ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಂಡ್ ಲೈನ್ ಯುಗಕ್ಕೆ ಮರುಜೀವ: ಪ್ರಿಪೇಡ್ ಲ್ಯಾಂಡ್ ಲೈನ್ ಶೀಘ್ರ ಬರಲಿದೆ

By Nayana
|
Google Oneindia Kannada News

ಬೆಂಗಳೂರು, ಜು.9: ಇಷ್ಟು ದಿನ ಕೇವಲ ಮೊಬೈಲ್‌ಗಳಿಗಷ್ಟೇ ಪ್ರಿಪೇಯ್ಡ್‌ ಆಗಿತ್ತು ಇನ್ನುಮುಂದೆ ಸ್ಥಿರ ದೂರವಾಣಿಗೂ ಕೂಡ ಪ್ರಿಪೇಯ್ಡ್‌ ಸೌಲಭ್ಯ ಬರಲಿದೆ.

ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾ ಪರಿಕಲ್ಪನೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕಂಪನಿಯು ಸ್ಥಿರ ದೂರವಾಣಿ ಕ್ಷೇತ್ರದಲ್ಲಿ ಹೊಸದೊಂದು ಮುನ್ನುಡಿ ಬರೆಯಲು ಸಿದ್ಧವಾಗಿದೆ. ಬಿಎಸ್‌ಎನ್‌ಎಲ್‌ ಇನ್ನುಮುಂದೆ ಸ್ಥಿರ ದೂರವಾಣಿಗೂ ಪ್ರಿಪೇಯ್ಡ್‌ ಸೌಲಭ್ಯ ನೀಡಲಿದೆ.

ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಶುಭ ಸುದ್ದಿ, ಸಿಗಲಿದೆ ಹೈ ಸ್ಪೀಡ್ ಇಂಟರ್‌ನೆಟ್‌ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಶುಭ ಸುದ್ದಿ, ಸಿಗಲಿದೆ ಹೈ ಸ್ಪೀಡ್ ಇಂಟರ್‌ನೆಟ್‌

ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿಯಲ್ಲಿ ಪ್ರಿಪೇಯ್ಡ್ ಸೇವೆ ಎಂಬುದು ಜಾರಿಗೆ ಬಂದಿಲ್ಲ. 2013ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಮುಂದಾಗಿ ಬಳಿಕಕೆಲವು ಕಾರಣಗಳಿಂದ ಕೈಬಿಟ್ಟಿತ್ತು. ಇದೀಗ ಮೊಬೈಲ್‌ ಹಾಗೂ ವಿಲ್‌ ದೂರವಾಣಿಯಲ್ಲಿ ಈಗಘಾಲೇ ಈ ಸೌಲಭ್ಯ ಇದೆ. ಇನ್ನುಮುಂದೆ ಸ್ಥಿರದೂರವಾಣಿಯಲ್ಲೂ ಈ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ.

ಲ್ಯಾಂಡ್ ಲೈನ್ ಯುಗಕ್ಕೆ ಮರುಜೀವ: ಪ್ರಿಪೇಡ್ ಲ್ಯಾಂಡ್ ಲೈನ್ ಶೀಘ್ರ ಬರಲಿದೆ ಲ್ಯಾಂಡ್ ಲೈನ್ ಯುಗಕ್ಕೆ ಮರುಜೀವ: ಪ್ರಿಪೇಡ್ ಲ್ಯಾಂಡ್ ಲೈನ್ ಶೀಘ್ರ ಬರಲಿದೆ

ನೆಕ್ಸ್ಟ್ ಜನರೇಷನ್‌ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ. ಈ ತಂತ್ರಜ್ಞಾನದ ಪ್ರತ್ಯೇಕ ಸರ್ವರ್‌ಗಳನ್ನು ಎಲ್ಲ ಟೆಲಿಕಾಂ ಎಕ್ಸ್‌ಚೇಂಜ್‌ಗಳಲ್ಲಿ ಅಳವಡಿಸಲಾಗುತ್ತದೆ. ಇದರಿಂದಲೇ ಮನೆಯ ಸ್ಥಿರ ದೂರವಾಣಿಯಲ್ಲಿ ಪ್ರಿಪೇಯ್ಡ್‌ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಪ್ರಿಪೇಯ್ಡ್‌ ಸೌಲಭ್ಯವೆಂದರೇನು

ಪ್ರಿಪೇಯ್ಡ್‌ ಸೌಲಭ್ಯವೆಂದರೇನು

ಪ್ರತಿಯೊಂದು ದೂರವಾಣಿ ವಿನಿಮಯ ಕೇಂದ್ರ ಈಗಿರುವ ತಾಂತ್ರಿಕ ವ್ಯವಸ್ಥೆಯಲ್ಲೇ ಈ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ದೂರವಾಣಿ ಕೇಂದ್ರ ಅಥವಾ ಕೇಬಲ್‌ ಅಗತ್ಯವಿರುವುದಿಲ್ಲ. ನೆಕ್ಸ್ಟ್ ಜನರೇಷನ್‌ ನೆಟ್‌ವರ್ಕ್ಸ್‌ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ.

ಬಿಎಸ್‌ಎನ್‌ಎಲ್‌ ಮೌಲ್ಯವರ್ಧಿತ ಸೇವೆ

ಬಿಎಸ್‌ಎನ್‌ಎಲ್‌ ಮೌಲ್ಯವರ್ಧಿತ ಸೇವೆ

ಪ್ರಿಪೇಯ್ಡ್‌ ಸ್ಥಿರ ದೂರವಾಣಿ ಸೌಲಭ್ಯವು ಸ್ಥಿರ ದೂರವಾಣಿಯಲ್ಲಿ ಮೌಲ್ಯವರ್ಧಿತ ಸೇವೆಯನ್ನು ನೀಡಲಿದೆ. ಈಗಿರುವ ಕಂಪ್ಯೂಟರ್‌ನಲ್ಲಿ ವೇಗದ ಇಂಟರ್‌ನೆಟ್‌ ಬಳಸಲು ಸ್ಥಿರ ದೂರವಾಣಿಯಲ್ಲಿ ಮೊಬೈಲ್‌ ಮಾದರಿಯ ಸೇವೆ ನೀಡಲು ಸಾಧ್ಯವಾಗಲಿದೆ. ಮೊಬೈಲ್‌ನಂತೆ ವೋಚರ್‌ ಕಾರ್ಡ್‌ನ್ನು ಪಡೆದು ಸ್ಥಿರ ದೂರವಾಣಿಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ರೀಚಾರ್ಜ್ ಎಷ್ಟು ಸಾವಿರದವರೆಗೆ ಮಾಡಿಸಬಹುದು

ರೀಚಾರ್ಜ್ ಎಷ್ಟು ಸಾವಿರದವರೆಗೆ ಮಾಡಿಸಬಹುದು

ಈಗಿರುವ ಮಾಹಿತಿಯಂತೆ ಕನಿಷ್ಠ 10 ಸಾವಿರ ರೂ.ನಿಂದ ಗರಿಷ್ಠ 200 ರೂವರೆಗೆ ರೀಚಾರ್ಜ್ ಟಾರಿಫ್‌ ಅನ್ನು ಆರಂಭದ ಹಂತದಲ್ಲಿ ನೀಡಲಾಗಿದೆ. ಅಲ್ಲದೆ ವಾರ್ಷಿಕ 1999 ರೂ.ಗಳ ಟಾರಿಫ್‌ನ್ನೂ ನೀಡಲಾಗಿದೆ. ಮಾಸಿಕ ಯಾವುದೇ ನೆಟ್‌ವರ್ಕ್ ಗಳ:ಇಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡಲಾಗುತ್ತಿದೆ.

ನೂತನ ಫೋನ್‌ ಖರೀದಿಸಬೇಕು

ನೂತನ ಫೋನ್‌ ಖರೀದಿಸಬೇಕು

ಸ್ಥಿರ ಸೂರವಾಣಿ ಪ್ರಿಪೇಯ್ಡ್ ಹೊಸ ಸಂಪರ್ಕ ಪಡೆಯಲು ಠೇವಣಿ, ಅನುಷ್ಠಾನ ಶುಲ್ಕವನ್ನು ನೀಡಬೇಕಾಗಿಲ್ಲ. ಬಿಎಸ್‌ಎನ್‌ಎಲ್‌ನಿಂದ ಪ್ರತ್ಯೇಕವಾಗಿ ಸ್ಥಿರ ದೂರವಾಣಿ ಸೆಟ್‌ನ್ನು ಪಡೆದುಕೊಂಡರೆ ಸಾಕು, ಹಾಲಿ ಸ್ಥಿರ ದೂರವಾಣಿ ಸಂಪರ್ಕ ಹೊಂದಿರುವವರಿಗೆ ಬಿಎಸ್‌ಎನ್‌ಎಲ್‌ ವತಿಯಿಂದ ದೂರವಾಣಿ ಸೆಟ್‌ ಪೂರೈಕೆಯಾಗಲಿದೆ.

English summary
India's largest landline phone network BSNL will launch pre paid facility in landline phone connection. It is expected to create a revolution in telecom industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X