ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಕಾರಕ ಬ್ರೇಡ್: ಪೊಟ್ಯಾಶಿಯಂ ಬ್ರೋಮೇಟ್ ನಿಷೇಧ

By Madhusoodhan
|
Google Oneindia Kannada News

ನವದೆಹಲಿ, ಜೂನ್, 21: ಬ್ರೇಡ್ ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ದೂರುಗಳ ಆಧಾರದಲ್ಲಿ ಕೇಂದ್ರ ಸರ್ಕಾರ ಪೊಟ್ಯಾಶಿಯಂ ಬ್ರೋಮೇಟ್ ನಿಷೇಧ ಮಾಡಿ ಮಹತ್ತರ ನಿರ್ಧಾರ ತೆಗೆದುಕೊಂಡಿದೆ.

ಭಾರತದ ಆಹಾರ ನಿಯಂತ್ರಣ ಪ್ರಾಧಿಕಾರ (ಏಫ್ ಎಸ್ಎಸ್ ಎಐ) ಮಹತ್ವದ ನಿರ್ಧಾರವನ್ನು ಸೋಮವಾರ ತೆಗೆದುಕೊಂಡಿದ್ದು ಪೊಟ್ಯಾಶಿಯಂ ಬ್ರೋಮೇಟ್ ನಿಷೇಧ ಮಾಡಿ ಆದೇಶ ಹೊರಡಿಸಿದೆ.[ಬೆಂಗಳೂರಿಗರೇ, ಪ್ಲಾಸ್ಟಿಕ್ ಕವರ್ ಕೊಂಡೊಯ್ದರೂ ದಂಡ ಕಟ್ಬೇಕು!]

ban

ಬ್ರೇಡ್ ನಲ್ಲಿ ಕ್ಯಾನ್ಸರ್ ಕಾರಕ ಪೊಟ್ಯಾಶಿಯಂ ಬ್ರೋಮೇಟ್ ಅಂಶಗಳಿವೆ ಎಂಬ ಸುದ್ದಿ ಹಬ್ಬಿದ ಮೇಲೆ ಏಫ್ ಎಸ್ಎಸ್ ಎಐ ವರದಿಯನ್ನು ನೀಡುವಂತೆ ವಿಜ್ಞಾನ ಮತ್ತು ಪರಿಸರ ಕೇಂದ್ರಕ್ಕೆ ಕೇಳಿಕೊಂಡಿತ್ತು.

ಚಾಲ್ತಿಯಲ್ಲಿರುವ 34 ಬ್ರ್ಯಾಂಡ್ ಗಳ ಬ್ರೇಡ್ ಮತ್ತು ಬನ್ ಗಳನ್ನು ಕೇಂದ್ರ ಪರೀಕ್ಷೆಗೆ ಒಳಪಡಿಸಿದಾಗ ಶೇ. 84 ರಷ್ಟು ಪೊಟ್ಯಾಶಿಯಂ ಬ್ರೋಮೇಟ್ ಕಂಡುಬಂದಿತ್ತು. ಇದಾದ ಮೇಲೆ ವಿಜ್ಞಾನ ಮತ್ತು ಪರಿಸರ ಕೇಂದ್ರ ಸಹ ಪೊಟ್ಯಾಶಿಯಂ ಬ್ರೋಮೇಟ್ ನಿಷೇಧ ಮಾಡುವಂತೆ ವರದಿಯಲ್ಲಿ ಒತ್ತಾಯ ಮಾಡಿತ್ತು.[ಮ್ಯಾಗಿ ರಿಟರ್ನ್ಸ್: ಆನ್ ಲೈನ್ ನಿಂದಲೇ ಖರೀದಿಸಿ]

ಹಿಂದೆ ಮ್ಯಾಗಿಯಲ್ಲಿ ಹಾನಿಕಾರಕ ಸೀಸದ ಅಂಶಗಳಿವೆ ಎಂಬ ಕಾರಣಕ್ಕೆ ನಿಷೇಧ ಹೇರಲಾಗಿತ್ತು. ನಂತರ ಅನೇಕ ಪರೀಕ್ಷೆಗಳನ್ನು ಎದುರಿಸಿದ ಮ್ಯಾಗಿ ಪಾಸ್ ಆಗಿ ಬಂದಿತ್ತು. ಇದೀಗ ಪೊಟ್ಯಾಶಿಯಂ ಬ್ರೋಮೇಟ್ ಮೇಲೆ ನಿಷೇಧ ಹೇರಿದ್ದು ಬ್ರೇಡ್ ಮತ್ತು ಬನ್ ಗಳ ಉತ್ಪಾದನೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
The central government banned use of potassium bromate as a food additive following a CSE study that found its presence in bread causing cancer. The Food Safety Standards Authority of India (FSSAI), however, has referred potassium iodate -- also claimed to be carcinogenic used as a food additive -- to a scientific panel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X