ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು 50 ಕಿಲೋ ಮೀಟರ್ ವಿಸ್ತರಿಸಲಾಗಿದೆ. ಆ ಮೂಲಕ ಅಧಿಕಾರ ವ್ಯಾಪ್ತಿಯಲ್ಲಿ ಏಕರೂಪತೆ ತರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸ್ಪಷ್ಟಪಡಿಸಿದೆ.

ಬಿಎಸ್ಎಫ್ ಅಧಿಕಾರ ವ್ಯಾಪ್ತಿಯಲ್ಲಿ ಏಕರೂಪತೆ ನೀಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ "ತಿದ್ದುಪಡಿ"ಯಿಂದ ಗಡಿಯನ್ನು ರಕ್ಷಿಸುವ ಪಡೆಗೆ ಗಡಿಯಾಚೆಗಿನ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಹಾಯ ಮಾಡುತ್ತದೆ ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆ ನೇಮಕಾತಿ: 2,439 ಹುದ್ದೆಗಳಿವೆ ಕೇಂದ್ರ ಮೀಸಲು ಪೊಲೀಸ್ ಪಡೆ ನೇಮಕಾತಿ: 2,439 ಹುದ್ದೆಗಳಿವೆ

"ಗಡಿಯಾಚೆಗಿನ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯಲು ತಿದ್ದುಪಡಿಯು ಗಡಿ ಭದ್ರತಾ ಪಡೆಗೆ ಸಹಕಾರಿಯಾಗಿದೆ. ಹೊಸ ತಿದ್ದುಪಡಿಯಿಂದ ಗಡಿ ರಾಜ್ಯಗಳಾದ ಪಂಜಾಬ್, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ಗಡಿಯಿಂದ 50 ಕಿಮೀ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ಏಕರೂಪತೆ ತಂದಂತೆ ಆಗುತ್ತದೆ," ಎಂದು ಬಿಎಸ್‌ಎಫ್ ಹೇಳಿದೆ.

50 ಕಿ.ಮೀ ವ್ಯಾಪ್ತಿ ವಿಸ್ತರಿಸಿಕೊಂಡ ಬಿಎಸ್ಎಫ್

50 ಕಿ.ಮೀ ವ್ಯಾಪ್ತಿ ವಿಸ್ತರಿಸಿಕೊಂಡ ಬಿಎಸ್ಎಫ್

ಅಂತಾರಾಷ್ಟ್ರೀಯ ಗಡಿಯಿಂದ ಭಾರತೀಯ ಭೂಪ್ರದೇಶದ ಒಳಗೆ 50 ಕಿಮೀ ಪ್ರದೇಶಗಳವರೆಗೆ ಶೋಧನೆ ನಡೆಸಲು, ಶಂಕಿತರನ್ನು ಬಂಧಿಸಲು ಮತ್ತು ವಶಪಡಿಸಿಕೊಳ್ಳಲು ಬಿಎಸ್‌ಎಫ್‌ಗೆ ಕೇಂದ್ರ ಸರ್ಕಾರವು ಅಧಿಕಾರ ನೀಡಿದೆ ಎಂದು ಕೆಲವು ವರದಿಗಳಿಂದ ಸ್ಪಷ್ಟವಾಗುತ್ತಿದೆ. ಈ ಮೊದಲು ಬಿಎಸ್‌ಎಫ್‌ಗೆ ಪಂಜಾಬ್ ಒಳಗೆ ಕೇವಲ 15 ಕಿಮೀ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರವಿತ್ತು.

ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ ಬಗ್ಗೆ ಪ್ರಶ್ನೆ

ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ ಬಗ್ಗೆ ಪ್ರಶ್ನೆ

ಭಾರತ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ರಮವನ್ನು ರಾಜಕೀಯ ನಾಯಕರು ಪ್ರಶ್ನೆ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ, ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧಾವ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಈ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆಯಿರಿ' ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದಾರೆ.

"ಅಂತಾರಾಷ್ಟ್ರೀಯ ಗಡಿಗಳಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ ಬಿಎಸ್ಎಫ್ ಹೆಚ್ಚುವರಿ ಅಧಿಕಾರವನ್ನು ನೀಡುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಒಕ್ಕೂಟ ವ್ಯವಸ್ಥೆ ಮೇಲಿನ ನೇರ ದಾಳಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯುವಂತೆ ನಾನು ಒತ್ತಾಯಿಸುತ್ತೇನೆ," ಎಂದು ಟ್ವೀಟ್ ಮಾಡಿದ್ದಾರೆ.

ಗಡಿ ಭದ್ರತಾ ಪಡೆಯ ಸಿಬ್ಬಂದಿ ಪೊಲೀಸ್ ಅಲ್ಲ

ಗಡಿ ಭದ್ರತಾ ಪಡೆಯ ಸಿಬ್ಬಂದಿ ಪೊಲೀಸ್ ಅಲ್ಲ

"ಕೇಂದ್ರ ಸರ್ಕಾರದ ಈ "ತಾರ್ಕಿಕವಲ್ಲದ" ನಿರ್ಧಾರವು ಗಡಿ ಭದ್ರತಾ ಪಡೆಗಳನ್ನು ಹೆಚ್ಚಿಸುವ ಮನೋಭಾವಕ್ಕೆ ವಿರುದ್ಧವಾಗಿದೆ," ಎಂದು ಸುಖಜಿಂದರ್ ಸಿಂಗ್ ರಾಂಧವಾ ಹೇಳಿದ್ದಾರೆ. ಅವರು ಅಂತಾರಾಷ್ಟ್ರೀಯ ಗಡಿಯ ಮೇಲೆ ಗಮನ ಹರಿಸಬೇಕು ಮತ್ತು ರಕ್ಷಣೆಗೆ ಮೊದಲ ಸಾಲಿನಲ್ಲಿ ನಿಂತು ಕಾರ್ಯನಿರ್ವಹಿಸಬೇಕು. ಒಳನಾಡಿನಲ್ಲಿ ಪೊಲೀಸರ ಕೆಲಸ ಮಾಡುವುದು ಗಡಿ ಭದ್ರತಾ ಪಡೆಯ ಕಾರ್ಯವಲ್ಲ ಎಂದು ಅವರು ಹೇಳಿದ್ದಾರೆ.

ರಾಜಕೀಯ ನಾಯಕರ ಟೀಕೆಗೆ ಬಿಎಸ್ಎಫ್ ಪ್ರತಿಕ್ರಿಯೆ

ರಾಜಕೀಯ ನಾಯಕರ ಟೀಕೆಗೆ ಬಿಎಸ್ಎಫ್ ಪ್ರತಿಕ್ರಿಯೆ

ಅಂತರರಾಷ್ಟ್ರೀಯ ಗಡಿಗಳಲ್ಲಿ ಅಧಿಕಾರ ವ್ಯಾಪ್ತಿಯ ವಿಸ್ತರಣೆಯ ಟೀಕೆಗಳಿಗೆ ಬಿಎಸ್‌ಎಫ್‌ ಪ್ರತಿಕ್ರಿಯೆ ನೀಡಿದೆ. ಹೊಸ ತಿದ್ದುಪಡಿಯಿಂದ ಗಡಿ ರಾಜ್ಯಗಳಾದ ಪಂಜಾಬ್, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ತನ್ನ ಕಾರ್ಯಾಚರಣೆಗೆ ಏಕರೂಪತೆಯನ್ನು ತರುತ್ತದೆ. ಈಗ ಅದು ಗಡಿಯಿಂದ 50 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಬಿಎಸ್ಎಫ್ ಹೇಳಿದೆ. ಈ ಹಿಂದೆ "ಅಕ್ಟೋಬರ್ 11 ರಂದು ಜಾರಿಗೆ ಬಂದ ತಿದ್ದುಪಡಿಯು ಬಿಎಸ್‌ಎಫ್ ತನ್ನ ಕರ್ತವ್ಯಗಳ ಚಾರ್ಟರ್ ಪ್ರಕಾರ ಕಾರ್ಯನಿರ್ವಹಿಸಬಹುದಾದ ಪ್ರದೇಶವನ್ನು ವ್ಯಾಖ್ಯಾನಿಸುವಲ್ಲಿ ಏಕರೂಪತೆಯನ್ನು ಸ್ಥಾಪಿಸುತ್ತದೆ ಮತ್ತು ಅದರ ಪ್ರದೇಶಗಳಲ್ಲಿ ಗಡಿ ಭದ್ರತಾ ಕಾರ್ಯವನ್ನು ನಿರ್ವಹಿಸುತ್ತದೆ," ಎಂದು ಗೃಹ ವ್ಯವಹಾರಗಳ ಸಚಿವಾಲಯವು ಸೂಚನೆ ನೀಡಿತ್ತು.

ಯಾವ ಗಡಿಯಲ್ಲಿ ಎಷ್ಟಿದೆ ಅಧಿಕಾರ ವ್ಯಾಪ್ತಿ?

ಯಾವ ಗಡಿಯಲ್ಲಿ ಎಷ್ಟಿದೆ ಅಧಿಕಾರ ವ್ಯಾಪ್ತಿ?

ಗುಜರಾತ್‌ನಲ್ಲಿ ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು 80 ಕಿಮೀ ಪ್ರದೇಶದಿಂದ 50 ಕಿಮೀ‌ಗೆ ತಗ್ಗಿಸಲಾಗಿದೆ. ರಾಜಸ್ಥಾನದಲ್ಲಿ 50 ಕಿಮೀ ದೂರದಲ್ಲಿ ಹಾಗೆಯೇ ಉಳಿದಿದ್ದು, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಮಣಿಪುರ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಈ ಹಿಂದಿನಂತೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಗಡಿ ಭದ್ರತಾ ಪಡೆ ಕಾಯಿದೆ, 1968ರ ಸೆಕ್ಷನ್ 139, ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ಸೂಚಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಅಂತಹ ಯಾವುದೇ ಆದೇಶವನ್ನು ಸಂಸತ್ ಪ್ರತಿ ಸದನದ ಮುಂದೆ ಇಡಲಿದ್ದು, ಅದನ್ನು ಮಾರ್ಪಾಡು ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ಸಂಸತ್ ಹೊಂದಿರುತ್ತದೆ.

ರಾಜ್ಯ ಮತ್ತು ಕೇಂದ್ರ ಪಡೆಗಳ ನಡುವೆ ಬಿಕ್ಕಟ್ಟು

ರಾಜ್ಯ ಮತ್ತು ಕೇಂದ್ರ ಪಡೆಗಳ ನಡುವೆ ಬಿಕ್ಕಟ್ಟು

"ಕೇಂದ್ರ ಸರ್ಕಾರದ ಕ್ರಮದಿಂದ ರಾಜ್ಯ ಮತ್ತು ಕೇಂದ್ರದ ಸಂಸ್ಥೆಗಳ ನಡುವೆ ಬಿಕ್ಕಟ್ಟು ಹೆಚ್ಚಾಗುತ್ತದೆ. ಕೇಂದ್ರದ ಆದೇಶದಂತೆ ಯಾರನ್ನು ಬಂಧಿಸಬೇಕು ಎಂಬುದರ ಮೇಲೆ ಅವರು ಪ್ರಭಾವ ಬೀರುತ್ತಾರೆ. 50 ಕಿಮೀ ಎಂದರೆ ನಿರ್ಣಾಯಕ ಜಿಲ್ಲೆಗಳು ಸೇರಿದಂತೆ ರಾಜ್ಯದ ಅರ್ಧ ಭಾಗವಾಗಿರುತ್ತದೆ. ಇದು ಹರಿಯಾಣದೊಂದಿಗೆ ಕೆಲವು ಅತಿಕ್ರಮಣವನ್ನು ಹೊಂದಿರಬಹುದು, ಈ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ಉಲ್ಲೇಖವಿಲ್ಲ," ಎಂದು ಹಿರಿಯ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

English summary
The BSF clarification after the Centre drew criticism over the change of the security force's jurisdiction along the international borders. The BSF said that the step was taken to "give uniformity to jurisdiction" across the states. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X