ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಬಲ ನಾಯಕ: ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿರಿಮೆಗೆ ಪಾತ್ರರಾದ ಪ್ರಧಾನಿ ಮೋದಿ

|
Google Oneindia Kannada News

ಲಂಡನ್, ಜೂನ್ 22: ಎರಡನೇ ಬಾರಿ ಚುನಾವಣೆ ಗೆದ್ದು, ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ.

ವಿಶ್ವದ ಪ್ರಬಲ ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿ ಅಗ್ರಸ್ಥಾನಿಯಾಗಿದ್ದಾರೆ. ಬ್ರಿಟಿಷ್‌ ಹೆರಾಲ್ಡ್‌ ನಿಯತಕಾಲಿಕೆ ನಡೆಸಿದ ವಾಚಕರ ಸಮೀಕ್ಷೆಯಲ್ಲಿ ಈ ಫಲಿತಾಂಶ ಹೊರಬಿದ್ದಿದೆ.

ಸಿಟ್ಟೆಂದರೆ ಸಿಟ್ಟು ಅದು ದೀದಿ ಸಿಟ್ಟು: ಪಿಎಂ ಸಭೆಗೆ ಮತ್ತೆ ನೋ ಎಂದ ಮಮತಾಸಿಟ್ಟೆಂದರೆ ಸಿಟ್ಟು ಅದು ದೀದಿ ಸಿಟ್ಟು: ಪಿಎಂ ಸಭೆಗೆ ಮತ್ತೆ ನೋ ಎಂದ ಮಮತಾ

ಜಾಗತಿಕ ಮಟ್ಟದಲ್ಲಿ 2019ರ ಪ್ರಬಲ ನಾಯಕರಾರು ಎನ್ನುವ ಸಮೀಕ್ಷೆಯನ್ನು ಬ್ರಿಟಿಷ್ ಹೆರಾಲ್ಡ್ ಪತ್ರಿಕೆ ನಡೆಸಿತ್ತು. ಒನ್ ಟೈಮ್ ಪಾಸ್ವರ್ಡ್ (OTP) ಮೂಲಕ, ಓದುಗರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಿತ್ತು.

British Herald Magazine survey: PM Modi won the readers poll

ವಿಶ್ವದ 25ಕ್ಕೂ ಹೆಚ್ಚು ನಾಯಕರುಗಳು ನಾಮಿನೇಟ್ ಆಗಿದ್ದರು. ಅದರಲ್ಲಿ ಅಂತಿಮವಾಗಿ ನಾಲ್ಕು ನಾಯಕರನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ಇದರಲ್ಲಿ ಭಾರತದ ಪ್ರಧಾನಿ ಮೋದಿ, ಮೊದಲ ಸ್ಥಾನಿಯಾಗಿದ್ದಾರೆ.

ಸಮೀಕ್ಷೆಯಲ್ಲಿ ಓದುಗರು ಎಷ್ಟು ಉತ್ಸಾಹದಿಂದ ಪಾಲ್ಗೊಂಡಿದ್ದರು ಎಂದರೆ, ವೋಟಿಂಗ್ ಶುರುವಾದ ಸ್ವಲ್ಪ ಹೊತ್ತಲ್ಲೇ ಬ್ರಿಟಿಷ್ ಹೆರಾಲ್ಡ್ ವೆಬ್ಸೈಟ್ ಕ್ರ್ಯಾಶ್ ಆಗಿತ್ತು. ಜುಲೈ ಹದಿನೈದರ ಸಂಚಿಕೆಯಲ್ಲಿ ಸವಿವರವಾಗಿ ಇದು ಪ್ರಕಟಗೊಳ್ಳಲಿದೆ.

ಪಾಕ್ ಜೊತೆ ಮಾತುಕತೆಗೆ ಭಾರತ ಸಿದ್ಧ, ಪಾಕ್ ಹೇಳಿಕೆಗೆ ಭಾರತದ ಗುದ್ದು ಪಾಕ್ ಜೊತೆ ಮಾತುಕತೆಗೆ ಭಾರತ ಸಿದ್ಧ, ಪಾಕ್ ಹೇಳಿಕೆಗೆ ಭಾರತದ ಗುದ್ದು

ಸಮೀಕ್ಷೆಯ ಪ್ರಕಾರ, ವಿಶ್ವದ ಪ್ರಮುಖ ನಾಲ್ಕು ನಾಯಕರು ಪಡೆದ ವೋಟಿಂಗ್ ಶೇಕಡಾವಾರು ಇಂತಿದೆ:

1. ನರೇಂದ್ರ ಮೋದಿ - ಭಾರತ - ಶೇ. 30.9
2. ಡೊನಾಲ್ಡ್‌ ಟ್ರಂಪ್‌ - ಅಮೆರಿಕ - ಶೇ. 29.9
3. ಕ್ಸಿ ಜಿನ್‌ಪಿಂಗ್‌ - ಚೀನಾ - ಶೇ. 21.9
4. ವ್ಲಾದಿಮಿರ್‌ ಪುತಿನ್‌ - ರಷ್ಯಾ - ಶೇ. 18.1

English summary
Prime Minister Narendra Modi has won the reader’s poll for the world’s most powerful person 2019 conducted by a leading British Heralad magazine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X