ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಅಧ್ಯಕ್ಷರನ್ನು ಮೊಸಳೆಗೆ ಹೋಲಿಸಿದ ಬ್ರಿಟನ್ ಪ್ರಧಾನಿ

|
Google Oneindia Kannada News

ನವದೆಹಲಿ, ಏ. 21: ರಷ್ಯಾ ಜೊತೆ ಏನೇ ಶಾಂತಿ ಮಾತುಕತೆ ನಡೆಸಿದರೂ ಪ್ರಯೋಜನ ಇಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿರುವ ಬ್ರಿಟನ್ ಪ್ರಧಾನಿಗಳು, ರಷ್ಯಾದೊಂದಿಗೆ ಮಾತನಾಡಿ ಉಪಯೋಗವಿಲ್ಲ. ಉಕ್ರೇನ್ ದೇಶಕ್ಕೆ ಹೋರಾಡಲು ಶಕ್ತಿ ತುಂಬುವುದೊಂದೇ ದಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಮಾತನಾಡುವುದೆಂದರೆ 'ನಿಮ್ಮ ಕಾಲನ್ನು ಕಚ್ಚಿಹಿಡಿದಿರುವ ಮೊಸಳೆ'ಯೊಂದಿಗೆ ಮಾತನಾಡಿದಂತೆ ಎಂದು ಬೋರಿಸ್ ಜಾನ್ಸನ್ ವ್ಯಂಗ್ಯ ಮಾಡಿದ್ದಾರೆ.

ರಷ್ಯಾ ಉಕ್ರೇನ್ ಯುದ್ಧ ಪ್ರಭಾವ : ಕಾಗದ ಸಿಗದೇ ಪಠ್ಯ ಪುಸ್ತಕ ಮುದ್ರಣ ವಿಳಂಬರಷ್ಯಾ ಉಕ್ರೇನ್ ಯುದ್ಧ ಪ್ರಭಾವ : ಕಾಗದ ಸಿಗದೇ ಪಠ್ಯ ಪುಸ್ತಕ ಮುದ್ರಣ ವಿಳಂಬ

"ನಿಮ್ಮ ಕಾಲನ್ನು ಕಚ್ಚಿ ಹಿಡಿದುಕೊಂಡಿರುವ ಮೊಸಳೆಯೊಂದಿಗೆ ನೀವು ಏನು ಮಾತುಕತೆ ನಡೆಸುತ್ತೀರಿ? ಇದು ಉಕ್ರೇನಿಗರು ಸದ್ಯ ಎದುರಿಸುತ್ತಿರುವ ಸಮಸ್ಯೆ. ಉಕ್ರೇನಿಗರಿಗೆ ಶಸ್ತ್ರಾಸ್ತ್ರವನ್ನು ಪೂರೈಸುತ್ತಾ ಇರುವ ರಣತಂತ್ರವನ್ನೇ ಮುಂದುವರಿಸುವುದು ಉತ್ತಮ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Britain PM Boris Johnson Compares Putin to Crocodile

"ಒಳ್ಳೆಯ ವಿಶ್ವಾಸ ಇಲ್ಲದ ಪುಟಿನ್ ಜೊತೆ ಉಕ್ರೇನಿಗರು ಹೇಗೆ ಮಾತುಕತೆ ನಡೆಸುತ್ತಾರೆಂಬದೇ ಸಮಸ್ಯೆ. ಉಕ್ರೇನ್ ದೇಶದ ಭಾಗವನ್ನು ಎಷ್ಟು ಸಾಧ್ಯವೋ ಅಷ್ಟು ಆಕ್ರಮಿಸಿ ಆ ಆಧಾರದ ಮೇಲೆ ಸಂಧಾನಕ್ಕೆ ಕೂರುವುದು ಪುಟಿಲ್ ಕಾರ್ಯತಂತ್ರ ಇರುತ್ತದೆ" ಎಂದು ಬ್ರಿಟನ್ ಪ್ರಧಾನಿ ತಿಳಿಸಿದ್ದಾರೆ.

ಉಕ್ರೇನ್ ದೇಶಕ್ಕೆ ವಿವಿಧ ಶಸ್ತ್ರಾಸ್ತ್ರಗಳನ್ನ ಪೂರೈಸುವ ಕೆಲಸವನ್ನು ಮುಂದುವರಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಅನೇಕ ವಿಶ್ವನಾಯಕರು ಒಪ್ಪಿಕೊಂಡಿದ್ದಾರೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.

ರಷ್ಯಾದೊಂದಿಗೆ ವ್ಯಾಪಾರ ಸ್ಥಗಿತಗೊಳಿಸಲು ಟಾಟಾ ಸ್ಟೀಲ್ ನಿರ್ಧಾರರಷ್ಯಾದೊಂದಿಗೆ ವ್ಯಾಪಾರ ಸ್ಥಗಿತಗೊಳಿಸಲು ಟಾಟಾ ಸ್ಟೀಲ್ ನಿರ್ಧಾರ

ಮಾರ್ಚ್ 29ರಿಂದೀಚೆ ರಷ್ಯಾ ಮತ್ತು ಉಕ್ರೇನ್ ನಡುವೆ ಮುಖತಃ ಶಾಂತಿ ಮಾತುಕತೆ ನಡೆದಿಲ್ಲ. ಕೀವ್ ನಗರದ ಸಮೀಪ ಇರುವ ಬುಕಾ ಪಟ್ಟಣದಲ್ಲಿ ನೂರಾರು ನಾಗರಿಕನ್ನು ರಷ್ಯನ್ನರು ಅಮಾನುಷವಾಗಿ ಸಂಹಾರ ಮಾಡಿದ ಘಟನೆ ವಿಶ್ವಾದ್ಯಂತ ದೊಡ್ಡ ಸದ್ದು ಮಾಡಿತು. ಆ ಘಟನೆ ಬಳಿಕ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಉಕ್ರೇನ್ ದೇಶಕ್ಕೆ ಬೆಂಬಲ ನೀಡುವ ನಿರ್ಧಾರವನ್ನು ಗಟ್ಟಿ ಮಾಡಿಕೊಂಡಿವೆ. ಉಕ್ರೇನ್ ಇನ್ನೂ ತೀವ್ರ ಮಟ್ಟದಲ್ಲಿ ಪ್ರತಿರೋಧ ಮುಂದುವರಿಸಿದೆ. ಭಾರತ ಕೂಡ ಬುಕಾ (Bucha town in Ukraine) ನರಮೇಧ ಘಟನೆಯನ್ನ ಖಂಡಿಸಿದೆ. ಅದೇ ವೇಳೆ, ಬುಕಾದಲ್ಲಿ ತಮ್ಮ ಸೈನಿಕರು ನರಮೇಧ ಮಾಡಿದ್ದಾರೆಂಬುದು ಸುಳ್ಳು ಎಂದು ರಷ್ಯಾ ದೇಶ ಹೇಳಿಕೊಂಡಿದೆ.

Britain PM Boris Johnson Compares Putin to Crocodile

ಭಾರತದ ಮನವೊಲಿಸುವ ಪ್ರಯತ್ನ:
ಉಕ್ರೇನ್ ಮತ್ತು ರಷ್ಯಾ ಸಮರ ವಿಚಾರದಲ್ಲಿ ಭಾರತ ತಟಸ್ಥ ನಿಲುವು (Neutral Stand) ತಳೆದಿದೆ. ಯಾರ ಪರವಾಗಿಯೂ, ಅಥವಾ ಯಾರ ವಿರುದ್ಧವಾಗಿಯೂ ಭಾರತದ ನಿಲುವು ಇಲ್ಲ. ಬುಕಾ ಘಟನೆಯನ್ನ ಖಂಡಿಸಿದ್ದು ಬಿಟ್ಟರೆ ರಷ್ಯಾಗೆ ವಿರುದ್ದವಾಗಿ ಭಾರತ ನಿಂತಿಲ್ಲ. ಪ್ರಧಾನಿ ಮೋದಿ ಅವರು ಎರಡೂ ದೇಶದ ಮುಖ್ಯಸ್ಥರನ್ನ ಸಂಪರ್ಕಿಸಿ ಯುದ್ಧವನ್ನು ನಿಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ಮನವಿ ಮಾಡಿಕೊಂಡಿದ್ದಂತೂ ಹೌದು.

ಭಾರತದ ಈ ತಟಸ್ಥ ನಿಲುವನ್ನು ಗುರುತಿಸಿರುವ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತ ಭೇಟಿ ಸಂದರ್ಭದಲ್ಲಿ ಭಾರತದ ನಿಲುವು ಬದಲಿಸುವ ಪ್ರಯತ್ನ ಮಾಡಲಿದ್ದಾರೆ. ನಾಳೆ ಶುಕ್ರವಾರ ಅವರು ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಲಿದ್ದು, ಉಕ್ರೇನ್ ದೇಶಕ್ಕೆ ಬೆಂಬಲ ಘೋಷಿಸುವಂತೆ ಕೇಳಿಕೊಳ್ಳಲಿದ್ದಾರೆ.

"ಉಕ್ರೇನ್ ವಿಚಾರದಲ್ಲಿ ನಾನು ನರೇಂದ್ರ ಮೋದಿ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಬುಕಾ ಘಟನೆಯನ್ನ ಭಾರತೀಯರು ಖಂಡಿಸಿದ್ದಾರೆ" ಎಂದು ಹೇಳಿದ ಬೋರಿಸ್ ಜಾನ್ಸನ್, ರಷ್ಯಾದೊಂದಿಗಿನ ಸಂಬಂಧವನ್ನು ಭಾರತ ತೊಡೆದುಹಾಕುತ್ತದೆಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

"ರಷ್ಯಾ ಜೊತೆ ಭಾರತ ಐತಿಹಾಸಿಕ ಸಂಬಂಧ ಹೊಂದಿರುವುದು ಬ್ರಿಟನ್ ದೇಶಕ್ಕೆ ತಿಳಿದಿದೆ. ಆದರೆ, ಪುಟಿನ್‌ರಿಂದ ರಷ್ಯಾ ತೊಂದರೆಗೆ ಸಿಲುಕಿರುವುದನ್ನು ನಾವು ಭಾರತಕ್ಕೆ ಎತ್ತಿ ತೋರಿಸಬೇಕು ಅಷ್ಟೇ" ಎಂದು ಬ್ರಿಟನ್ ಪ್ರಧಾನಿಗಳು ಹೇಳಿದ್ದಾರೆ.

ರಷ್ಯಾ ಜೊತೆ ಭಾರತದ ಮಿಲಿಟರಿ ಸಂಬಂಧ ಬಹಳ ಕಾಲದಿಂದ ಗಟ್ಟಿಯಾಗಿದೆ. ಭಾರತದ ಬಹುತೇಕ ಮಿಲಿಟರಿ ಉಪಕರಣಗಳು ರಷ್ಯಾದಿಂದ ಆಮದಾಗಿರುವವೇ ಆಗಿವೆ. ಭಾರತದ ಮಿಲಿಟರಿಯು ರಷ್ಯಾ ಮೇಲೆ ಬಹಳ ಅವಲಂಬಿತವಾಗಿದೆ ಎಂಬ ವಿಚಾರವನ್ನು ಇತ್ತೀಚೆಗೆ ಅಮೆರಿಕ ಕೂಡ ಹೇಳಿತ್ತು.

ಬ್ರಿಟನ್ ಪ್ರಧಾನಿಗಳು ಈಗಾಗಲೇ ಅಹ್ಮದಾಬಾದ್‌ಗೆ ಬಂದಿಳಿದಿದ್ದಾರೆ. ನಾಳೆ ಸಂಜೆಯೊಳಗೆ ಅವರು ಪ್ರಧಾನಿ ಮೋದಿ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಂತರ ವಾಪಸ್ ತೆರಳಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
PM Johnson said dealing with Putin was like "a crocodile when it's got your leg in its jaws" and said it was vital that West continues arming Ukraine. Boris Johson is in India on 2 day visit from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X