ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುದ್ಧ ಪೂರ್ಣಿಮೆ: ಪ್ರಧಾನಿ ಮೋದಿಯಿಂದ ಬುದ್ಧನ ತತ್ವ, ಸಿದ್ಧಾಂತಗಳ ಮೆಲುಕು

|
Google Oneindia Kannada News

ನವದೆಹಲಿ, ಮೇ 7: ಇಂದು ಬುದ್ಧ ಪೂರ್ಣಿಮೆ ಹಾಗೆಯೇ ಬುದ್ಧನ ತತ್ವ, ಸಿದ್ಧಾಂತಗಳು ಇಂದಿನ ಪರಿಸ್ಥಿತಿಗೆ ಪ್ರಸ್ತುತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬುದ್ಧ ಪೂರ್ಣಿಮೆಗೆ ಶುಭಾಶಯ ಕೋರಿ ಮಾತನಾಡಿರುವ ಅವರು , ದೇಶಕ್ಕೆ, ಇಡೀ ಜಗತ್ತಿಗೆ ಸಂಕಷ್ಟ ಬಂದಿದೆ, ಜನರು ಈ ಸಂದರ್ಭದಲ್ಲಿ ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ದೇಶದೆಲ್ಲೆಡೆ ಶ್ರದ್ಧಾಭಕ್ತಿಯ ಬುದ್ಧ ಜಯಂತಿ ಆಚರಣೆದೇಶದೆಲ್ಲೆಡೆ ಶ್ರದ್ಧಾಭಕ್ತಿಯ ಬುದ್ಧ ಜಯಂತಿ ಆಚರಣೆ

ಈ ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲಿ ಸಾಕಷ್ಟು ಮಂದಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ ಅವರನ್ನು ಸಮಾಜ ಗೌರವಯುತವಾಗಿ ಕಾಣಬೇಕು. ಬುದ್ಧ ಪೂರ್ಣಿಮಾವನ್ನು ಬುದ್ಧ ಜಯಂತಿ ಎಂದೂ ಕೂಡ ಕರೆಯಲಾಗುತ್ತದೆ. ಈ ದಿನ ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧ ಹುಟ್ಟಿದ ದಿನವೂ ಕೂಡ ಆಗಿದೆ.

ಭಾರತ ದೇಶ ಇಂದು ಯಾವುದೇ ಧರ್ಮ, ಭಾಷೆ, ದೇಶ ಎಂದು ತಾರತಮ್ಯ ನೋಡದೆ ಎಲ್ಲರ ಸಹಕಾರ, ಬೆಂಬಲಕ್ಕೆ ನಿಂತಿದೆ. ಯಾರಿಗೆ ಅಗತ್ಯವಿದೆ, ಯಾರಿಗೆ ಸಮಸ್ಯೆಯಿದೆ, ಯಾವ ದೇಶದಲ್ಲಿ ಸಮಸ್ಯೆಯಿದೆ ಅವರಿಗೆ ನಮ್ಮ ಕಡೆಯಿಂದ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ.

ಜೀವನದ ಸಮಸ್ಯೆಗಳನ್ನು ಕಡಿಮೆ ಮಾಡುವ ಸಂದೇಶ ಮತ್ತು ಸಂಕಲ್ಪವು ಭಾರತದ ಸಂಸ್ಕೃತಿಗೆ ಮಾರ್ಗದರ್ಶನ ನೀಡಿದೆ. ಭಗವಾನ್ ಬುದ್ಧ ಭಾರತೀಯ ನಾಗರಿಕತೆ ಮತ್ತು ಸಂಪ್ರದಾಯದ ಸಮೃದ್ಧಿಗೆ ಕೊಡುಗೆ ನೀಡಿದರು. ಬುದ್ಧನು ತನ್ನದೇ ಆದ ಬೆಳಕಾಗಿ ಮಾರ್ಪಟ್ಟು ತನ್ನ ಜೀವನ ಪಯಣದಲ್ಲಿ ಇತರರ ಜೀವನವನ್ನು ಬೆಳಗಿದವನು ಎಂದು ಪ್ರಧಾನಿ ಮೋದಿ ಹೇಳಿದರು.

ಬುದ್ಧನ ತತ್ವ, ಸಂದೇಶ ಪ್ರಸ್ತುತ

ಬುದ್ಧನ ತತ್ವ, ಸಂದೇಶ ಪ್ರಸ್ತುತ

ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಸ್ವಾರ್ಥವಿಲ್ಲದೆ ವಿಶ್ವದ ಜತೆಗೆ ನಿಂತಿದೆ. ಇಡೀ ಜಗತ್ತು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಗವಾನ್ ಬುದ್ಧನ ತತ್ವ, ಸಂದೇಶ, ಬೋಧನೆಗಳು ಪ್ರಸ್ತುತವಾಗಿದ್ದು ಅದರಂತೆ ನಡೆಯಬೇಕಾಗಿದೆ. ಭಾರತ ಈ ಸಂದರ್ಭದಲ್ಲಿ ಎಲ್ಲರ ನಿಸ್ವಾರ್ಥ ಸೇವೆಗೆ ಸದಾ ಸಿದ್ದ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬುದ್ಧನ ಸಿದ್ಧಾಂತ ನೆನಪಿಸಿಕೊಳ್ಳಲು ಇಂದು ಸುದಿನ

ಬುದ್ಧನ ಸಿದ್ಧಾಂತ ನೆನಪಿಸಿಕೊಳ್ಳಲು ಇಂದು ಸುದಿನ

ಕೊರೊನಾ ಸೋಂಕಿನ ಸಂಕಷ್ಟದ ಪರಿಸ್ಥಿತಿ ಸಂದರ್ಭದಲ್ಲಿ ನನಗೆ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ದೇಶವಾಸಿಗಳೊಂದಿಗೆ ಬುದ್ಧನ ತತ್ವ, ಬೋಧನೆ,ಸಂದೇಶಗಳನ್ನು ನೆನಪಿಸಿಕೊಳ್ಳಲು ನನಗೆ ಇಂದು ಸುದಿನ ಎಂದರು.

ಕೊರೊನಾ ವಾರಿಯರ್ಸ್ ಶ್ಲಾಘನೆಗೆ ಅರ್ಹರು

ಕೊರೊನಾ ವಾರಿಯರ್ಸ್ ಶ್ಲಾಘನೆಗೆ ಅರ್ಹರು

ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ನಮ್ಮ ಸುತ್ತಮುತ್ತಲಿರುವ ಹಲವರು ಬೇರೆಯವರ ಆರೋಗ್ಯ, ಸುರಕ್ಷತೆಗಾಗಿ ದುಡಿಯುತ್ತಿದ್ದಾರೆ. ಕಾನೂನು, ಸುವ್ಯವಸ್ಥೆ ಕಾಪಾಡಲು, ಸೋಂಕಿತ ವ್ಯಕ್ತಿಗಳನ್ನು ಗುಣಪಡಿಸಲು, ಸ್ವಚ್ಛತೆ ಕಾಪಾಡಲು ತಮ್ಮ ಸುಖವನ್ನು ತ್ಯಾಗ ಮಾಡಿ 24 ಗಂಟೆ ದುಡಿಯುತ್ತಿದ್ದಾರೆ. ಅಂಥವರು ನಿಜಕ್ಕೂ ಈ ಸಮಯದಲ್ಲಿ ಶ್ಲಾಘನೆ, ಅಭಿನಂದನೆಗೆ ಅರ್ಹರು.

ಬುದ್ಧ ಸ್ಚಯಂ ಸಾಕ್ಷಾತ್ಕಾರದ ಸಂಕೇತ

ಬುದ್ಧ ಸ್ಚಯಂ ಸಾಕ್ಷಾತ್ಕಾರದ ಸಂಕೇತ

ಬುದ್ಧ ಭಾರತದ ಸಾಕ್ಷಾತ್ಕಾರ ಮತ್ತು ಸ್ವಯಂ ಸಾಕ್ಷಾತ್ಕಾರ ಎರಡರ ಸಂಕೇತವಾಗಿದೆ. ಈ ಸ್ವಯಂ ಸಾಕ್ಷಾತ್ಕಾರದ ಮೂಲಕ ಮಾನವ ಸಮುದಾಯದ, ಇಡೀ ವಿಶ್ವದ ಹಿತಾಸಕ್ತಿಗೆ ಭಾರತ ಕೆಲಸ ಮಾಡುತ್ತಿದ್ದು ಅದನ್ನು ಮುಂದುವರಿಸಲಿದೆ. ಜನರ ಸೇವೆ ಮಾಡಿ ಸಾಕಾಯಿತು, ಬಳಲಿ ಹೋಯಿತು ಎಂದು ಕೂರುವ ಸಮಯ ಇದಲ್ಲ. ನಾವೆಲ್ಲರೂ ಒಟ್ಟಾಗಿ ಹೋರಾಡಿ ಕೊರೊನಾ ವೈರಸ್ ನ್ನು ಮಟ್ಟಹಾಕಲೇಬೇಕು, ಇದಕ್ಕೆ ಎಲ್ಲರ ಸಹಕಾರ ಬೇಕು.

English summary
On the Occasion Of Buddha Purnima, Prime minister Narendra Modi On Thursday extended Greetings to the Nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X