ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ಕೊಡುವಂತೆ 80,000 ನೌಕರರಿಗೆ BSNL ಸೂಚನೆ ನೀಡುವುದು ನಿಜವೇ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6: ಸಂಬಳ ಪಾವತಿಯಾಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ನೌಕರರಿಗೆ ರಾಜೀನಾಮೆ ನೀಡಿ ಹೊರ ಹೋಗುವಂತೆ ಭಾರತ ಸಂಚಾರ ನಿಗಮ (ಬಿಎಸ್‌ಎನ್‌ಎಲ್) ಸೂಚನೆ ನೀಡಲಿದೆ ಎಂಬ ಸುದ್ದಿ ಕೆಲವೆಡೆ ಹರಿದಾಡುತ್ತಿದೆ.

ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆಯಾದ ಬಿಎಸ್‌ಎನ್‌ಎಲ್ ತನ್ನ ಶೇ 50 ರಷ್ಟು ಉದ್ಯೋಗಿಗಳಿಗೆ ರಜೆಯ ಮೇಲೆ ಹೋಗುವಂತೆ ಸೂಚನೆ ನೀಡಲು ಮುಂದಾಗಿದೆ ಎಂದು ಕೆಲವು ವೆಬ್‌ತಾಣಗಳಲ್ಲಿ ವರದಿಯಾಗಿದೆ. ಆದರೆ, ಇದು ಸತ್ಯಕ್ಕೆ ದೂರ ಎಂದು ಬಿಎಸ್‌ಎನ್‌ಎಲ್‌ ಉದ್ಯೋಗಿಗಳ ಒಕ್ಕೂಟ ಸ್ಪಷ್ಟಪಡಿಸಿದೆ.

96 ರು ಪ್ರೀಪೇಯ್ಡ್ ಪ್ಯಾಕೇಜಿಗೆ 10 ಜಿಬಿ 4ಜಿ ಡೇಟಾ!96 ರು ಪ್ರೀಪೇಯ್ಡ್ ಪ್ಯಾಕೇಜಿಗೆ 10 ಜಿಬಿ 4ಜಿ ಡೇಟಾ!

ಉದ್ಯೋಗಿಗಳ ಆಗಸ್ಟ್ ತಿಂಗಳಿನ ವೇತನ ಪಾವತಿ ವಿಳಂಬವಾಗಿತ್ತು. ಇದರಿಂದ ದೇಶದ ವಿವಿಧೆಡೆ ಬಿಎಸ್‌ಎನ್‌ಎಲ್‌ ನೌಕರರ ಒಕ್ಕೂಟಗಳು ಪ್ರತಿಭಟನೆ ನಡೆಸಿದ್ದವು.

BSNL Ask Employees To Resign Report Is True Or False?

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರಲ್ಲಿ ಸುಮಾರು ಶೇ 50ರಷ್ಟು ಮಂದಿಯನ್ನು ಸ್ವಯಂ ಪ್ರೇರಿತ ರಜೆ ಹೋಗುವಂತೆ ತಿಳಿಸುವುದಾಗಿ ಬಿಎಸ್‌ಎನ್‌ಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಪುರ್ವಾರ್ ಹೇಳಿದ್ದಾರೆ ಎಂದು ಟ್ರ್ಯಾಕ್.ಇನ್ ಎಂಬ ವೆಬ್‌ಸೈಟ್ ವರದಿ ಮಾಡಿದೆ.

ಬಿಎಸ್ಎನ್ಎಲ್ ಗ್ರಾಹಕರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಉಚಿತಬಿಎಸ್ಎನ್ಎಲ್ ಗ್ರಾಹಕರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಉಚಿತ

ಮುಂಬರುವ ದಿನಗಳಲ್ಲಿ ಶೇ 50ರಷ್ಟು ಉದ್ಯೋಗಿಗಳಿಗೆ ವಿಆರ್‌ಎಸ್‌ ಯೋಜನೆ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಇದರಿಂದ ಸುಮಾರು 80 ಸಾವಿರ ಉದ್ಯೋಗಿಗಳು ಹೊರಹೋಗುತ್ತಾರೆ. ಒಂದು ಲಕ್ಷ ಉದ್ಯೋಗಿಗಳು ಉಳಿದುಕೊಳ್ಳುತ್ತಾರೆ. ಬಿಎಸ್‌ಎನ್‌ಎಲ್‌ ಉದ್ಯೋಗಿಗಳ ವೇತನ ವೆಚ್ಚವು ಆದಾಯದ ಶೇ 75ರಷ್ಟನ್ನು ವ್ಯಯಿಸುತ್ತದೆ. ಇದರಿಂದ ಸಂಸ್ಥೆಗೆ ಆದಾಯ ಕಡಿತದಲ್ಲಿ ಉಳಿತಾಯವಾಗುತ್ತದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

BSNL ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, ನಿರ್ಧಾರವೇನು?BSNL ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, ನಿರ್ಧಾರವೇನು?

ಈ ವರದಿ ಬಗ್ಗೆ ಬಿಎಸ್‌ಎನ್‌ಎಲ್‌ ನೌಕರರ ಒಕ್ಕೂಟದ ಬಳಿ 'ಒನ್ ಇಂಡಿಯಾ' ಮಾಹಿತಿ ಕೇಳಿದಾಗ, ಇದು ಸತ್ಯಕ್ಕೆ ದೂರವಾದ ವರದಿ ಎಂದು ಸ್ಪಷ್ಟಪಡಿಸಿದ್ದಾರೆ. 'ನಾವೆಲ್ಲರೂ ಕೇಂದ್ರ ಸರ್ಕಾರದ ಉದ್ಯೋಗದ ವ್ಯಾಪ್ತಿಯಲ್ಲಿ ಇರುವವರು. ಯಾವುದೇ ಅಧಿಸೂಚನೆ ಇಲ್ಲದೆ ಏಕಾಏಕಿ ಯಾರಿಗೂ ರಾಜೀನಾಮೆ ನೀಡುವಂತೆ ಅಥವಾ ವಿಆರ್ಎಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಲು ಸಾಧ್ಯವಿಲ್ಲ' ಎಂದು ಒಕ್ಕೂಟದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Some news are spreading as BSNL will ask its 80,000 employees to resign. But the employees union has rejected such reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X