ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 27ರಂದು ರಾಷ್ಟ್ರವ್ಯಾಪಿ ಬಿಎಸ್ಸೆನ್ನೆಲ್ ಮುಷ್ಕರ

By Mahesh
|
Google Oneindia Kannada News

ನವದೆಹಲಿ, ಜುಲೈ 25: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಉದ್ಯೋಗಿಗಳು ವೇತನ ಪರಿಷ್ಕರಣೆಗೆ ಆಗ್ರಹಿಸಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಮೂರನೇ ವೇತನ ಪರಿಷ್ಕರಣಾ ಸಮಿತಿ ಶಿಫಾರಸಿನಂತೆ ವೇತನ ಏರಿಕೆಗೆ ಆಗ್ರಹಿಸಿ, ಬಿಎಸ್ಸೆನ್ನೆಲ್ ಉದ್ಯೋಗಿಗಳು ಜುಲೈ 27ರಂದು ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ.

BSNL employees to go on nationwide strike

ಬಿಎಸ್ ಎನ್‌ಎಲ್‌ನ ಸಾಮರ್ಥ್ಯದ ಆಧಾರದಲ್ಲಿ ವೇತನ ಏರಿಕೆ ಮಾಡುವಂತೆ ಸಮಿತಿ ಶಿಫಾರಸು ಮಾಡಿತ್ತು. ಮೂರನೇ ವೇತನ ಪರಿಷ್ಕರಣಾ ಸಮಿತಿಯ ಶಿಫಾರಸಿಗೆ ಜುಲೈ 19ರಂದು ಸಂಸತ್ತಿನಲ್ಲಿ ಅಂಗೀಕಾರ ನೀಡಲಾಗಿತ್ತು.

ಬಿಎಸ್‌ಎನ್‌ಎಲ್‌ಗೆ ನಷ್ಟ ಉಂಟಾಗಲು ಉದ್ಯೋಗಿಗಳು ಕಾರಣ ಅಲ್ಲ. ಸರಕಾರ ತೆಗೆದುಕೊಂಡ ಬಿಎಸ್‌ಎನ್‌ಎಲ್ ವಿರೋಧಿ ನೀತಿ ಹಾಗೂ ಕ್ರಮಗಳು ಕಾರಣ. 2006ರಿಂದ 2012ರ ವರೆಗೆ ಮೊಬೈಲ್ ನೆಟ್‌ ವರ್ಕ್ ವಿಸ್ತರಣೆಗೆ ಬೇಕಾದ ಉಪಕರಣಗಳನ್ನು ಹೊಂದಲು ಬಿಎಸ್ಸೆನ್ನೆಲ್‌ಗೆ ಅವಕಾಶ ನೀಡಿಲ್ಲ ಎಂದು ಬಿಎಸ್ಸೆನ್ನೆಲ್ ಉದ್ಯೋಗಿಗಳ ಸಂಘಟನೆಯ ಸಂಚಾಲಕ ಪಿ. ಅಭಿಮನ್ಯು ತಿಳಿಸಿದ್ದಾರೆ.

English summary
Employees of state-owned telecom firm BSNL have called a day-long nationwide strike on July 27 for not being given wage hike by the third pay revision committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X