ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲಿಯೇ ವಾಯುಪಡೆಗೂ ಸೇರಲಿದೆ ಬ್ರಹ್ಮೋಸ್‌ ಕ್ಷಿಪಣಿ

|
Google Oneindia Kannada News

ನವದೆಹಲಿ, ಜೂನ್ 16 : ಭಾರತ ಮತ್ತು ಚೀನಾ ನಡುವಿನ ಸಂಬಂಧ ಗಡಿಯಲ್ಲಿ ಹದಗೆಡುತ್ತಿದೆ. ಇದೇ ಸಂದರ್ಭದಲ್ಲಿ ಆಕಾಶದ ಮೂಲಕವೂ ಬ್ರಹ್ಮೋಸ್‌ ಕ್ಷಿಪಣಿ ಉಡಾಯನ ಮಾಡಲು ಪ್ರಮಾಣ ಪತ್ರವೂ ಸಿಕ್ಕಿದೆ.

Recommended Video

ಕೆ ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು | KL Rahul | Oneindia Kanada

ಬ್ರಹ್ಮೋಸ್‌ ವಾಯು ಉಡಾಯಿತ ಕ್ರೂಸ್‌ ಕ್ಷಿಪಣಿ (ಎಎಲ್‌ಸಿಎಂ)ಗೆ ಎಫ್ಆರ್‌ಸಿ ಪ್ರಮಾಣ ಪತ್ರ ಸಿಕ್ಕಿದೆ. ಭಾರತೀಯ ವಾಯುಪಡೆಯಲ್ಲಿ ಎಫ್‌ಆರ್‌ಸಿ ಪ್ರಮಾಣ ಪತ್ರ ಪಡೆದ ಮೊದಲ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಬ್ರಹ್ಮೋಸ್ ಪಾತ್ರವಾಗಿದೆ.

ಭಾರತೀಯ ಸೇನೆಗೆ ಸುಧಾರಿತ 'ಬ್ರಹ್ಮೋಸ್' ಕ್ಷಿಪಣಿ ಶೀಘ್ರ ಸೇರ್ಪಡೆ ಭಾರತೀಯ ಸೇನೆಗೆ ಸುಧಾರಿತ 'ಬ್ರಹ್ಮೋಸ್' ಕ್ಷಿಪಣಿ ಶೀಘ್ರ ಸೇರ್ಪಡೆ

ಜೂನ್ 10ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿವಿಧ ಭಾಗಿದಾರರ ಉನ್ನತ ಮಟ್ಟದ ಸಭೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಗೆ ಎಫ್‌ಆರ್‌ಸಿ ನೀಡಲಾಗಿದೆ. ಡಿಆರ್‌ಡಿಓ, ಎಎಸ್‌ಟಿಇ, ಎಸ್‌ಡಿಐ ಸೇರಿದಂತೆ ವಿವಿಧ ಭಾಗಿದಾರರು ಸಭೆಯಲ್ಲಿದ್ದರು.

ಭಾರತದ ಬ್ರಹ್ಮೋಸ್ ಗೆ ಆತಂಕ ತಂದೊಡ್ಡಲಿರುವ ಕ್ಷಿಪಣಿ ಪಾಕ್ ಗೆ ಸೇರ್ಪಡೆ!ಭಾರತದ ಬ್ರಹ್ಮೋಸ್ ಗೆ ಆತಂಕ ತಂದೊಡ್ಡಲಿರುವ ಕ್ಷಿಪಣಿ ಪಾಕ್ ಗೆ ಸೇರ್ಪಡೆ!

BrahMos ALCM Received Fleet Release Clearance

ಡಿಆರ್‌ಡಿಓ ಸಿದ್ಧಪಡಿಸಿರುವ ಬ್ರಹ್ಮೋಸ್‌ ಕ್ಷಿಪಣಿಯನ್ನು ಭೂಮಿ, ಆಕಾಶ ಮತ್ತು ಸಮುದ್ರದಿಂದಲೂ ಉಡಾಯಿಸಬಹುದಾಗಿದೆ. ಬ್ರಹ್ಮೋಸ್ ವಿಶ್ವದ ಶಬ್ದಾತೀತ ವೇಗದ ಕ್ಷಿಪಣಿಗಳಲ್ಲಿ ಒಂದಾಗಿದೆ. ಈಗಾಗಲೇ ಈ ಕ್ಷಿಪಣಿಯ ಪರೀಕ್ಷೆ ಯಶ್ವಸ್ವಿಯಾಗಿದೆ.

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ರಷ್ಯಾ ಮತ್ತು ಭಾರತದ ಸಹಭಾಗಿತ್ವದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಸಿದ್ಧವಾಗಿದೆ. 2007ರಲ್ಲಿ ಭೂಮಿಯಿಂದ ಭೂಮಿಗೆ ಉಡಾವಣೆಗೊಳ್ಳುವ ಬ್ರಹ್ಮೋಸ್‌ ಕ್ಷಿಪಣಿ ಸೇನೆಯನ್ನು ಸೇರಿತ್ತು. ಆಕಾಶದಿಂದ ಉಡಾಯನ ಮಾಡಲು ಈಗ ಎಫ್ಆರ್‌ಸಿ ಸಿಕ್ಕಿದೆ.

2014ರಲ್ಲಿ ಸಮುದ್ರದಿಂದಲೂ ಉಡಾವಣೆ ಮಾಡಬಲ್ಲ ಬ್ರಹ್ಮೋಸ್‌ ಕ್ಷಿಪಣಿ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. ರಷ್ಯಾದ ಪಿ-800 ಕ್ಷಿಪಣಿ ಮಾದರಿಯಲ್ಲಿಯೇ ಬ್ರಹ್ಮೋಸ್ ತಯಾರು ಮಾಡಲಾಗಿದೆ. ಭಾರತ ಮತ್ತು ರಷ್ಯಾದ ಎರಡು ನದಿಗಳ ಹೆಸರನ್ನು ಸೇರಿಸಿ ಕ್ಷಿಪಣಿಗೆ ಬ್ರಹ್ಮೋಸ್ ಎಂದು ನಾಮಕರಣ ಮಾಡಲಾಗಿದೆ.

ಭೂಮಿಯಿಂದ ಮತ್ತು ಸಮುದ್ರದಿಂದ ಉಡಾವಣೆಗೊಳ್ಳ ಬಲ್ಲ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿದೆ. ಈ ಕ್ಷಿಪಣಿ ಮ್ಯಾಚ್ 4 ವೇಗದಲ್ಲಿ ಸಂಚಾರ ನಡೆಸುತ್ತಿತ್ತು. ಈಗ ಅದನ್ನು ಮ್ಯಾಚ್ 5.0 ವೇಗಕ್ಕೆ ಅಭಿವೃದ್ಧಿಗೊಳಿಸಲಾಗಿದೆ.

English summary
BrahMos air launched cruise missile (ALCM) received the first ever fleet release clearance. In a joint venture between the Russia and DRDO have formed BrahMos Aerospace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X