ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸಮರ್ಥನೆ: ಸಿಧು ಹೇಳಿಕೆ ಬೆಂಬಲಿಸಿದ ಕಪಿಲ್ ಶರ್ಮಾಗೆ ಚಾಟಿ

|
Google Oneindia Kannada News

Recommended Video

Pulwama : ನವಜೋತ್ ಸಿಂಗ್ ಸಿಧ್ದು ಹೇಳಿಕೆಯನ್ನ ಸಮರ್ಥಿಸಿಕೊಂಡ ಕಪಿಲ್ ಶರ್ಮಾ

ನವದೆಹಲಿ, ಫೆಬ್ರವರಿ 19: ಪುಲ್ವಾಮಾ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇಲ್ಲ ಎಂದು ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಹಾಸ್ಯಗಾರ ಕಪಿಲ್ ಶರ್ಮಾ ಬೆಂಬಲಿಸಿದ್ದಾರೆ.

ಪಾಕಿಸ್ತಾನ ತಪ್ಪು ಮಾಡಿಲ್ಲ ಎಂಬರ್ಥದಲ್ಲಿ ಅದನ್ನು ಸಮರ್ಥಿಸಿಕೊಂಡಿದ್ದ ಸಿಧು ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಒತ್ತಡಕ್ಕೆ ಸಿಲುಕಿದ್ದ ಸೋನಿ ಟಿವಿ, 'ದಿ ಕಪಿಲ್ ಶರ್ಮಾ ಶೋ' ಕಾಮಿಡಿ ಕಾರ್ಯಕ್ರಮದಿಂದ ಸಿಧುಗೆ ಗೇಟ್ ಪಾಸ್ ನೀಡಿತ್ತು.

ಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧುಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧು

ಆದರೆ ಈ ವಿವಾದದ ನಡುವೆಯೂ ಕಪಿಲ್ ಶರ್ಮಾ, ಸಿಧುವನ್ನು ಬೆಂಬಲಿಸಿ ಮಾತನಾಡಿದ್ದಾರೆ. ಕಪಿಲ್ ಶರ್ಮಾ ಶೋದಿಂದ ಸಿಧುವನ್ನು ಓಡಿಸಿ ಎಂದು ಟ್ವಿಟ್ಟರ್ ಮತ್ತು ಫೇಸ್‌ಬುಕ್ ಅಭಿಯಾನ ನಡೆಸಿದ್ದ ಟ್ವಿಟ್ಟಿಗರು, ಈಗ ಕಪಿಲ್ ಶರ್ಮಾ ಮೇಲೆಯೇ ಮುಗಿಬಿದ್ದಿದ್ದಾರೆ. ಸಿಧುವನ್ನು ಬೆಂಬಲಿಸಿರುವ ನಿಮಗೂ, ಸಿಧುವಿಗೂ ವ್ಯತ್ಯಾಸವಿಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಕಪಿಲ್ ಶರ್ಮಾ ಎಂಬ ಟ್ರೆಂಡ್ ಹುಟ್ಟುಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಪಿಲ್ ಶರ್ಮಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಾಧ್ಯಮಗಳ ಜತೆ ಮಾತನಾಡುವ ಸಂದರ್ಭದಲ್ಲಿ ಕಪಿಲ್ ಶರ್ಮಾ ತಮ್ಮ ಶೋಗೆ ಅದರಿಂದ ತೊಂದರೆಯಾಗಲಿದೆ ಎಂಬ ಭಾವನೆಯೊಂದಿಗೆ ಮಾತನಾಡಿದ್ದರು.

ಕಪಿಲ್ ಶರ್ಮಾ ಹೇಳಿದ್ದೇನು?

ಕಪಿಲ್ ಶರ್ಮಾ ಹೇಳಿದ್ದೇನು?

ಇದೆಲ್ಲ ಕ್ಷುಲ್ಲಕ ಸಂಗತಿಗಳು. ಅಥವಾ ಒಂದು ಪ್ರಚಾರದ ಭಾಗವೂ ಹೌದು. ಯಾರನ್ನೋ ನಿಷೇಧಿಸುವುದು ಅಥವಾ ಸಿಧು ಅವರನ್ನು ಶೋದಿಂದ ಕಿತ್ತುಹಾಕುವುದು ಪರಿಹಾರವಲ್ಲ. ಸಿಧುಜಿ ಅವರನ್ನು ವಜಾಗೊಳಿಸುವುದು ಶಾಶ್ವತ ಪರಿಹಾರವಾದರೆ ಅವರೇ ಶೋದಿಂದ ಹೊರಕ್ಕೆ ನಡೆಯುತ್ತಿದ್ದರು. ನಾವು ಶಾಶ್ವತ ಪರಿಹಾರಕ್ಕಾಗಿ ನೋಡಬೇಕು ಎಂದು ಕಪಿಲ್ ಹೇಳಿದ್ದರು.

Array

ನಿಮ್ಮದೇ ಶೋ ಮಾಡಿ!

ಈ ಮಟ್ಟಿಗಿನ ಸೊಕ್ಕನ್ನು ಸಹಿಸಿಕೊಳ್ಳಬಾರದು, ಇನ್ನು ಸಹಿಸಿಕೊಳ್ಳಲು ಸಾಧ್ಯವೂ ಇಲ್ಲ. ನಿಮ್ಮ ಪ್ರೀತಿಯ ಸಿಧು ಅವರನ್ನು ನಿಮ್ಮೊಂದಿಗೆ ಕರೆದುಕೊಂಡು 'ಪೀಸ್ ಲವಿಂಗ್' ಪಾಕಿಸ್ತಾನದಲ್ಲಿ ಶೋ ಶುರುಮಾಡಿ. ನಿಮ್ಮ ಹಾಗೂ ನಿಮ್ಮ ಗುರುವಿನಂತೆ ದೇಶದ ಜನರು ಕುರುಡರಲ್ಲ ಎಂದು ಸಿದ್ದೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

'ದೇಶದ್ರೋಹಿ' ಸಿಧುವನ್ನು ಕಾಂಗ್ರೆಸ್ಸಿನಿಂದ ಅಮಾನತು ಮಾಡಿ : ಶಿರೋಮಣಿ ಅಕಾಲಿ ದಳ 'ದೇಶದ್ರೋಹಿ' ಸಿಧುವನ್ನು ಕಾಂಗ್ರೆಸ್ಸಿನಿಂದ ಅಮಾನತು ಮಾಡಿ : ಶಿರೋಮಣಿ ಅಕಾಲಿ ದಳ

ಶೋ ನೋಡುವುದಿಲ್ಲ

ನಿಮ್ಮ ಪ್ರತಿ ಶೋವನ್ನು ಕೂಡ ನೋಡುತ್ತಿದ್ದೆ. ಆದರೆ, ಈ ಬಾರಿ ಸಿಧುವನ್ನು ಬೆಂಬಲಿಸುವ ಮೂಲಕ ನಿಮ್ಮ ಶೋವನ್ನು ನೋಡುವುದನ್ನು ನಿಲ್ಲಿಸಬೇಕು ಎಂದು ಅರ್ಥಮಾಡಿಸಿದ್ದೀರಿ. ನನ್ನ ಹತ್ತು ಸ್ನೇಹಿತರು ಮತ್ತು ಸಂಬಂಧಿಕರಿಗೂ ಹಾಗೆಯೇ ಮಾಡಲು ಹೇಳುತ್ತೇನೆ. ನಿಮಗೆ ಧಿಮಾಕು ಎಂದು ಅಕ್ಕಿ ಎಂಬುವವರು ಕಪಿಲ್‌ ಶರ್ಮಾರನ್ನು ಝಾಡಿಸಿದ್ದಾರೆ.

Array

ಚಿಕಿತ್ಸೆ ನೀಡುವುದನ್ನೇ ನಿಲ್ಲಿಸುತ್ತೀರಾ?

ಯಾವುದಾದರೂ ಕಾಯಿಲೆಗೆ ಶಾಶ್ವತ ಪರಿಹಾರ ಇಲ್ಲ ಎಂದಾದರೆ ನೀವು ಪ್ರಯತ್ನ ಪಡದೇ ಅವರನ್ನು ಸಾಯಲು ಬಿಡುತ್ತೀರಾ? ಯಾವುದೇ ಸಣ್ಣ ಮಹತ್ವದ ಬದಲಾವಣೆ ಅಥವಾ ಚಿಕಿತ್ಸೆಯನ್ನೂ ಮಾಡುವುದಿಲ್ಲವೇ? ಎಂದು ಮಾಯಾ ಎಂಬ ಟ್ವಿಟ್ಟರ್ ಖಾತೆಯಿಂದ ಕಪಿಲ್ ಶರ್ಮಾ ಅವರನ್ನು ಪ್ರಶ್ನಿಸಲಾಗಿದೆ.

ಪಾಕಿಸ್ತಾನ ಪರ ಹೇಳಿಕೆ ನೀಡಿದ್ದಕ್ಕೆ ಕಪಿಲ್ ಶರ್ಮಾ ಶೋದಿಂದ ಸಿಧು ಕಿಕ್‌ಔಟ್ಪಾಕಿಸ್ತಾನ ಪರ ಹೇಳಿಕೆ ನೀಡಿದ್ದಕ್ಕೆ ಕಪಿಲ್ ಶರ್ಮಾ ಶೋದಿಂದ ಸಿಧು ಕಿಕ್‌ಔಟ್

ಸಣ್ಣ ನೋವೂ ಇಲ್ಲ

ಅವರತ್ತ ನೋಡಿ... ಒಬ್ಬ ಜೋಕರ್‌ನಂತೆ ಮಾತನಾಡುತ್ತಿದ್ದಾರೆ! ಅವರ ಧ್ವನಿಯಲ್ಲಿ ಎಷ್ಟೊಂದು ಅಹಂಕಾರ ಇದೆ. ಹುತಾತ್ಮರಾದ ಅಷ್ಟೊಂದು ಸೈನಿಕರ ಬಗ್ಗೆ ನೋವು ಅಥವಾ ಯಾವುದೇ ಭಾವನೆ ಇಲ್ಲ. ಅಸಹ್ಯಕರ ಎಂದು ಸವಿತಾ ಸಿಂಗ್ ಎಂಬುವವರು ಕಿಡಿಕಾರಿದ್ದಾರೆ.

ಗರ್ವ ಎಲ್ಲರನ್ನೂ ನಾಶಪಡಿಸುತ್ತದೆ

ನೆನಪಿಡಿ ಕಪಿಲ್ ಶರ್ಮಾ, ಅಹಂಕಾರ ಎಲ್ಲರನ್ನೂ ನಾಶಪಡಿಸುತ್ತದೆ. ನಾನು ನಿಮ್ಮ ಅಭಿಮಾನಿಯಾಗಿದ್ದೆ. ಆದರೆ, ಭಯೋತ್ಪಾದಕರ ಬಗ್ಗೆ ಅನುಕಂಪ ಹೊಂದಿರುವ ವ್ಯಕ್ತಿ ಪರ ನೀವು ನಿಂತಿದ್ದನ್ನು ನೋಡಿ ನಿಮ್ಮ ಅಭಿಮಾನಿಯಾಗಿದ್ದಕ್ಕೆ ಹಳಿದುಕೊಳ್ಳುತ್ತಿದ್ದೇನೆ. ಪೊಲೀಸ್ ಅಧಿಕಾರಿಯ ಮಗನಾಗಿ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ನೀವು ಇಂದು ಎಲ್ಲ ಗೌರವ ಕಳೆದುಕೊಂಡಿದ್ದೀರಿ ಎಂದು ಅಪರ್ಣಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಣ್ಣ ಮಕ್ಕಳಿಗೂ ಗೊತ್ತು

ಕಪಿಲ್ ಶರ್ಮಾ ಅವರೇ, ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಹತ್ತು ವರ್ಷದ ಮಗುವಿಗೂ ತಿಳಿದಿರುತ್ತದೆ. ಮತ್ತು ನೀವು ಈಗಲೂ ಸಿಧು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ. ದೇಶದ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಿಮ್ಮ ದೇಶದ ನಿರ್ಧಾರದೊಂದಿಗೆ ನಿಲ್ಲುವುದು ನಿಮ್ಮ ಕರ್ತವ್ಯವವಲ್ಲವೇ? ಎಂದು ದಿವ್ಯಾ ಮೆಹ್ತಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಪಿಲ್ ನೈಜ ಮುಖ

ಹಾಗಾದರೆ, ಇದು ಕಪಿಲ್ ಶರ್ಮಾರ ನೈಜ ಮುಖ. ನಾವು ಅವರಿಗೆ ಹಣ ನೀಡುತ್ತೇವೆ ಮತ್ತು ಅವರು ಅದನ್ನು ದೇಶದ್ರೋಹಿಗಳಿಗೆ ದೇಣಿಗೆ ನೀಡುತ್ತಾರೆ. ಅವರನ್ನು ಬಾಯ್ಕಾಟ್ ಮಾಡುವ ಸಮಯವಿದು ಎಂದು ದಿಲೀಪ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
BoycottKapilSharma is trending in Twitter after Kapil Sharma defends Congress leader Navjot Singh Sidhu on his statement about Pulwama terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X