ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಮೂರ್ತಿಗಳು ಎಚ್ಚರಿಕೆಯಿಂದಿರಬೇಕು: ನ್ಯಾ. ಹೆಗ್ಡೆ

ರಾಜಸ್ತಾನ ಹೈಕೋರ್ಟ್ ನ ನ್ಯಾಯಾಧೀಶ ಮಹೇಶ್ ಚಂದ್ರ ಶರ್ಮಾ ಅವರು ನವಿಲಿನ ಸಂತಾನೋತ್ಪತ್ತಿ ಬಗ್ಗೆ ಹೇಳಿದ ಮಾತುಗಳನ್ನು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನಯವಾಗಿ ಅಲ್ಲಗಳೆದಿದ್ದು, ನ್ಯಾಯಾಧೀಶರಿಗೆ ಕಿವಿಮಾತನ್ನೂ ಹೇಳಿ

|
Google Oneindia Kannada News

ಬೆಂಗಳೂರು, ಜೂನ್ 1: ನ್ಯಾಯಾಧೀಶರ ಹುದ್ದೆಯಲ್ಲಿರುವವರು ಕೆಲವೊಂದು ಹೇಳಿಕೆಗಳನ್ನು, ತೀರ್ಪುಗಳನ್ನು ನೀಡುವಾಗ ಗಂಭೀರತೆಯಿಂದ ವರ್ತಿಸಬೇಕು. ನ್ಯಾಯಾಂಗದ ಗೌರವಕ್ಕೆ ಕುಂದುಂಟಾಗುವ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಇತ್ತೀಚೆಗೆ, ರಾಜಸ್ಥಾನ ಹೈಕೋರ್ಟ್ ನ ನ್ಯಾಯಾಧೀಶ ಮಹೇಶ್ ಚಂದ್ರ ಶರ್ಮಾ ಅವರು, ಹೆಣ್ಣು ನವಿಲುಗಳು ಗಂಡು ನವಿಲಿನ ಕಣ್ಣೀರಿನಿಂದ ಗರ್ಭ ಧರಿಸುತ್ತವೆ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಸ್ತುವಾಯಿತು.[''ಹೇ... ನವಿಲೇ... ಹೆಣ್ಣವಿಲೇ...'' (ಮಯೂರನ ಜನ್ಮ ರಹಸ್ಯ - ಏನು, ಹೇಗೆ?)]

Brahmachari peacock: Uphold seriousness of judiciary says Justice Hegde

ಹಲವಾರು ಮಂದಿ, ಕನಿಷ್ಟ ಸಾಮಾನ್ಯ ಜ್ಞಾನ ಇಲ್ಲದವರೆಲ್ಲಾ ನಮ್ಮ ದೇಶದಲ್ಲಿ ನ್ಯಾಯಮೂರ್ತಿಗಳಾಗಿದ್ದಾರೆಂದು ಜರಿದರೆ, ಮತ್ತೆ ಕೆಲವರು ಆ ಹೇಳಿಕೆಯ ಆಧಾರದಲ್ಲಿ ಜೋಕುಗಳನ್ನು ಹರಿಯಬಿಟ್ಟರು.[ಜೋಕನ್ನೆಲ್ಲ ಕೇಳಿ ನವಿಲುಗಳು ಅಳಲು ಪ್ರಾರಂಭಿಸಿದರೆ!]

ಈ ಹಿನ್ನೆಲೆಯಲ್ಲಿ ತಮ್ಮ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳಿಗೆ, ಸಂತೋಷ್ ಹೆಗ್ಡೆ ಮೇಲಿನಂತೆ ಉತ್ತರಿಸಿದ್ದಾರೆ. ಅಲ್ಲದೆ, ನ್ಯಾಯಾಂಗದಲ್ಲಿ ಉನ್ನತ ಸ್ಥಾನಗಳಲ್ಲಿರುವವರು ಬೇಕಾಬಿಟ್ಟಿ ಹೇಳಿಕೆ ನೀಡಿದರೆ, ಅದರಿಂದ ಜನರು ನ್ಯಾಯಾಂಗವನ್ನು ಅನುಮಾನದಿಂದ ನೋಡುವಂತಾಗುತ್ತದೆ ಎಂದೂ ಕಿವಿಮಾತು ಹೇಳಿದರು.

English summary
Many have laughed at the comments by Rajasthan High Court Judge Justice Mahesh Chandra on peacock reproduction, there are others who were part of the Indian Judicial system who are angry. Justice N Santhosh Hegde, retired judge of the Supreme Court of India says that there should be some amount of seriousness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X