ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ Live Updates: ತೈಲ, ಚಿನ್ನ, ಮದ್ಯ ದುಬಾರಿ

|
Google Oneindia Kannada News

Recommended Video

      lok sabha budget 2019

      ನವದೆಹಲಿ, ಜುಲೈ 5: ಭರ್ಜರಿ ಬಹುಮತದೊಂದಿಗೆ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಎನ್‌ಡಿಎ ಸರ್ಕಾರದ ಮೊದಲ ಬಜೆಟ್‌ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಜುಲೈ 5) ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ.

      ಬಜೆಟ್ ಮಂಡನೆಯ ಮುನ್ನದಿನವಾದ ಗುರುವಾರ ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಮಣಿಯನ್ ಅವರು ಸಂಸತ್‌ಗೆ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಿದ್ದರು. ಅದರ ಅನ್ವಯ ಭಾರತವು ಶೇ 7ರ ಜಿಡಿಪಿ ಪ್ರಗತಿಯನ್ನು ನಿರೀಕ್ಷಿಸಿದೆ. ಅದನ್ನು ಸಾಧಿಸಲು ಈ ಬಾರಿಯ ಬಜೆಟ್‌ನಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

      ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ? ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

      ಪ್ರಸಕ್ತ ಸಾಲಿನ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇವುಗಳಲ್ಲಿ ಜಿಡಿಪಿ ಪ್ರಗತಿ, 2025ಕ್ಕೆ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯ ದೇಶವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಈಡೇರಿಸಲು ತೆಗೆದುಕೊಳ್ಳುವ ಕ್ರಮಗಳು, ತೆರಿಗೆ ಸಂಗ್ರಹದಲ್ಲಿನ ಬದಲಾವಣೆಗಳು, ಕೃಷಿ ಕ್ಷೇತ್ರಕ್ಕೆ ಆದ್ಯತೆ, ರೈಲ್ವೆ ಯೋಜನೆಗಳು, ನಿರುದ್ಯೋಗ ಸಮಸ್ಯೆಗೆ ಪರಿಹಾರ, ಆರೋಗ್ಯ, ಮೂಲಭೂತ ಸೌಕರ್ಯದ ವೃದ್ಧಿ ಸೇರಿದಂತೆ ಇತರೆ ಅನೇಕ ಅಂಶಗಳು ಸೇರಿಕೊಂಡಿವೆ.

      budget-2019-live-update-nda-finance-minister-nirmala-sitharaman

      ಅಲ್ಲದೆ, ದೇಶದ ಅನೇಕ ಕಡೆ ಬರ ಪರಿಸ್ಥಿತಿ ಉಂಟಾಗಿದ್ದು, ನೀರಿನ ಕೊರತೆ ನೀಗಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ. ಅಗತ್ಯ ವಸ್ತುಗಳು, ಐಷಾರಾಮಿ ಸರಕುಗಳ ಬೆಲೆ ಏರಿಕೆ ಮತ್ತು ಇಳಿಕೆ, ತೆರಿಗೆ, ಅದಾಯ ತೆರಿಗೆಯಲ್ಲಿ ಬದಲಾವಣೆಗಳ ಬಗ್ಗೆಯೂ ಹಲವು ನಿರೀಕ್ಷೆಗಳಿವೆ.

      ಬಜೆಟ್ ನಲ್ಲಿ ಜೇಬಿಗೆ ಭಾರ ಯಾವುದು, ಹಗುರ ಯಾವುದು? ಬಜೆಟ್ ನಲ್ಲಿ ಜೇಬಿಗೆ ಭಾರ ಯಾವುದು, ಹಗುರ ಯಾವುದು?

      ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಮೊದಲ ಬಜೆಟ್‌ನ ನೇರ ಪ್ರಸಾರದ ಮಾಹಿತಿ ಇಲ್ಲಿವೆ.

      Newest FirstOldest First
      5:23 PM, 5 Jul

      ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ, ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ ಸಚಿವರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
      5:23 PM, 5 Jul

      ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ, ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ ಸಚಿವರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
      5:16 PM, 5 Jul

      ವಿಡಿಯೋ ರೆಕಾರ್ಡರ್‌ಗಳ ಮೇಲಿನ ಮೂಲ ಸುಂಕ ತೆರಿಗೆ ಶೇ 20ರಷ್ಟು ತುಟ್ಟಿಯಾಗಲಿದೆ.
      5:16 PM, 5 Jul

      ನ್ಯೂಸ್‌ಪ್ರಿಂಟ್ ಕಾಗದಗಳ ಮೇಲಿನ ಮೂಲ ಸುಂಕ ತೆರಿಗೆ ಶೇ 10ರಷ್ಟು ಹೆಚ್ಚಳವಾಗಲಿದೆ.
      5:16 PM, 5 Jul

      ಆಪ್ಟಿಕಲ್ ಫೈಬರ್, ಕೇಬಲ್ ಮೇಲಿನ ಮೂಲ ಸುಂಕ ತೆರಿಗೆ ಶೇ 15ರಷ್ಟು ಹೆಚ್ಚಳ.
      5:16 PM, 5 Jul

      ನರೇಂದ್ರ ಮೋದಿ ಸರ್ಕಾರವು ಸಹಕಾರಿ ಗಣತಂತ್ರದ ಪರಿಕಲ್ಪನೆಯಲ್ಲಿ ನಂಬಿಕೆ ಹೊಂದಿಲ್ಲ ಎಂದು ಮಾಜಿ ಸಚಿವ ಪಿ. ಚಿದಂಬರಂ ಟೀಕಿಸಿದರು.
      5:15 PM, 5 Jul

      ಸೆರಮಿಕ್ ಟೈಲ್ಸ್‌ಗಳ ಮೇಲಿನ ಮೂಲ ಸುಂಕ ತೆರಿಗೆ ಶೇ 15ರಷ್ಟು ಹೆಚ್ಚಳ
      Advertisement
      5:09 PM, 5 Jul

      ಬಜೆಟ್ ಪ್ರತಿಗಳನ್ನು ಸಾಗಿಸಲು ನಾನು ಲೆದರ್ ಬ್ಯಾಗ್‌ಅನ್ನು ಏಕೆ ಬಳಸಲಿಲ್ಲ? ಬ್ರಿಟಿಷರ ಮನಸ್ಥಿತಿಯಿಂದ ನಾವು ಹೊರಬರಲು ಇದು ಸರಿಯಾದ ಸಮಯ ಎಂದು ನನಗೆ ಅನಿಸಿತು. ನಮ್ಮದೇ ರೀತಿಯನ್ನು ನಾವು ಪಾಲಿಸಬೇಕು. ಇದನ್ನು ಹೊತ್ತುಕೊಂಡು ಹೋಗಲು ನನಗೆ ಸುಲಭವೂ ಆಗಿತ್ತು- ನಿರ್ಮಲಾ ಸೀತಾರಾಮನ್
      4:41 PM, 5 Jul

      ಜಾನುವಾರು ಆಹಾರ ಉತ್ಪಾದಿಸುವ ಸಣ್ಣ ಉದ್ಯಮಕ್ಕೆ ಬೆಂಬಲ ನೀಡುವ ಮತ್ತು ಹೆಚ್ಚಿನ ಗ್ರಾಮೀಣ ಮನೆಗಳಿಗೆ ವಿದ್ಯುತ್ ಹಾಗೂ ತೈಲ ಸಂಪರ್ಕ ಒದಗಿಸುವ ಸಲುವಾಗಿ ಸರ್ಕಾರವು ಕಂಪೆನಿಗಳು ಮುಂದೆ ಬರಲು ಅವಕಾಶ ನೀಡಿದೆ. ಗೋದ್ರೇಜ್ ಆಗ್ರೋವೆಟ್ ಲಿಮಿಟೆಡ್, ಹಿಂದುಸ್ತಾನ್ ಯುನಿಲಿವರ್ ಲಿ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ಲಿ. ಇದರಲ್ಲಿ ಆಸಕ್ತಿ ತೋರಿವೆ.
      4:40 PM, 5 Jul

      ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಸಂಸ್ಥೆಯನ್ನು ಮಾರಾಟ ಮಾಡುವ ಬದಲು ಸರ್ಕಾರ ವಿಮಾನ ಹಣಕಾಸು ಮತ್ತು ಭೋಗ್ಯದ ಯೋಜನೆಯನ್ನು ಪ್ರಕಟಿಸಿದೆ. ಇದು ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಟರ್ ಗ್ಲೋಬ್ ಏವಿಯೇಷನ್ ಮತ್ತು ಟಾಟಾ ಸಿಯಾ ಏರ್‌ಲೈನ್ಸ್‌ಗೆ ನೆರವಾಗಲಿದೆ.
      4:38 PM, 5 Jul

      ವಿಮಾನಯಾನದಲ್ಲಿ ಮುಂದಿನ ದಿನಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ತೆರೆದುಕೊಳ್ಳುವುದನ್ನು ಪರಿಗಣಿಸಲಾಗುವುದು- ನಿರ್ಮಲಾ ಸೀತಾರಾಮನ್
      4:25 PM, 5 Jul

      ಆಂತರಿಕ ಸಾಲದ ಬೆಳವಣಿಗೆ ಶೇ 13.8ಕ್ಕೆ ಹೆಚ್ಚಲಿದೆ. ಕಳೆದ ವರ್ಷದಿಂದ ವಾಣಿಜ್ಯ ಬ್ಯಾಂಕುಗಳ ಎನ್‌ಪಿಎ 1 ಲಕ್ಷ ರೂಪಾಯಿವರೆಗೆ ಇಳಿಕೆಯಾಗಿದೆ.
      Advertisement
      4:22 PM, 5 Jul

      ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ತೈಲದ ಮೇಲಿನ ತೆರಿಗೆಯಿಂದ ಜನಸಾಮಾನ್ಯರ ಮೇಲಿನ ಹೊರೆ ಹೆಚ್ಚಳವಾಗಲಿದೆ. ಕರ್ನಾಟಕಕ್ಕೆ ಯಾವುದೇ ಹೊಸ ಕೊಡುಗೆಗಳನ್ನು ನೀಡಿಲ್ಲ. ಮತ ಹಾಕಿದ ಜನರಿಗೆ ಮೋದಿ ಋಣ ತೀರಿಸಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಜೆಟ್‌ಅನ್ನು ಟೀಕಿಸಿದರು.
      4:20 PM, 5 Jul

      ರಕ್ಷಣಾ ಪಿಂಚಣಿಗಳಿಗಾಗಿ ಕೇಂದ್ರ ಸರ್ಕಾರವು 1,12,079.57 ಕೋಟಿ ಅನುದಾನ ನೀಡಿದೆ.
      4:18 PM, 5 Jul

      ನಿರ್ಮಲಾ ಸೀತಾರಾಮನ್ ಅವರಿಗೆ ಅನುಭವದ ಕೊರತೆ ಇದೆಯೇನೂ. ಅವರಿಗೆ ಅಧಿಕಾರಿಗಳು ಸರಿಯಾಗಿ ಗೈಡ್ ಮಾಡಿಲ್ಲ ಎನಿಸುತ್ತದೆ. ವಿತ್ತ ಸಚಿವರಿಗೆ ಮೋದಿ ಸರಿಯಾಗಿ ಮಾರ್ಗದರ್ಶನ ಮಾಡಿಲ್ಲ. ದಲಿತರು, ಅಲ್ಪಸಂಖ್ಯಾತರ ಬಗ್ಗೆ ಒಂದೇ ಒಂದು ಶಬ್ಧ ಪ್ರಸ್ತಾಪವಾಗಿಲ್ಲ. ಹಿಂದುಳಿದ ಸಮುದಾಯ ಮೇಲೆತ್ತಲು ಏನು ಮಾಡಿದ್ದೀರಿ? ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಟೀಕಿಸಿದರು.
      4:13 PM, 5 Jul

      ರಕ್ಷಣಾ ಪಿಂಚಣಿಗಳಿಗಾಗಿ ಕೇಂದ್ರ ಸರ್ಕಾರವು 1,12,079.57 ಕೋಟಿ ಅನುದಾನ ನೀಡಿದೆ.
      3:57 PM, 5 Jul

      ಬಜೆಟ್ 2019: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ತೀವ್ರಗತಿ

      ಮೋದಿ ಸರ್ಕಾರದ ಅತ್ಯಂತ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಮತ್ತಷ್ಟು ತೀವ್ರಗತಿ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
      3:55 PM, 5 Jul

      ಗೋಡಂಬಿ, ಪಿವಿಸಿ, ಟೈಲ್ಸ್, ಆಟೋ ಬಿಡಿ ಭಾಗಗಳು, ಮಾರ್ಬಲ್ ಸ್ಲ್ಯಾಬ್, ಒಎಫ್‌ಸಿ, ಸಿಸಿಟಿವಿ ಕ್ಯಾಮೆರಾಗಳ ಮೇಲಿನ ಮೂಲ ಸುಂಕ ಹೆಚ್ಚಿಸಲಾಗಿದೆ.
      3:46 PM, 5 Jul

      ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗಾಗಿ ಸಂಗ್ರಹಿಸಿದ ನಿಧಿಯು ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ಒಳಗಾಗಬೇಕಾಗಿಲ್ಲ.
      3:45 PM, 5 Jul

      ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುವ ಸಲುವಾಗಿ ಮನೆಯನ್ನು ಮಾರಾಟ ಮಾಡುವವರಿಗೆ ನೀಡುವ ವಿನಾಯಿತಿಯನ್ನು 2021ರ ಹಣಕಾಸು ವರ್ಷದವರೆಗೂ ವಿಸ್ತರಿಸಲಾಗಿದೆ.
      3:45 PM, 5 Jul

      ತೆರಿಗೆ ಪಾವತಿದಾರರಿಗೆ ಅನುಕೂಲವಾಗಲು ತೆರಿಗೆ ಕಾನೂನುಗಳನ್ನು ಸರಳೀಕರಣಗೊಳಿಸಲಾಗುತ್ತದೆ.
      3:33 PM, 5 Jul

      ಈ ಬಜೆಟ್ ಮೋಸದಿಂದ ಕೂಡಿದೆ. ಹಣಕಾಸು ಸಚಿವರು 2019ರ ಫೆಬ್ರವರಿಯಲ್ಲಿನ ಮಧ್ಯಂತರ ಬಜೆಟ್ ಅಂಶಗಳನ್ನೇ ಪರಿಷ್ಕರಿಸಿ ಇಡೀ ವರ್ಷಕ್ಕೆ ಅಂದಾಜಿಸಿದ್ದಾರೆ. ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಚುನಾವಣೆಯ ವೆಚ್ಚದ ಲೆಕ್ಕವನ್ನು ತೋರಿಸಿಲ್ಲ ಎಂದು ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಟೀಕಿಸಿದ್ದಾರೆ.
      2:49 PM, 5 Jul

      ಐದು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆ ಇಲ್ಲ. ಜವಾಬ್ದಾರಿಯಿಂದ ತೆರಿಗೆ ಪಾವತಿಸಿದವರಿಗೆ ಧನ್ಯವಾದಗಳು. ತೆರಿಗೆದಾರರೇ ದೇಶದ ಪ್ರಾಮಾಣಿಕರು.
      2:49 PM, 5 Jul

      2019 ಬಜೆಟ್: 300 ಕಿ.ಮೀ ಮೆಟ್ರೋ ಮಾರ್ಗ ವಿಸ್ತರಣೆ ಘೋಷಣೆ

      ಮೆಟ್ರೋ ಮಾರ್ಗವನ್ನು 300 ಕಿ.ಮೀನಷ್ಟು ವಿಸ್ತರಣೆ ಮಾಡುವುದಾಗಿ 2019ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
      2:46 PM, 5 Jul

      ಹಾಲು ಖರೀದಿ, ಪರಿಷ್ಕರಣೆ ಮತ್ತು ಮಾರಾಟಕ್ಕೆ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಮೂಲಕ ಸಹಕಾರ ತತ್ವದ ಮೂಲಕ ಪಶುಸಂಗೋಪನೆಗೆ ಉತ್ತೇಜನ ನೀಡಲಾಗುವುದು.
      2:46 PM, 5 Jul

      45 ಲಕ್ಷ ರೂಪಾಯಿವರೆಗಿನ ಮನೆ ಖರೀದಿಗೆ ಇದ್ದ ಸಾಲದ ಮೇಲಿನ ಬಡ್ಡಿದರದ ಆದಾಯ ತೆರಿಗೆ ಕಡಿತದ ಮಿತಿಯನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
      2:35 PM, 5 Jul

      ಈ ಬಜೆಟ್‌ನಿಂದ ಮಧ್ಯಮ ವರ್ಗದ ಪ್ರಗತಿಗೆ ನೆರವಾಗಲಿದೆ. ಅಭಿವೃದ್ಧಿ ಕಾರ್ಯಗಳನ್ನು ಇನ್ನಷ್ಟು ಚುರುಕುಗೊಳ್ಳಲಿವೆ. ತೆರಿಗೆ ವ್ಯವಸ್ಥೆಯು ಸರಳಗೊಳ್ಳಲಿದ್ದು, ಮೂಲಸೌಕರ್ಯ ಆಧುನೀಕರಣಗೊಳ್ಳಲಿದೆ- ನರೇಂದ್ರ ಮೋದಿ
      2:28 PM, 5 Jul

      ಮೀನುಗಾರಿಕೆಗೆ ಉತ್ತೇಜನ ನೀಡಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆಗೆ ಮೂಲಸೌಕರ್ಯ, ಆಧುನೀಕರಣ, ಉತ್ಪಾದನೆ, ಉತ್ಪಾದಕತೆ ಮುಂತಾದ ವಿಭಾಗಗಳ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
      2:28 PM, 5 Jul

      ಬ್ಯಾಂಕುಗಳ ಒಂದು ಲಕ್ಷ ಕೋಟಿ ರೂಪಾಯಿ ಅನುತ್ಪಾದಕ ಆಸ್ತಿಯನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಲಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70 ಸಾವಿರ ಕೋಟಿ ಹಣಕಾಸು ನೆರವು ನೀಡಲಿದೆ. ಬ್ಯಾಂಕುಗಳ ಏಕೀಕರಣಕ್ಕೆ ಆದ್ಯತೆ ನೀಡಲಾಗಿದೆ.
      2:25 PM, 5 Jul

      ಏರ್ ಇಂಡಿಯಾದಲ್ಲಿ ಹೂಡಿಕೆ ಹಿಂಪಡೆಯುವ ಮೂಲಕ ಅದನ್ನು ಖಾಸಗೀಕರಣ ಮಾಡಲು ಮುಂದಾಗಿದೆ.
      READ MORE

      English summary
      Live Updates on Budget 2019: Finance Minister Nirmala Sitharaman is presenting her first Union Budget. Here are the live updates for Union Budget 2019-20.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X