಕ ಪರಿಹರಿಸಲಿದೆ. ಪ್ರತ್ಯೇಕವಾಗಿ ಯೋಜನೆ, ವಿನ್ಯಾಸ ಮಾಡುವುದರ ಬದಲಾಗಿ, ಯೋಜನೆಗಳನ್ನು ಸಮಾನ ದೃಷ್ಟಿಯೊಂದಿಗೆ ವಿನ್ಯಾಸ ಮಾಡಿ ಅನುಷ್ಠಾನಗೊಳಿಸಲಾಗುತ್ತದೆ.

Recommended Video

ಇವತ್ತು ನಿರ್ಮಲಾ ಸೀತಾರಾಮನ್ ಎಷ್ಟು ಗಂಟೆಗಳ ಕಾಲ ಬಜೆಟ್ ಮಂಡಿಸ್ತಾರೆ? | Oneindia Kannada | Oneindia Kannada

ಸಮಗ್ರತೆ, ಆದ್ಯತೆ, ಅತ್ಯಂತ ಪ್ರಶಸ್ತವಾಗಿಸುವುದು, ಸಮನ್ವಯತೆ, ವಿಶ್ಲೇಷಣಾತ್ಮಕತೆ, ಕ್ರಿಯಾತ್ಮಕತೆ ಎಂಬ ಆರು ಪ್ರಮುಖ ಅಂಶಗಳನ್ನು ಈ ಪಿಎಂ ಗತಿಶಕ್ತಿ ಯೋಜನೆ ಒಳಗೊಂಡಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು; ರೈಲ್ವೆಯ ಮೇಕ್ ಇನ್ ಇಂಡಿಯಾ ಪ್ರಯತ್ನದ ಭಾಗವಾಗಿದೆ ಭಾರತದ ಸೆಮಿ ಹೈಸ್ಪೀಡ್ ರೈಲು. ಇದಕ್ಕೆ 'ವಂದೇ ಭಾರತ್ ಎಕ್ಸ್‌ಪ್ರೆಸ್' ಎಂದು ನಾಮಕರಣ ಮಾಡಲಾಗಿದೆ. ದೆಹಲಿ-ಕಾನ್ಪುರ-ಅಲಹಾಬಾದ್-ವಾರಣಾಸಿ ಮಾರ್ಗದ ರೈಲಿಗೆ 2019ರ ಫೆಬ್ರವರಿಯಲ್ಲಿ ಚಾಲನೆ ನೀಡಲಾಯಿತು. ಇದು ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವಾಗಿತ್ತು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಗರಿಷ್ಠ ವೇಗ ಗಂಟೆಗೆ 160 ಕಿ. ಮೀ.ಗಳು. ಶತಾಬ್ದಿ ರೈಲಿನಂತಹ ಪ್ರಯಾಣವನ್ನು ಇದರ ಮೂಲಕ ಮಾಡಬಹುದಾಗಿದೆ. ಆದರೆ ಈ ರೈಲು ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತದೆ.

ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವದೆಹಲಿ ಮತ್ತು ವಾರಣಾಸಿ ನಡುವಿನ ಅಂತರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ. ಇದರ ಎಲ್ಲಾ ಕೋಚ್‌ಗಳು ಸ್ವಯಂಚಾಲಿತ ಬಾಗಿಲು ವ್ಯವಸ್ಥೆ ಹೊಂದಿದೆ. ಜಿಪಿಎಸ್ ಆಧಾರಿತ ಆಡಿಯೋ, ದೃಶ್ಯಗಳನ್ನು ಪ್ರಯಾಣಿಕರಿಗೆ ನೀಡುವ ವ್ಯವಸ್ಥೆ ಇದೆ.

ರೈಲಿನಲ್ಲಿ ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್‌ಸ್ಪಾಟ್ ವ್ಯವಸ್ಥೆ ಇದೆ ಮತ್ತು ಅತ್ಯಂತ ಆರಾಮದಾಯಕ ಆಸನಗಳನ್ನು ರೈಲು ಒಳಗೊಂಡಿದೆ. ಜೈವಿಕ ಶೌಚಾಲಯಗಳನ್ನು ರೈಲು ಒಳಗೊಂಡಿದೆ. ಪ್ರತಿ ಕೋಚ್‌ನಲ್ಲಿ ಬಿಸಿ ಊಟ, ಬಿಸಿ ಮತ್ತು ತಂಪು ಪಾನೀಯಗಳನ್ನು ಪೂರೈಸಲು ಪ್ಯಾಂಟ್ರಿ ಇದೆ.

ಈ ರೈಲು 16 ಹವಾನಿಯಂತ್ರಿತ ಕೋಚ್‌ ಒಳಗೊಂಡಿದೆ. 2 ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ ಇದೆ. ರೈಲಿನ ಒಟ್ಟು ಆಸನ ಸಾಮರ್ಥ್ಯ 1,128 ಪ್ರಯಾಣಿಕರು. ಇದು ಸಾಂಪ್ರದಾಯಿಕ ಶತಾಬ್ದಿಗಿಂತ ಹೆಚ್ಚಿನದಾಗಿದೆ, ಹಸಿರು ಬಣ್ಣದ ಈ ರೈಲಿನ ಎಕ್ಸ್‌ಪ್ರೆಸ್ ಕೋಚ್‌ಗಳಲ್ಲಿ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಶೇ 30 ರಷ್ಟು ವಿದ್ಯುತ್ ಶಕ್ತಿ ಉಳಿಸುತ್ತದೆ.

ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಲಕ್ಷಣವಾಗಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಈ ರೈಲುಗಳ ಸಂಪೂರ್ಣ ಆಂತರಿಕ ವಿನ್ಯಾಸ ಮತ್ತು ತಯಾರಿಕೆ ಮಾಡಿದೆ. ಪ್ರಧಾನಮಂತ್ರಿಗಳ ಮೇಕ್ ಇನ್ ಇಂಡಿಯಾ ದೃಷ್ಟಿಕೋನಕ್ಕೆ ಅನುಗುಣವಾಗಿ, ರೈಲಿನ ಪ್ರಮುಖ ವ್ಯವಸ್ಥೆಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ.

English summary
Budget 2022 for jobs : Budget 2022 for railways : In a 2022-23 budget speech fiance minister Nirmala Sitharaman said under PM Gati Shakti plan 400 new-generation Vande Bharat trains will be developed and manufactured in next 3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X