ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 01ರಂದು 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ

|
Google Oneindia Kannada News

ನವದೆಹಲಿ, ಜನವರಿ 09: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 01ರಂದು ಮಂಡನೆಯಾಗಲಿದೆ. ಈ ಬಾರಿ ಎರಡು ಹಂತದಲ್ಲಿ ಬಜೆಟ್ ಅಧಿವೇಶನ ನಡೆಸಲು ಕೇಂದ್ರ ಸಚಿವ ಸಂಪುಟದ ಸಂಸದೀಯ ವ್ಯವಹಾರಗಳ ಸಮಿತಿ ಶಿಫಾರಸು ಮಾಡಿದೆ. ಸಂಸತ್ ರಜೆ ಇರುವ ದಿನ ಬಜೆಟ್ ಮಂಡನೆ ನಡೆಯುವುದೇ? ಇಲ್ಲವೇ? ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

2020-21 ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಮಂಡನೆಯಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಆರ್ಥಿಕ ಸಮೀಕ್ಷೆಯನ್ನು ಜನವರಿ 31 ರಂದು ಬಿಡುಗಡೆ ಮಾಡಲು ಕೇಂದ್ರ ನಿರ್ಧರಿಸಿದೆ.

ಎರಡು ಹಂತದಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11 ಹಾಗೂ ಎರಡನೇ ಹಂತ ಮಾರ್ಚ್ 02 ರಿಂದ ಏಪ್ರಿಲ್ 03ರ ತನಕ ನಡೆಯಲಿದೆ. ಈ ಅವಧಿಯಲ್ಲಿ ಸಂಸದೀಯ ಸಮಿತಿಗಳು ವಿವಿಧ ಇಲಾಖೆಗೆ ಮಂಜೂರಾದ ಬಜೆಟ್ ಅನುದಾನವನ್ನು ಪರಿಶೀಲನೆ ನಡೆಸಲಿವೆ.

Budget 2020 session from Jan 31; Union Budget on Feb 1

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಫೆಬ್ರವರಿ ಕೊನೆಯ ವಾರ ಬಜೆಟ್ ಮಂಡನೆಯಾಗುತ್ತಿತ್ತು. ಭಾರತೀಯ ಜನತಾ ಪಕ್ಷ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಫೆಬ್ರವರಿ 1 ರಂದು ಬಜೆಟ್ ಮಂಡನೆಯ ಸಂಪ್ರದಾಯ ಅನುಸರಿಸಿಕೊಂಡು ಬಂದಿದೆ.

ಬಜೆಟ್ ನಿರೀಕ್ಷೆ: ಸರಕು ಮತ್ತು ಸೇವೆಗಳ ಬಳಕೆಗೆ ಉತ್ತೇಜನ ನೀಡುವುದು, ವೈಯಕ್ತಿಕ ಆದಾಯ ತೆರಿಗೆಯಲ್ಲಿ ವಿನಾಯತಿ ನೀಡುವುದು ಸೇರಿದಂತೆ ಹಲವು ಪ್ರಮುಖ ಅಂಶಗಳ ಬಗ್ಗೆ ಕೇಂದ್ರ ಬಜೆಟ್ ಗೂ ಮುನ್ನ ಚರ್ಚೆ ನಡೆದಿದೆ.

ವೈಯಕ್ತಿಕ ಆದಾಯ ತೆರಿಗೆ ಮಿತಿ ಬದಲಾವಣೆಗೆ ಮುಂದಾಗಿದೆ. ಹಾಲಿ 5 ಲಕ್ಷ ರೂ. ನಿಂದ 10ಲಕ್ಷ ರೂ. ವರೆಗಿನ ಆದಾಯಕ್ಕೆ ಶೇಕಡ 20ರಷ್ಟು ತೆರಿಗೆಯನ್ನು ಶೇ. 10 ಪ್ರಮಾಣಕ್ಕೆ ತಗ್ಗಿಸುವ ಬಗ್ಗೆ ಚಿಂತನೆ ಇದೆ.

English summary
The Cabinet Committee on Parliamentary Affairs has recommended holding the Budget Session in two phases from January 31 to April 3, with the Union Budget to be presented on February 1, sources said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X