ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬಿನಲ್ಲಿ ಪಾಕಿಸ್ತಾನದ ಡ್ರೋನ್ ಧ್ವಂಸ, ಎಲ್ಲೆಲ್ಲೂ ಹೈ ಅಲರ್ಟ್

|
Google Oneindia Kannada News

ತರ್ನ್ ತರಣ್(ಪಂಜಾಬ್), ಏಪ್ರಿಲ್ 04: ಭಾರತದ ಗಡಿ ಭದ್ರತಾ ಪಡೆಯ ಸೈನಿಕರು ಪಂಜಾಬಿನ ಹಳ್ಳಿಯೊಂದರಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನಕ್ಕೆ ಸಂಬಂಧಿಸಿದ ಡ್ರೋನ್ ವೊಂದನ್ನು ಹೊಡೆದುರುಳಿಸಿದ್ದಾರೆ. ಡ್ರೋನ್ ಹಾರಾಟದ ನಂತರ ಈ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪಂಜಾಬಿನ ತರ್ನ್ ತರಣ್ ಜಿಲ್ಲೆಯ ಖೆಮ್ ಕರಣ್ ಸೆಕ್ಟರ್ ಬಳಿ ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ವೊಂದು ಹಾರಾಡುತ್ತಿತ್ತು. ಇದು ಗಡಿ ಭದ್ರತಾ ಪಡೆಯ ಸಿಬ್ಬಂದಿಯ ಗಮನಕ್ಕೆ ಬರುತ್ತಿದ್ದಂತೆಯೇ ಅದನ್ನು ಹೊಡೆದುರುಳಿಸಲಾಗಿದೆ. ಆದರೆ ಹೊಡೆದುರುಳಿಸಲಾಗದ ಡ್ರೋನ್ ಪಾಕಿಸ್ತಾನದ ನೆಲಕ್ಕೆ ಬಿದ್ದಿದೆಯೋ, ಭಾರತದ ನೆಲದಲ್ಲೇ ಬಿದ್ದಿದೆಯೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಭಾರತೀಯ ಸೇನೆಯಿಂದ ಪಾಕ್ ನ 7 ಸೇನಾ ಠಾಣೆಗಳು ಧ್ವಂಸ, ಸಾವು-ನೋವುಭಾರತೀಯ ಸೇನೆಯಿಂದ ಪಾಕ್ ನ 7 ಸೇನಾ ಠಾಣೆಗಳು ಧ್ವಂಸ, ಸಾವು-ನೋವು

BSP soldirs shot down Pakistan drone in Punjab

ಏಪ್ರಿಲ್ 02 ರಂದು ಗಡಿ ನಿಯಂತ್ರಣ ರೇಖೆಯ ಆಚೆ ಇರುವ ಪಾಕಿಸ್ತಾನದ ಏಳು ಸೇನಾ ಠಾಣೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿತ್ತು. ಭಾರತ- ಪಾಕ್ ಗಡಿ ಭಾಗದ ರಜೌರಿ, ಪೂಂಛ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೇನೆಯು ಅಪ್ರಚೋದಿತ ಶೆಲ್ಲಿಂಗ್ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನಿ ಸೇನಾ ಠಾಣೆಗಳು ಧ್ವಂಸವಾಗಿದ್ದವು.

English summary
Indian Border security force(BSF) troops shot down a Pakistani drone in Khem Karan sector of Tarn Taran district in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X