ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020 ಮಾರ್ಚ್‌ ನಂತರ ಬಿಎಸ್-4 ವಾಹನ ಮಾರುವಂತಿಲ್ಲ: ಸುಪ್ರಿಂ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ವಾಹನಗಳಿಂದಾಗುವ ವಾಯುಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್‌ ಮಹತ್ವದ ಆದೇಶ ನೀಡಿದ್ದು, 2020 ರ ಮಾರ್ಚ್‌ ತಿಂಗಳ ನಂತರ ಯಾವುದೇ ಬಿಎಸ್‌-4 ವಾಹನಗಳನ್ನು ಮಾರಾಟ ಮಾಡುವಂತಿಲ್ಲ ಎಂದಿದೆ.

ವಾಹನಗಳ ಮಾಲಿನ್ಯ ತಡೆಗಟ್ಟುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ನೇತೃತ್ವದ ಮೂವರು ಸದಸ್ಯರ ಪೀಠವು 2020ರ ಏಪ್ರಿಲ್ 1ರಿಂದ ಭಾರತ್ ಸ್ಟೇಜ್‌- 4 ಮಾದರಿಯ ಯಾವುದೇ ವಾಹನವನ್ನು ದೇಶದಾದ್ಯಂತ ಮಾರುವಂತಿಲ್ಲ ಎಂದು ಹೇಳಿದೆ.

ನವೆಂಬರ್ ಅಂತ್ಯಕ್ಕೆ ವೈಟ್‌ಫೀಲ್ಡ್‌ನ ಗ್ರಾಫೈಟ್ ಕಂಪನಿಗೆ ಬೀಗನವೆಂಬರ್ ಅಂತ್ಯಕ್ಕೆ ವೈಟ್‌ಫೀಲ್ಡ್‌ನ ಗ್ರಾಫೈಟ್ ಕಂಪನಿಗೆ ಬೀಗ

ಏಪ್ರಿಲ್ ಒಂದರಿಂದ ಭಾರತದಾದ್ಯಂತ ಭಾರತ್‌ ಸ್ಟೇಜ್‌-6 ನ (ಬಿಎಸ್‌-6) ಮಾದರಿಯ ವಾಹನಗಳನ್ನಷ್ಟೆ ಮಾರಾಟ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

BS-4 vehicles will not be sell in India from 1 April 2020

ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ

2017 ರಿಂದ ಭಾರತ್‌ ಸ್ಟೇಜ್‌ 4 ರ ಮಾದರಿಯ ವಾಹನಗಳ ಮಾರಾಟ ನಡೆಯುತ್ತಿತ್ತು. ಆದರೆ 2020 ಕ್ಕೆ ಅದು ಕೊನೆಗೊಳ್ಳಲಿದೆ. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಈ ಆದೇಶ ನೀಡಲಾಗಿದೆ.

ದೆಹಲಿ: 15 ವರ್ಷ ಹಳೆಯ ಡೀಸೆಲ್ ವಾಹನಗಳು ರಸ್ತೆಗಿಳಿಯುವಂತಿಲ್ಲದೆಹಲಿ: 15 ವರ್ಷ ಹಳೆಯ ಡೀಸೆಲ್ ವಾಹನಗಳು ರಸ್ತೆಗಿಳಿಯುವಂತಿಲ್ಲ

ಸ್ಪಾರ್ಕ್‌ ಇಗ್ನೀಷನ್‌ ಹಾಗೂ ಇಂಟರ್ನಲ್‌ ಕಂಬರ್ಷನ್‌ ಎಂಜಿನ್‌ಗಳಿಂದ ಹೊರ ಬರುವ ವಾಯು ಹಾಗೂ ಅದರಿಂದಾಗುವ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಮಾನದಂಡವೇ ಭಾರತ್‌ ಸ್ಟೇಜ್‌ ಎಮಿಷನ್‌ ಸ್ಟಾಂಡರ್ಡ್‌. ಬಿಎಸ್‌-4 ಗಿಂತಲೂ ಬಿಎಸ್‌-6 ಮಾದರಿ ವಾಹನಗಳು ಕಡಿಮೆ ಹೊಗೆ ಹೊರಸೂಸುತ್ತವಾದ್ದರಿಂದ ಬಿಎಸ್‌-6 ವಾಹನಗಳನ್ನಷ್ಟೆ ಮಾರಾಟಮಾಡುವಂತೆ ಸುಪ್ರಿಂ ಹೇಳಿದೆ.

English summary
supreme court today orders that BS-4 vehicles will not be sell in Indian from April 1, 2020. After April 01, 2020 BS-6 vehicle can only be marketed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X