ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BSNL ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, ನಿರ್ಧಾರವೇನು?

|
Google Oneindia Kannada News

ನವದೆಹಲಿ, ಜುಲೈ 4: ಕಷ್ಟದಲ್ಲಿರುವ ಬಿಎಸ್‌ಎನ್‌ಎಲ್ ಕಂಪನಿ ಕೈಹಿಡಿಯಲು ಸರ್ಕಾರ ಧಾವಿಸಿದೆ. 74 ಸಾವಿರ ಕೋಟಿ ನೆರವು ನೀಡಲು ಕೇಂದ್ರ ಮುಂದಾಗಿದೆ.

ಈ ಕುರಿತು ಕರಡು ಪ್ರಸ್ತಾವನೆ ಸಂಪುಟಕ್ಕೆ ಸಲ್ಲಿಕೆಯಾಗಿದೆ.ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳನ್ನು ಮುಚ್ಚಿದರೆ 1.20 ಲಕ್ಷ ಕೋಟಿ ಖರ್ಚಾಗುತ್ತದೆ.

ಹೀಗಾಗಿ ಇದು ಕಷ್ಟ, ಷೇರುವಿಕ್ರಯ ಮಾಡಬಹುದು. ಆದರೆ ಷೇರು ಖರೀದಿಸಲು ಮುಂದೆ ಬರುವವರ ಸಂಖ್ಯೆ ಕಡಿಮೆ. ಆದ್ದರಿಂದ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವ ಜೊತೆಗೆ ಸರ್ಕಾರ ಮತ್ತು ಇಲಾಖೆ ಜಂಟಿಯಾಗಿ ಮಾರ್ಗವನ್ನು ಹುಡುಕಬೇಕಿದೆ.

BSNL may get 74 thousand crore bailout package
ಪ್ರಸ್ತಾವಿತ ನೆರವಿನಲಲ್ಇ 20 ಸಾವಿರ ಕೋಟಿ 4ಜಿ ತರಂಗಾಂತರ ಗುಚ್ಛಕ್ಕೆ 13 ಸಾವಿರ ಕೋಟಿ ಎರಡೂ ಸಂಸ್ಥೆಗಳ ಮರುಬಂಡವಾಳಕ್ಕೆ ಮತ್ತು 40 ಸಾವಿರ ಕೋಟಿ ಸ್ವಯಂ ನಿವೃತ್ತಿ ಯೋಜನೆಗೆ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.

BSNL ಮುಚ್ಚುವ ಸುದ್ದಿ: ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟನೆBSNL ಮುಚ್ಚುವ ಸುದ್ದಿ: ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟನೆ

2018-19ನೇ ಸಾಲಿನಲ್ಲಿ ಬಿಎಸ್‌ಎನ್‌ಎಲ್ 13,804 ಕೋಟಿ ನಷ್ಟ ಅನುಭವಿಸಿದೆ. ಹಲವು ವರ್ಷಗಳಿಂದ ಬಿಎಸ್‌ಎನ್‌ಎಲ್ ಮತ್ತ ಎಂಟಿಎನ್‌ಎಲ್‌ ಸರ್ಕಾರಕ್ಕೆ ಬಿಳಿ ಆನೆಯಾಗಿ ಪರಿಣಮಿಸಿದೆ.

ಗ್ರಾಹಕರಿಗೆ ಕಳಪೆ ಸೇವೆ, ತಂತ್ರಜ್ಞಾನ ಮೇಲ್ದರ್ಜೆಗೇರಿಸುವಿಕೆಯಲ್ಲಿ ಮಂದಗತಿ, ಅಶಿಸ್ತಿನ ಆಡಳಿತ, ಅತಿ ವೇತನದಿಂದ ಹೊರೆಯಾಗಿರುವ ಸಿಬ್ಬಂದಿ, ಸರ್ಕಾರದ ಕೆಲವು ದಾರಿ ತಪ್ಪಿಸುವ ಸೂಚನೆ ಮತ್ತು ಅನಗತ್ಯ ಮೂಗು ತೂರಿಸುವಿಕೆಯಿಂದಲೂ ಈ ಸಂಸ್ಥೆಗಳು ಹೈರಾಣಾಗಿವೆ. ಎಂಟಿಎನ್‌ಎಲ್‌ಗೆ 3,398 ಕೋಟಿ ನಷ್ಟವಾಗಿದೆ.

English summary
The huge loss making PSU BSNL may get 74 thousand crore Financial assistance from the union government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X