ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ ಕೇಂದ್ರ ಬಜೆಟ್ ಗೆ ಬೃಂದಾ ಕಾರಟ್ ಟೀಕೆ

|
Google Oneindia Kannada News

ಅಗರ್ತಲ, ಫೆಬ್ರವರಿ 2: ವಿತ್ತ ಸಚಿವ ಅರುಣ್ ಜೇಟ್ಲಿ ನಿನ್ನೆ(ಫೆ.1) ಮಂಡಿಸಿದ ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಎಂ)ದ ನಾಯಕಿ ಬೃಂದಾ ಕಾರಟ್ ಟೀಕೆಯ ಸುರಿಮಳೆ ಸುರಿಸಿದ್ದಾರೆ.

"ಈ ಬಜೆಟ್ ರೈತರ ಪಾಲಿಗೆ ಒಂದು ವ್ಯಂಗ್ಯವಷ್ಟೆ. ಕೆಲವು ತಿಂಗಳುಗಳ ಹಿಂದಷ್ಟೇ, ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಪತ್ರ ಬರೆದಿದ್ದ ಜೇಟ್ಲಿ, ಇದೀಗ ಬಜೆಟ್ ಭಾಷಣದ ಸಮಯದಲ್ಲಿ, ಸ್ವಾಮಿನಾಥ್ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಿದ್ದೇವೆ ಅಂದಿದ್ದಾರೆ. ಇದು ವ್ಯಂಗ್ಯವಲ್ಲದೆ ಮತ್ತೇನು?" ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರ ಬಜೆಟ್ 2018-19 : ದೇವೇಗೌಡರು ಹೇಳಿದ್ದೇನು?ಕೇಂದ್ರ ಬಜೆಟ್ 2018-19 : ದೇವೇಗೌಡರು ಹೇಳಿದ್ದೇನು?

ತ್ರಿಪುರದ ಅಗರ್ತಲದಲ್ಲಿ ಮಾತನಾಡಿದ ಕಾರಟ್, ವಿತ್ತ ಸಚಿವರು ಸಂಸತ್ತು ಮತ್ತು ದೇಶದ ಜನರ ಹಾದಿತಪ್ಪಿಸುತ್ತಿದ್ದಾರೆ. ಸರ್ಕಾರ ಘೋಷಿಸಿದ ಆರೋಗ್ಯ ವಿಮೆ ಕುರಿತೂ ಸ್ಪಷ್ಟನೆ ಇಲ್ಲ. ಒಟ್ಟಿನಲ್ಲಿ ಇದೊಂದು ವಿಫಲ ಬಜೆಟ್ ಎಂದು ಪ್ರತಿಕ್ರಿಯಿಸಿದ್ದಾರೆ.

Brinda Karat criticises Union Budget over farmers issue
English summary
Communist Party of India (Marxist) (CPM) leader Brinda Karat on Feb 2nd took a dig at the Centre after Finance Minister Arun Jaitley said that it already implemented the recommendations of the Swaminathan Commission
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X