• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಆರೋಗ್ಯ ಯೋಜನೆಯನ್ನು ಹಾಡಿಹೊಗಳಿದ ಬ್ರಿಟಿಷ್ ಪತ್ರಿಕೆ

|
   ನರೇಂದ್ರ ಮೋದಿ ಆರೋಗ್ಯ ಯೋಜನೆಯನ್ನು ಹೊಗಳಿದ ಬ್ರಿಟಿಷ್ ನಿಯತಕಾಲಿಕೆ | Oneindia Kannada

   ನವದೆಹಲಿ, ಸೆಪ್ಟೆಂಬರ್ 14: ಇಡೀ ದೇಶಕ್ಕೆ ಅನ್ವಯವಾಗುವ ಬೃಹತ್ ಆರೋಗ್ಯ ಯೋಜನೆ ಜಾರಿಗೆ ತರುತ್ತಿರುವುದಕ್ಕೆ ಬ್ರಿಟನ್‌ನ ಆರೋಗ್ಯ ನಿಯತಕಾಲಿಕೆ 'ಲ್ಯಾನ್ಸೆಟ್' ಪ್ರಶಂಸಿಸಿದೆ.

   ಯೋಜನೆ ಕುರಿತು ಲೇಖನ ಬರೆದಿರುವ ಪತ್ರಿಕೆಯ ಸಂಪಾದಕೀಯ ಮುಖ್ಯಸ್ಥ ರಿಚರ್ಡ್ ಹಾರ್ಟನ್, ಹಲವು ವರ್ಷಗಳ ನಿರ್ಲಕ್ಷ್ಯದ ಬಳಿಕ ಜನರ ಆರೋಗ್ಯದ ಸಮಸ್ಯೆಯ ಅಪಾಯವನ್ನು ಗುರುತಿಸಿದ್ದಕ್ಕೆ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದಾರೆ.

   ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು?

   ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆರೋಗ್ಯ ಯೋಜನೆಯು ಪ್ರಮುಖ ಪಾತ್ರವಹಿಸಲಿದೆ ಎಂದೂ ಲೇಖನ ವಿಶ್ಲೇಷಿಸಿದೆ.

   ತಮ್ಮ ರಾಜಕೀಯ ವೇದಿಕೆಯ ಭಾಗವಾಗಿ ಸಾರ್ವತ್ರಿಕ ಆರೋಗ್ಯ ಯೋಜನೆಗೆ ಆದ್ಯತೆ ನೀಡಿದ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ.

   ಗುಣಮಟ್ಟದ ಆರೋಗ್ಯ ಸೇವೆ

   ಗುಣಮಟ್ಟದ ಆರೋಗ್ಯ ಸೇವೆ

   ಆಯುಷ್ಮಾನ್ ಭಾರತ್ ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗಳು ಜತೆಯಾಗಿ ಗುಣಮಟ್ಟದ ಆರೋಗ್ಯ ಸೇವೆಗಳ ಮಾರ್ಗವನ್ನು ಸುಧಾರಿಸಬೇಕು ಮತ್ತು ಜೇಬು ಖಾಲಿ ಮಾಡುವ ಆರೋಗ್ಯ ಸೇವೆಗಳ ಹೊರೆಯನ್ನು ತಗ್ಗಿಸಬೇಕು ಎಂದು ನಿಯತಕಾಲಿಕೆ ಆಶಿಸಿದೆ.

   ಮೊಟ್ಟ ಮೊದಲ ಆಯುಷ್ಮಾನ್ ಭಾರತ್ ಬೇಬಿ ಹೆಸರು ಕರಿಷ್ಮಾ

   ರಾಹುಲ್ ಗಾಂಧಿ ಅಸಮರ್ಥ

   ರಾಹುಲ್ ಗಾಂಧಿ ಅಸಮರ್ಥ

   ಇದೇ ಸಂದರ್ಭದಲ್ಲಿ ಲೇಖನವು ಮೋದಿಕೇರ್‌ಗೆ ಸಮನಾದ ಯೋಜನೆಯನ್ನು ರೂಪಿಸುವಲ್ಲಿ ಅಸಮರ್ಥರಾಗಿದ್ದರೆಂದು ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.

   'ರಾಹುಲ್ ಗಾಂಧಿ ಅವರು ಕೆಳವರ್ಗದ ಜನರು, ಬುಡಕಟ್ಟು ಸಮುದಾಯಗಳು ಮತ್ತು ಗ್ರಾಮೀಣ ಬಡವರಿಗೆ ಸಹಾಯ ಮಾಡುವ ಆಶ್ವಾಸನೆಯ ನಂತರವೂ ಮೋದಿಕೇರ್‌ಗೆ ಸರಿಸಮವಾದ ಯೋಜನೆ ನೀಡುವುದು ಸಾಧ್ಯವಾಗಿಲ್ಲ' ಎಂದಿದೆ.

   ಭಾರತದಲ್ಲಿ ಶೇ.50ರಷ್ಟು ಹೃದ್ರೋಗ ಹೆಚ್ಚಳ, ಇಲ್ಲಿವೆ ಪ್ರಮುಖ ಕಾರಣ

   ಆರೋಗ್ಯದ ಮಹತ್ವ ಅರಿತ ಮೋದಿ

   ಆರೋಗ್ಯದ ಮಹತ್ವ ಅರಿತ ಮೋದಿ

   ಮೋದಿ ಅವರು ಆರೋಗ್ಯದ ಮಹತ್ವವನ್ನು ಅರಿತುಕೊಂಡಿದ್ದಾರೆ. ಇದು ಭಾರತೀಯ ನಾಗರಿಕರ ಸ್ವಾಭಾವಿಕ ಹಕ್ಕು ಮಾತ್ರವಲ್ಲ, ಅದು ಭಾರತದ ವೃದ್ಧಿಸುತ್ತಿರುವ ಮಧ್ಯಮ ವರ್ಗದ ಜನರ ನಿರೀಕ್ಷೆಗಳ ರಾಜಕೀಯ ಸಾಧನವೂ ಹೌದು ಎಂದು ಲೇಖನ ಹೇಳಿದೆ.

   ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ

   ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಆರೋಗ್ಯ ಸೇವೆ ಸೌಲಭ್ಯಗಳ ಯೋಜನೆಯು ಮಹತ್ವ ಪಡೆದುಕೊಳ್ಳಲಿದೆ.

   ಭಾರತದ ಭವಿಷ್ಯದ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಸ್ಪರ್ಧಾತ್ಮಕ ಹಾಗೂ ತೀಕ್ಷ್ಣವಾದ ದೃಷ್ಟಿಕೋನಗಳನ್ನು ಹೊಂದಿವೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಆರೋಗ್ಯವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಿದೆ.

   50 ಕೋಟಿ ಬಡಜನರಿಗೆ ಸಹಾಯ

   ಮಹತ್ವಾಕಾಂಕ್ಷೆಯ ಆಯುಷ್ಮಾನ್ ಯೋಜನೆಯು ದೇಶದ 50 ಕೋಟಿ ಬಡಜನರಿಗೆ ಪ್ರಾಣದಾತುವಾಗಿ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

   ಇಂದೋರ್‌ನ ಸೈಫಿ ಮಸೀದಿಯಲ್ಲಿ ಬೊಹರಾ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ 5 ಲಕ್ಷ ರೂ.ದಷ್ಟು ವೆಚ್ಚದ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಇದರ ಅಡಿ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಪ್ರಯೋಗ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

   ಸೆ. 23ರಂದು ಜಾರ್ಖಂಡ್‌ನಲ್ಲಿ

   ಸೆ. 23ರಂದು ಜಾರ್ಖಂಡ್‌ನಲ್ಲಿ

   ಸೆ. 23ರಂದು ಈ ಯೋಜನೆಗೆ ಪ್ರಧಾನಿ ಮೋದಿ ಅವರು ಜಾರ್ಖಂಡ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

   ಮಧ್ಯಪ್ರದೇಶದಲ್ಲಿ ಸೆ. 25ರಂದು ಮೋದಿ ಆಯುಷ್ಮಾನ್ ಭಾರತ್‌ಗೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ 'ರಾಜ್ಯ ಅನಾರೋಗ್ಯ ನೆರವು ನಿಧಿ' ಅಸ್ತಿತ್ವದಲ್ಲಿದ್ದು, ಆಯುಷ್ಮಾನ್ ಭಾರತ್ ಯೋಜನೆ ಜಾರಿಯಾದ ಬಳಿಕ ಅದು ನಿಷ್ಕ್ರಿಯಗೊಳ್ಳಲಿದೆ.

   English summary
   British health magazine Lancet praised Narendra Modi's Ayushman Bharat scheme which is the largest government funded healthcare programme.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X