ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2021: ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?

|
Google Oneindia Kannada News

ನವದೆಹಲಿ, ಫೆಬ್ರುವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ 2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಹಲವು ಕ್ಷೇತ್ರಗಳಿಗೆ ಅನುದಾನಗಳನ್ನು ಘೋಷಿಸಿದ್ದಾರೆ.

Recommended Video

Union Budget 2021: ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ | Oneindia Kannada

2020ರಲ್ಲಿ ಕೊರೊನಾ ಸೋಲಿಸಲು 27.1 ಲಕ್ಷ ಕೋಟಿ ಮಿನಿ ಬಜೆಟ್ 2020ರಲ್ಲಿ ಕೊರೊನಾ ಸೋಲಿಸಲು 27.1 ಲಕ್ಷ ಕೋಟಿ ಮಿನಿ ಬಜೆಟ್

ಮೋದಿ ಸರ್ಕಾರದ ಈ ಒಂಬತ್ತನೇ ಬಜೆಟ್ ನಲ್ಲಿ ಈ ಬಾರಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದ ವರ್ಷದಿಂದಲೂ ಜನರ ಆರ್ಥಿಕ ಸ್ಥಿತಿಗತಿ ಕುಂಠಿತವಾಗಿದ್ದು, ಈ ಬಾರಿ ಸಾಮಾನ್ಯ ಜನರಿಗೆ ಬಜೆಟ್ ಯಾವ ರೀತಿ ನೆರವಾಗಲಿದೆ ಎಂಬ ಬಗ್ಗೆ ಕುತೂಹಲ ಉಂಟಾಗಿತ್ತು.

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಸಾಮಾನ್ಯ ಜನರಿಗೆ ಏನು ಕೊಡುಗೆ ನೀಡಿದ್ದಾರೆ? ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಯಾವುದರ ಬೆಲೆ ಏರಿಕೆಯಾಗಲಿದೆ, ಯಾವ ವಸ್ತುವಿನ ಬೆಲೆ ಇಳಿಕೆಯಾಗಿದೆ? ಇಲ್ಲಿದೆ ವಿವರ...

 ದುಬಾರಿಯಾಗಿರುವುದು ಯಾವುದು?

ದುಬಾರಿಯಾಗಿರುವುದು ಯಾವುದು?

* ಪೆಟ್ರೋಲ್, ಡೀಸೆಲ್
* ಕಾಬೂಲ್ ಕಡಲೆ, ಸೇಬು
* ಮದ್ಯ (ಶೇ.100ರಷ್ಟು ಕೃಷಿ ಸೆಸ್)
* ಕಲ್ಲಿದ್ದಲು, ಲಿಗೈಟ್, ಪೀಟ್
* ಬಟಾಣಿ (ಶೇ.40 ಕೃಷಿ ಸಸ್)
* ವಾಹನ ಬಿಡಿಭಾಗಗಳು
* ಹುರಿಗಡಲೆ, ಹತ್ತಿ, ಸೂರ್ಯಕಾಂತಿ(ಹುರಿಗಡಲೆ ಮೇಲೆ ಶೇ.50ರಷ್ಟು ಸೆಸ್)
* ಸೇಬು ಹಣ್ಣು(ಶೇ.35 ಕೃಷಿ ಸೆಸ್)
* ವಿದೇಶಿ ಮೊಬೈಲ್
* ಅಡುಗೆ ಎಣ್ಣೆ(ಶೇ.20 ಸೆಸ್)
* ವಿದ್ಯುತ್ ಸಾಮಗ್ರಿಗಳು, ಮೊಬೈಲ್, ಚಾರ್ಜರ್
*ರಸಗೊಬ್ಬರ
* ಲೆದರ್ ಶೂ
* ಮೀನಿನ ಆಹಾರದ ಮೇಲೆ ಕಸ್ಟಮ್ ಸುಂಕ ಶೇ.5ರಿಂದ 15ರ ವರೆಗೆ ಏರಿಕೆ

 ಯಾವ ವಸ್ತುಗಳ ಬೆಲೆ

ಯಾವ ವಸ್ತುಗಳ ಬೆಲೆ

* ದೇಶಿ ಪಾದರಕ್ಷೆ
* ಲೋಹ, ಕಬ್ಬಿಣ
* ಚಿನ್ನ, ಬೆಳ್ಳಿ
* ನೈಲಾನ್ ಬಟ್ಟೆಗಳು, ತಾಮ್ರದ ಸಾಮಗ್ರಿಗಳು
* ವಿಮೆಗಳು
* ಶೂ
* ಡ್ರೈ ಕ್ಲೀನಿಂಗ್
* ಕೃಷಿ ಸಾಮಗ್ರಿಗಳು

 ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್

ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್

ಕೇಂದ್ರ ಬಜೆಟ್ ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಸೆಸ್ ವಿಧಿಸಲಾಗಿದೆ. ಪೆಟ್ರೋಲ್ ಮೇಲೆ ಲೀಟರಿಗೆ 2.5 ರೂ ಹಾಗೂ ಡೀಸೆಲ್ ಗೆ 4 ರೂ ಸೆಸ್ ವಿಧಿಸಲಾಗಿದೆ. ಕೆಲವು ಸರಕುಗಳ ಮೇಲೆ ಮೂಲಸೌಕರ್ಯ ಅಭಿವೃದ್ಧಿ ಸೆಸ್ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

 ಉಜ್ವಲ ಯೋಜನೆ ವಿಸ್ತರಣೆ

ಉಜ್ವಲ ಯೋಜನೆ ವಿಸ್ತರಣೆ

ಬಜೆಟ್ ನಲ್ಲಿ ಉಚಿತ ಅನಿಲ ಗ್ಯಾಸ್ ವಿತರಣೆ ಕುರಿತು ಹೇಳಿಕೆ ನೀಡಿದ್ದು, ದೇಶದಲ್ಲಿ 8 ಕೋಟಿಗೂ ಹೆಚ್ಚು ಮಹಿಳೆಯರು ಉಜ್ವಲ ಯೋಜನೆಯಡಿ ಅನಿಲ ಗ್ಯಾಸ್ ಸೌಲಭ್ಯ ಪಡೆಯುತ್ತಿದ್ದಾರೆ. ಈಗ ಮತ್ತೆ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲ ಯೋಜನೆ ವಿಸ್ತರಿಸಲಾಗುವುದು ಎಂದು ತಿಳಿಸಿದರು. ನಗರ ಅನಿಲ ವಿತರಣೆಗೆ ಮುಂದಿನ 3 ವರ್ಷಗಳಲ್ಲಿ ಇನ್ನೂ 100 ಜಿಲ್ಲೆಗಳನ್ನು ಸೇರಿಸಲಾಗುವುದು ಎಂದರು.

English summary
Budget 2021: Here is a complete list of what gets costly and what gets cheaper. Take a look,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X