ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಕ್ಸ್ ಸಮ್ಮೇಳನ: ಭಯೋತ್ಪಾದನೆ ವಿರುದ್ಧ ಮೋದಿ ಗುಡುಗು

|
Google Oneindia Kannada News

ನವದೆಹಲಿ, ನ.17: 12ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಪಾಲ್ಗೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಭಾರತದ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧ ದನಿಯೆತ್ತಿದರು. ವರ್ಚುಯಲ್ ಶೃಂಗದಲ್ಲಿ ಬ್ರೆಜಿಲ್, ರಷ್ಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಮುಖಂಡರು ಪಾಲ್ಗೊಂಡಿದ್ದಾರೆ. ಎಸ್ ಸಿ ಒ ಶೃಂಗಸಭೆ ನಂತರ ಇದೇ ಮೊದಲ ಬಾರಿಗೆ ಮೋದಿ ಹಾಗೂ ಕ್ಸಿಜಿನ್ ಪಿಂಗ್ ಅವರು ವರ್ಚುವಲ್ ವೇದಿಕೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ಇಂದು ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದ್ದು, ಭಯೋತ್ಪಾದನೆ, ಉಗ್ರ ಸಂಘಟನೆಗಳನ್ನು ಬೆಂಬಲಿಸುವ ರಾಷ್ಟ್ರಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಹೊಣೆಗಾರರನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳು ಒಟ್ಟಿಗೆ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು. ಈ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು,

BRICS Summit:PM Modi slams countries that support terrorism

ಈ ಬಾರಿಯ ಶೃಂಗಸಭೆಯಲ್ಲಿ ರಷ್ಯಾ ಅತಿಥೇಯ ರಾಷ್ಟ್ರವಾಗಿದ್ದು, ಜಾಗತಿಕ ಸ್ಥಿರತೆ, ಭದ್ರತೆ, ಹೊಸ ಆವಿಷ್ಕಾರದ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಜೊತೆಗೆ ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜುಲೈನಲ್ಲಿ ನಡೆಯಬೇಕಿದ್ದ ಬ್ರಿಕ್ಸ್ ಶೃಂಗ ಸಭೆ ಕೊವಿಡ್ 19 ಕಾರಣದಿಂದ ಇಂದು ನಡೆಸಲಾಗಿದೆ. 2021ರಲ್ಲಿ ಬ್ರಿಕ್ಸ್ 15 ವರ್ಷ ಪೂರೈಸಲಿದ್ದು, ನಮ್ಮ ಶೇರ್ಪಾಗಳು ಕಳೆದ ವರ್ಷಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ನಮಗೆ ವರದಿ ನೀಡಬಹುದು ಎಂದಿದ್ದಾರೆ.

English summary
Prime Minister Narendra Modi on Tuesday addressed the BRICS Summit via video conferencing and lashed out at countries that supports terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X