ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ಕ್ಷೇತ್ರಕ್ಕೆ 6,000 ಕೋಟಿ ರೂ. ಅನುದಾನ ಕಡಿತ: ಮೂರು ವರ್ಷಗಳಲ್ಲಿಯೇ ಅತಿ ಕಡಿಮೆ ಹಂಚಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 2: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ 2021ರ ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಹಾಗೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಕ್ಷೇತ್ರಗಳಿಗೆ ಅನುದಾನ ಕಡಿತ ಕೂಡ ಮಾಡಲಾಗಿದೆ. ಈ ಬಾರಿ ಅನುದಾನ ಕಡಿತದ ಶಾಪಕ್ಕೆ ಒಳಗಾಗಿರುವ ಪ್ರಮುಖ ವಲಯಗಳಲ್ಲಿ ಶಿಕ್ಷಣ ಕೂಡ ಒಂದು.

2020ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಆದರೆ 2021ರಲ್ಲಿ ಅದು 93,224 ಕೋಟಿ ರೂ.ಗೆ ಇಳಿದಿದೆ. ಅಂದರೆ 6.076 ಕೋಟಿ ರೂ ಹಂಚಿಕೆ ಕಡಿತವಾಗಿದೆ. ಈ ಬಾರಿಯ ಶಿಕ್ಷಣ ಬಜೆಟ್ ಕಳೆದ ಮೂರು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮೊತ್ತದ್ದು.

ಬಜೆಟ್ 2021: ಲಾಭ ಸಿಕ್ಕಿದ್ದು ಯಾರಿಗೆ? ಕಳೆದುಕೊಂಡವರು ಯಾರು?ಬಜೆಟ್ 2021: ಲಾಭ ಸಿಕ್ಕಿದ್ದು ಯಾರಿಗೆ? ಕಳೆದುಕೊಂಡವರು ಯಾರು?

ಇದರಲ್ಲಿ ಶಾಲಾ ಶಿಕ್ಷಣಕ್ಕೆ ಅತಿ ದೊಡ್ಡ ಬಜೆಟ್ ಕಡಿತವಾಗಿದೆ. ಸುಮಾರು 5,000 ಕೋಟಿ ರೂ ಅನುದಾನ ಕಡಿಮೆ ಮಾಡಲಾಗಿದೆ. ಹಾಗೆಯೇ ಉನ್ನತ ಶಿಕ್ಷಣ ವಿಭಾಗದ ಅನುದಾನವನ್ನು ಅಂದಾಜು 1,000 ಕೋಟಿ ರೂದಷ್ಟು ತಗ್ಗಿಸಲಾಗಿದ್ದು, 38,350 ಕೋಟಿ ರೂ.ಗೆ ಇಳಿಕೆಯಾಗಿದೆ. ಮುಂದೆ ಓದಿ.

ಶಿಕ್ಷಣ ಸಚಿವಾಲಯದ ಹಂಚಿಕೆ

ಶಿಕ್ಷಣ ಸಚಿವಾಲಯದ ಹಂಚಿಕೆ

ಶಿಕ್ಷಣ ಸಚಿವಾಲಯಕ್ಕೆ 93,224.31 ಕೋಟಿ ರೂ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿನ ಪರಿಷ್ಕೃತ ಅಂದಾಜಿಗಿಂತ ಇದು 8,100 ಕೋಟಿ ರೂ ಹೆಚ್ಚಳವಾಗಿದೆ. 2020-21ರ ಹಣಕಾಸು ವರ್ಷದಲ್ಲಿ ಸಚಿವಾಲಯಕ್ಕೆ ಈ ಮೊದಲು 99,311.52 ಕೋಟಿ ರೂ ಮೀಸಲಿಡಲಾಗಿತ್ತು. ಆದರೆ ದೇಶಕ್ಕೆ ಕೊರೊನಾ ವೈರಸ್ ಸೋಂಕಿನ ಹೊಡೆತ ಎದುರಾಗಿದ್ದರಿಂದ ಮತ್ತು ವೈರಸ್ ಹರಡುವುದನ್ನು ತಡೆಯಲು ಶಾಲೆಗಳನ್ನು ಮುಚ್ಚಿದ್ದರಿಂದ ಅದನ್ನು 85,089.07 ಕೋಟಿ ರೂ.ಗೆ ಇಳಿಸಲಾಗಿದೆ.

Budget 2021: ಯಾವ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್?Budget 2021: ಯಾವ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್?

ಕೇಂದ್ರೀಯ ಶಾಲೆಗಳಿಗೆ ಅನುದಾನ

ಕೇಂದ್ರೀಯ ಶಾಲೆಗಳಿಗೆ ಅನುದಾನ

ಮಧ್ಯಾಹ್ನದ ಬಿಸಿಯೂಟ ಯೋಜನೆಯ ವೆಚ್ಚವನ್ನು 500 ಕೋಟಿ ರೂದಷ್ಟು ಹೆಚ್ಚಿಸಲಾಗಿದ್ದು, ಅದು 11,500 ಕೋಟಿ ರೂ.ಗೆ ಏರಿಸಲಾಗಿದೆ. ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯದಂತಹ ಕೇಂದ್ರೀಯ ಶಾಲೆಗಳ ಹಂಚಿಕೆಯನ್ನು ಕ್ರಮವಾಗಿ 1,284 ಕೋಟಿ ರೂ ಮತ್ತು 500 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಸಮಗ್ರ ಶಿಕ್ಷಾ ಅಭಿಯಾನದ ಇಳಿಕೆ

ಸಮಗ್ರ ಶಿಕ್ಷಾ ಅಭಿಯಾನದ ಇಳಿಕೆ

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಯೋಜನೆಯ ಸಮಗ್ರ ಶಿಕ್ಷಾ ಅಭಿಯಾನದಲ್ಲಿ 38,750.50 ಕೋಟಿ ರೂ.ದಿಂದ 31,050.16 ಕೋಟಿ ರೂ ಹಂಚಿಕೆಯನ್ನು ಇಳಿಕೆ ಮಾಡಲಾಗಿದೆ. ಎನ್‌ಜಿಒಗಳು, ಖಾಸಗಿ ಶಾಲೆಗಳು, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ 100 ಹೊಸ ಸೈನಿಕ ಶಾಲೆಗಳ ಸ್ಥಾಪನೆಯನ್ನು ಸರ್ಕಾರ ಘೋಷಿಸಿದೆ.

ಬಜೆಟ್ 2021: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳುಬಜೆಟ್ 2021: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳು

ಉತ್ತೇಜನಾ ಯೋಜನೆ ನಿಧಿ

ಉತ್ತೇಜನಾ ಯೋಜನೆ ನಿಧಿ

ಬಾಲಕಿಯರ ಪ್ರೌಢಶಿಕ್ಷಣಕ್ಕಾಗಿ ರಾಷ್ಟ್ರೀಯ ಉತ್ತೇಜನಾ ಯೋಜನೆಯ ನಿಧಿಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ 110 ಕೋಟಿ ರೂ ದಿಂದ ಕೇವಲ 1 ಕೋಟಿ ರೂಪಾಯಿಗೆ ಇಳಿಸಲಾಗಿದೆ.

English summary
Budget 2021: Union government has reduced tha spending on education by Rs 6,076 crores from Rs 99,300 to Rs 93,224.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X