• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಲಾಹಲ ಸೃಷ್ಟಿಸಿದ ಮೆಕ್‌ಡೊನಾಲ್ಡ್ಸ್‌ನ 'ಹಲಾಲ್'

|

ನವದೆಹಲಿ, ಆಗಸ್ಟ್ 23: ಧರ್ಮ ಮತ್ತು ಆಹಾರದ ವಿಚಾರವಾಗಿ ಆಹಾರ ಪೂರೈಕೆ ಸೇವಾದಾರ 'ಝೊಮ್ಯಾಟೋ' ವಿರುದ್ಧ ಕೆಲವು ಗ್ರಾಹಕರು ಅಭಿಯಾನ ಆರಂಭಿಸಿದ್ದರು. ಅದರ ಬೆನ್ನಲ್ಲೇ ಝೊಮ್ಯಾಟೋ ಡೆಲಿವರಿ ಬಾಯ್‌ಗಳು ಧಾರ್ಮಿಕ ನಂಬಿಕೆಯನ್ನು ಮುಂದಿಟ್ಟು ಕೆಲವು ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ನಿರಾಕರಿಸಿದ ಘಟನೆಯೂ ವರದಿಯಾಗಿತ್ತು.

ಈಗ ಆಹಾರ ತಯಾರಕಾ ಸಂಸ್ಥೆ ಮೆಕ್ ಡೊನಾಲ್ಡ್ಸ್ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿಯೂ ಆಹಾರ ಮತ್ತು ಧರ್ಮದ ವಿಚಾರ ಮುನ್ನೆಲೆಗೆ ಬಂದಿದೆ. ಮೆಕ್ ಡೊನಾಲ್ಡ್ಸ್ ಅನ್ನು ಬಹಿಷ್ಕರಿಸಿ ಅಭಿಯಾನ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಟ್ವಿಟ್ಟರ್‌ನಲ್ಲಿ #BoycottMcDonalds ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.

ದನ, ಹಂದಿ ಮಾಂಸಾಹಾರ ಡೆಲಿವೆರಿ ಮಾಡುವುದಿಲ್ಲ: ಜೊಮ್ಯಾಟೊ ಸಿಬ್ಬಂದಿ ಪ್ರತಿಭಟನೆ

   ಡಿ.ಕೆ.ಶಿವಕುಮಾರ್ ಅವರನ್ನು ಲೇವಡಿ ಮಾಡಿದ ಬಿ.ಶ್ರೀರಾಮುಲು | Oneindia Kannada

   ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿರುವುದು ಗ್ರಾಹಕರೊಬ್ಬರು ಮೆಕ್‌ ಡೊನಾಲ್ಡ್ಸ್‌ಗೆ ಕೇಳಿದ ಒಂದು ಪ್ರಶ್ನೆ ಮತ್ತು ಅದಕ್ಕೆ ಸಂಸ್ಥೆ ನೀಡಿರುವ ಉತ್ತರ. ಮೆಕ್ ಡೊನಾಲ್ಡ್ಸ್ ಇಂಡಿಯಾ ನೀಡಿರುವ ಪ್ರತಿಕ್ರಿಯೆ ಗ್ರಾಹಕರನ್ನು ಕೆರಳಿಸಿದೆ. ಸಂಸ್ಥೆಯ ವಿರುದ್ಧ ಪ್ರತಿಭಟನಾತ್ಮಕವಾಗಿ ನಡೆಯುತ್ತಿರುವ ಅಭಿಯಾನ ಜೋರಾಗುತ್ತಿದೆ. 'ಆಹಾರಕ್ಕೆ ಧರ್ಮವಿಲ್ಲ' ಎಂದು ಝೊಮ್ಯಾಟೋ ಹೇಳಿತ್ತು. ಆದರೆ, ಮೆಕ್ ಡೊನಾಲ್ಡ್ಸ್ 'ಆಹಾರಕ್ಕೆ ಧರ್ಮವಿದೆ' ಎಂಬುದನ್ನು ಸ್ಪಷ್ಟಪಡಿಸಿದೆ ಎಂಬುದಾಗಿ ಟ್ವಿಟ್ಟಿಗರು ಘರ್ಜಿಸಿದ್ದಾರೆ.

   ಎಲ್ಲ ರೆಸ್ಟೋರೆಂಟ್‌ಗಳಲ್ಲಿ ಹಲಾಲ್

   ಎಲ್ಲ ರೆಸ್ಟೋರೆಂಟ್‌ಗಳಲ್ಲಿ ಹಲಾಲ್

   ಭಾರತದಲ್ಲಿರುವ ಮೆಕ್‌ಡೊನಾಲ್ಡ್ಸ್ ಹಲಾಲ್ ಪ್ರಮಾಣೀಕೃತವೇ ಎಂದು ಹಿಬಾಯಿಲ್ಯಾಸ್ ಎಂಬುವವರು ಟ್ವಿಟ್ಟರ್‌ನಲ್ಲಿ ಸಂಸ್ಥೆಯನ್ನು ಕೇಳಿದ್ದರು.

   ಅದಕ್ಕೆ ಪ್ರತಿಕ್ರಿಯೆ ನೀಡಿದ ಮೆಕ್ ಡೊನಾಲ್ಡ್ಸ್ ಇಂಡಿಯಾ, 'ನಮ್ಮ ಎಲ್ಲ ರೆಸ್ಟೋರೆಂಟ್‌ಗಳೂ ಹಲಾಲ್ (ಇಸ್ಲಾಮಿಕ್ ಕಾನೂನಿಗೆ ಅನುಗುಣವಾಗಿ ಪ್ರಾಣಿಗಳನ್ನು ಮಾಂಸಕ್ಕಾಗಿ ಕೊಲ್ಲುವುದು) ಸರ್ಟಿಫಿಕೇಟ್ ಹೊಂದಿವೆ. ನಿಮ್ಮ ತೃಪ್ತಿ ಮತ್ತು ಖಚಿತತೆಗಾಗಿ ಸಂಬಂಧಿತ ರೆಸ್ಟೋರೆಂಟ್‌ಗಳ ವ್ಯವಸ್ಥಾಪಕರ ಬಳಿ ಪ್ರಮಾಣಪತ್ರ ಕೇಳಬಹುದು' ಎಂದು ಉತ್ತರ ನೀಡಿದೆ.

   ಮೆಕ್ ಡೊನಾಲ್ಡ್ಸ್ ಬಹಿಷ್ಕರಿಸಿ ಅಭಿಯಾನ

   ಮೆಕ್ ಡೊನಾಲ್ಡ್ಸ್ ಬಹಿಷ್ಕರಿಸಿ ಅಭಿಯಾನ

   ಮೆಕ್ ಡೊನಾಲ್ಡ್ಸ್ ಇಂಡಿಯಾ ನೀಡಿದ ಉತ್ತರ ಭಾರತೀಯ ಸಾಂಪ್ರದಾಯಿಕ ಗ್ರಾಹಕರನ್ನು ಕೆರಳಿಸಿದೆ. ಜತೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಲಾಲ್ ಮಾಂಸವನ್ನು ಪೂರೈಕೆ ಮಾಡುತ್ತಿರುವುದಕ್ಕೆ ಮತ್ತು ಅದು ತನ್ನ ಎಲ್ಲ ರೆಸ್ಟೋರೆಂಟ್‌ಗಳಿಯೂ ಲಭ್ಯ ಎಂಬ ಘೋಷಣೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ #BoycottMcDonalds ಟ್ರೆಂಡ್ ಆಗಿದೆ. ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ಹಲಾಲ್ ಮಾಂಸ ಮಾರಾಟ ಸಾಮಾನ್ಯ. ಆದರೆ, ಮುಸ್ಲಿಮೇತರ ಧರ್ಮದ ಬಾಹುಳ್ಯದ ದೇಶದಲ್ಲಿ ಹಲಾಲ್ ಮಾಂಸ ಮಾರುತ್ತಿದೆ ಎಂದು ಸಿಟ್ಟು ವ್ಯಕ್ತಪಡಿಸಿದ್ದಾರೆ.

   'ಝೊಮ್ಯಾಟೋ ಬಾಯ್' ಕಂಠಸಿರಿಗೆ ಮನಸೋತ ನೆಟ್ಟಿಗರು

   ಝಟ್ಕಾ ಮಾಂಸವನ್ನೇ ಪೂರೈಸಿ

   ಝಟ್ಕಾ ಮಾಂಸವನ್ನೇ ಪೂರೈಸಿ

   'ನರಕಕ್ಕೆ ಹೋಗಿ. ನಾವು ಹಿಂದೂಗಳು ಝಟ್ಕಾ ಮಾಂಸವನ್ನು ಮಾತ್ರ ತಿನ್ನುತ್ತೇವೆ. ನಿಮ್ಮ ರೆಸ್ಟೋರೆಂಟ್‌ಗಳಿಂದ ಯಾವುದೇ ಮಾಂಸಾಹಾರ ಪದಾರ್ಥ ಖರೀದಿಸದಂತೆ ಉಳಿದವರಿಗೂ ತಿಳಿ ಹೇಳುತ್ತೇವೆ. ನೀವು ಝೊಮ್ಯಾಟೋದಂತೆಯೇ ಕೊನೆಗೊಳ್ಳಲು ಬಯಸದೆ ಇದ್ದರೆ ಝಟ್ಕಾ ಮಾಂಸವನ್ನೇ ಪೂರೈಕೆ ಮಾಡಿ. ಇಲ್ಲವೇ ನಿಮ್ಮ ಆರ್ಥಿಕ ಸಂಕಷ್ಟವನ್ನು ಅನುಭವಿಸಿ' ಎಂದು ಹಸ್ದಾ ಪಂಜಾಬ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ನಾವಿನ್ನು ಬರುವುದಿಲ್ಲ

   ನಾವಿನ್ನು ಬರುವುದಿಲ್ಲ

   'ನಾವು ಹಿಂದೂಗಳು ತಿನ್ನುವ ಝಟ್ಕಾ ಮಾಂಸದ ಕುರಿತು ಏನು ಮಾಹಿತಿ ಕೊಡುತ್ತೀರಿ? ನಾವು ತಿನ್ನುವುದನ್ನು ಕೊಡಲು ಆರಂಭಿಸದೆ ಇದ್ದರೆ ನಿಮ್ಮ ರೆಸ್ಟೋರೆಂಟ್‌ಗಳಿಗೆ ನಾವಿನ್ನು ಬರುವುದಿಲ್ಲ' ಎಂದು ನಿತಿನ್ ಶೆಟ್ಟಿ ಎಂಬುವವರು ಹೇಳಿದ್ದಾರೆ.

   ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ zomato ಕೊಟ್ಟ ಉತ್ತರಕ್ಕೆ ಫಿದಾ ಆಗಲೇಬೇಕು!

   ಆಹಾರಕ್ಕೆ ಧರ್ಮವಿದೆ

   ಆಹಾರಕ್ಕೆ ಧರ್ಮವಿದೆ

   ಕೂಡಲೇ ಮೆಕ್ ಡೊನಾಲ್ಡ್ಸ್ ಅನ್ನು ಬಹಿಷ್ಕರಿಸಿ. ಆಹಾರಕ್ಕೆ ಧರ್ಮವಿದೆ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ ಎಂದು ಸುಯಾಶ್ ಕುಮಾರ್ ಹೇಳಿದ್ದಾರೆ.

   ಮುಸ್ಲಿಮೇತರರಿಗೆ ಅಲ್ಲವೇ?

   ಮುಸ್ಲಿಮೇತರರಿಗೆ ಅಲ್ಲವೇ?

   'ನಿಮ್ಮ ಪ್ರತಿಕ್ರಿಯೆ ಗಮನಿಸಿದರೆ ನಿಮ್ಮ ಉತ್ಪನ್ನಗಳು ಭಾರತದಲ್ಲಿನ ಮುಸ್ಲಿಮೇತರರಿಗೆ ಅಲ್ಲ ಎಂದು ನಾನು ಅರ್ಥ ಮಾಡಿಕೊಳ್ಳಬೇಕೇ? ನನಗೆ ತಿಳಿಸಿ' ಎಂದು ಅಭಿಜಿತ್ ಎಂಬುವವರು ಪ್ರಶ್ನಿಸಿದ್ದಾರೆ.

   ಝಟ್ಕಾ ಮಾಂಸ ಎಲ್ಲಿ ಸಿಗುತ್ತದೆ?

   ಝಟ್ಕಾ ಮಾಂಸ ಎಲ್ಲಿ ಸಿಗುತ್ತದೆ?

   'ಹಲಾಲ್ ನಮಗೆ ಹರಾಮ್ ಇದ್ದಂತೆ. ಮುಂಬೈನಲ್ಲಿರುವ ನಿಮ್ಮ ಯಾವ ರೆಸ್ಟೋರೆಂಟ್ ಝಟ್ಕಾ ಮಾಂಸ/ಚಿಕನ್ ಅನ್ನು ಪೂರೈಸುತ್ತದೆ ಎಂಬುದನ್ನು ಹೇಳಲು ಸಾಧ್ಯವೇ?' ಎಂದು ಸಮೀರ್ ಯಾದವ್ ಕೇಳಿದ್ದಾರೆ.

   ಹಿಂದೂ ಮತ್ತು ಸಿಖ್ ಗ್ರಾಹಕರಿಗೆ ಗುಡ್ ಬೈ

   ಹಿಂದೂ ಮತ್ತು ಸಿಖ್ ಗ್ರಾಹಕರಿಗೆ ಗುಡ್ ಬೈ

   'ಸರಿ, ನಿಮ್ಮ ಹಿಂದೂ ಮತ್ತು ಸಿಖ್ ಗ್ರಾಹಕರಿಗೆ ವಿದಾಯ ಹೇಳಿ. ಪ್ರಾಣಿಯನ್ನು ಕೊಲ್ಲುವ ಮತ್ತು ನೋಯಿಸುವುದರಲ್ಲಿ ಹಲಾಲ್ ಅತ್ಯಂತ ಕ್ರೂರವಾದದ್ದು. ಪ್ರಾಣಿಗಳ ಮೇಲೆ ಈ ರೀತಿಯ ಕ್ರೌರ್ಯವನ್ನು ಯಾವುದೇ ಹಿಂದೂ ಅಥವಾ ಸಿಖ್ಖರು ಒಪ್ಪಿಕೊಳ್ಳಲಾರರು' ಎಂದು ಟಿ ಪ್ರಸಾದ್ ಎಂಬುವವರು ಹೇಳಿದ್ದಾರೆ.

   English summary
   BoycottMcDonalds is trending in Twitter after McDonalds India said its all restaurants have HALAL certificates.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more