ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

|
Google Oneindia Kannada News

ನವದೆಹಲಿ, ಜನವರಿ 15 : ಭಾರತ-ಪಾಕಿಸ್ತಾನ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದ ಪಾಕ್‌ನ ಡ್ರೋನ್ ಹೊಡೆದುರುಳಿಸಲಾಗಿದೆ. ಎರಡು ಬಾರಿ ಡ್ರೋನ್ ಹಾರಾಟ ಗಮನಿಸಿದ ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ನಡೆಸಿದರು.

ಪಂಜಾಬ್‌ನ ಫಿರೋಜ್‌ಪುರ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯಲ್ಲಿ ಅಕ್ರಮವಾಗಿ ಡ್ರೋನ್ ಹಾರಾಟ ನಡೆಸುತ್ತಿತ್ತು. ಸೋಮವಾರ ರಾತ್ರಿ ಡ್ರೋನ್ ಹಾರಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಯೋಧರು ಹೊಡೆದುರುಳಿಸಿದ್ದಾರೆ.

ಕೂಲಿ ಕಾರ್ಮಿಕನನ್ನು ಕೊಂದು ತಲೆ ಕತ್ತರಿಸಿದ ಪಾಕ್ ಸೇನೆಕೂಲಿ ಕಾರ್ಮಿಕನನ್ನು ಕೊಂದು ತಲೆ ಕತ್ತರಿಸಿದ ಪಾಕ್ ಸೇನೆ

ಗಡಿ ಭದ್ರತಾ ಪಡೆಯ 136ನೇ ಬೆಟಾಲಿಯನ್ ಯೋಧರು ಪಹರೆ ಕಾಯುತ್ತಿದ್ದಾಗ ಪಾಕಿಸ್ತಾನದ ಡ್ರೋನ್ ಅಕ್ರಮವಾಗಿ ಹಾರಾಟ ನಡೆಸುತ್ತಿತ್ತು. ಗಡಿಭಾಗದಲ್ಲಿನ ಪರಿಸ್ಥಿತಿ ಬಗ್ಗೆ ವಿಡಿಯೋವನ್ನು ಸೆರೆ ಹಿಡಿಯುತ್ತಿತ್ತು. ತಕ್ಷಣ ಯೋಧರು ಡ್ರೋನ್ ಮೇಲೆ ಗುಂಡಿನ ದಾಳಿ ಮಾಡಿದರು.

ಉಗ್ರರ ಶಿಬಿರಗಳ ಧ್ವಂಸಗೊಳಿಸಿದ ಭಾರತೀಯ ಸೇನೆಉಗ್ರರ ಶಿಬಿರಗಳ ಧ್ವಂಸಗೊಳಿಸಿದ ಭಾರತೀಯ ಸೇನೆ

drone

ಫಿರೋಜ್‌ಪುರ್ ಗಡಿ ಭಾಗದಲ್ಲಿ ಡ್ರೋನ್ ಹಾರಾಟ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿಯೂ ಡ್ರೋನ್ ಹೊಡೆದುರುಳಿಸಲಾಗಿತ್ತು. ಗಡಿಯ ಸ್ಥಿತಿಯನ್ನು ಚಿತ್ರೀಕರಿಸಲು ಅಕ್ರಮವಾಗಿ ಡ್ರೋನ್ ಹಾರಿಸಲಾಗುತ್ತದೆ.

ಬೆಂಗಳೂರಲ್ಲಿ ಪಂಜಾಬ್ ಪೊಲೀಸರ ಕೈಗೆ ಸಿಕ್ಕ ಖಲಿಸ್ತಾನದ ಉಗ್ರ ಓರ್ವ ಟೆಕ್ಕಿಬೆಂಗಳೂರಲ್ಲಿ ಪಂಜಾಬ್ ಪೊಲೀಸರ ಕೈಗೆ ಸಿಕ್ಕ ಖಲಿಸ್ತಾನದ ಉಗ್ರ ಓರ್ವ ಟೆಕ್ಕಿ

ಪಾಕಿಸ್ತಾನ ಪಂಜಾಬ್ ಗಡಿ ಮಾತ್ರವಲ್ಲ. ರಾಜಸ್ಥಾನ ಮತ್ತು ಗುಜರಾಜ್ ಗಡಿಯಲ್ಲಿಯೂ ಅಕ್ರಮವಾಗಿ ಡ್ರೋನ್ ಹಾರಾಟವನ್ನು ನಡೆಸುತ್ತದೆ. ಕಳೆದ ವರ್ಷ ಎರಡು ತಿಂಗಳಿನಲ್ಲಿ ಹಲವು ಡ್ರೋನ್‌ಗಳನ್ನು ಯೋಧರು ಹೊಡೆದುರುಳಿಸಿದ್ದರು.

English summary
BSF personnel spotted a drone along the Indo-Pak border in Punjab Ferozepur district and opened fire to bring it down. Drone was sighted in Tendiwala village near the Shameke border post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X