• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾಜಿಕ ತಾಣದಲ್ಲಿ ಪರ ವಿರೋಧದ ಅಲೆ ಎಬ್ಬಿಸಿದ ದಿಲ್ವಾಲೆ

|

ಬೆಂಗಳೂರು, ಡಿಸೆಂಬರ್, 18: ಶಾರುಖ್ ನೆಪದಿಂದ ದಿಲ್ವಾಲೆಗೆ ಗ್ರಹಣ ಹಿಡಿದಿದೆ. ಸಾಮಾಜಿಕ ತಾಣಗಳಲ್ಲಿ ದಿಲ್ವಾಲೆ ಬಗ್ಗೆ ಪರ-ವಿರೋಧದ ಅಲೆ ಎದ್ದಿದೆ. ವಿರೋಧಿಸುತ್ತಿರುವವರ ಜತೆ ಅಪ್ಪಿಕೊಂಡವರು ಇದ್ದಾರೆ. ಹಮವೆಡೆ ಚಿತ್ರ ಪ್ರದರ್ಶನಕ್ಕೆ ಪ್ರತಿಭಟನೆ ಬಿಸಿಯೂ ತಟ್ಟಿದೆ.

ಒಂದೆಡೆ #BoycottDilwale ಎಂದರೆ ಇನ್ನೊಂದೆಡೆ INDIAWALEWITHDILWALE ಎಂಬ ಪೋಸ್ಟರ್ ಗಳು ರಾರಾಜಿಸುತ್ತಿವೆ. ಶಾರುಖ್ ಖಾನ್ ಚಿತ್ರ ತಿಸರಸ್ತರಿಸಿದ ಹಿಂದೂಸ್ಥಾನಿಗಳಲ್ಲಿ ನಾನು ಒಬ್ಬ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಮುಸ್ಲಿಂ ಎಂಬ ಕಾರಣಕ್ಕೆ ಶಾರುಖ್ ಚಿತ್ರ ನೋಡಬಾರದು ಎಂದು ಯಾರೂ ಹೇಳಿಲ್ಲ, ಮುಸ್ಲಿಮರಿಗೆ ಭಾರತ ರತ್ನ ಗೌರವ ನೀಡಿದ ದೇಶ ನಮ್ಮದು, ಶಾರುಖ್ ಮಾತುಗಳು ಮಾಡಿದ ನೋವು ಅಂಥದ್ದು ಎಂಬ ಅಭಿಪ್ರಾಯಗಳು ಹರಿದಾಡುತ್ತಿವೆ.[ಅಸಹಿಷ್ಣುತೆ ಮಾತಾಡಿದ್ದ ಶಾರುಖ್ ದಿಲ್ವಾಲೆಗೆ ಚಲ್ ರೇ ಎಂದ ಪ್ರೇಕ್ಷಕ!]

ಶಾರುಖ್ ಚಿತ್ರ ತಿರಸ್ಕರಿಸಿದ ದೇಶಭಕ್ತರಿಗೆ ನನ್ನ ನಮನ, ದೇಶದ ಅನ್ನ ತಿಂದು ಹೀಗೆ ಮಾತನಾಡಿದರೆ ಸುಮ್ಮನೆ ಬಿಡ್ತಾರೆಯೇ? ಎಂಬ ಪ್ರಶ್ನೆಗಳು ಕೇಳಿಬಂದಿವೆ. ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದಿಲ್ವಾಲೆ ಚಿತ್ರ ಪ್ರದರ್ಶನಕ್ಕೆ ತಡೆಒಡ್ಡಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಶಾರುಖ್ ಅವರನ್ನು ಬೆಂಬಲಿಸೋಣ, ಅವರ ಚಿತ್ರವನ್ನು ಗೆಲ್ಲಿಸೋಣ ಎಂದು ತಂಡವೊಂದು ಟ್ವೀಟ್ ಮಾಡುತ್ತಿದೆ. ಸಾಮಾಜಿಕ ತಾಣಕ್ಕೆ ಆಹಾರವಾದ ದಿಲ್ವಾಲೆ ಚಿತ್ರದ ಒಳ ಹೊರಗನ್ನು ನೋಡಿಕೊಂಡು ಬರೋಣ...

ಹಣ ಹಾಳು ಮಾಡಬೇಡಿ

ಹಣ ಹಾಳು ಮಾಡಬೇಡಿ

ಸಿನಿಮಾಕ್ಕೆ ತೆರಳಿ ಹಣ ಹಾಳು ಮಾಡಬೇಡಿ. ಅದನ್ನು ಬಡವರಿಗೋ, ತಮಿಳುನಾಡು ಪ್ರವಾಹ ಸಂತ್ರಸ್ತರಿಗೋ ದಾನ ಮಾಡಿ-ಶೇಶಾದ್ರಿ ಅಯ್ಯರ್

ದೇಶಾಭಿಮಾನಕ್ಕೆ ಸಾಕ್ಷಿ

ದೇಶಾಭಿಮಾನಕ್ಕೆ ಸಾಕ್ಷಿ

ನಮ್ಮಲ್ಲಿ ಕೆಲವರಲ್ಲಾದರು ದೇಶಾಭಿಮಾನ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ. ಚಲನಚಿತ್ರ ನೋಡದೇ ತಿರಸ್ಕರಿಸಿದ ನನ್ನ ಎಲ್ಲಾ ದೇಶಬಾಂಧವರಿಗೆ ಅಭಿನಂದನೆಗಳು.... ಬದಲಾವಣೆಯತ್ತ ಭಾರತ ಸಾಗುತ್ತಿದೆ..... dont try to fool us....Ravi Coorg

ನಾನು ಸಿನಿಮಾ ನೋಡಲ್ಲ

ಸಹಿಷ್ಣು ದೇಶ ಭಾರತ ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅಂಥವರನ್ನು ಸೂಪರ್ ಸ್ಟಾರ್ ಮಾಡಿತ್ತು. ಅವರಿಗೆ ದೇಶದ ಬಗ್ಗೆ ಅಭಿಮಾನ ಇಲ್ಲದಿರುವಾಗ ಅಂಥವರ ಸಿನಿಮಾ ಯಾಕೆ ನೋಡಬೇಕು.

2ಜಿ ಹಗರಣದ ಹಣವಿದೆ!

ಸಿನಿಮಾವನ್ನು ವಿರೋಧಿಸಲು ಶಾರುಖ್ ಮಾತ್ರ ಕಾರಣರಲ್ಲ. ನಿರ್ಮಾಪಕ ಕರೀಮ್ ಅರಾನಿ 2 ಜಿ ಹಗರಣದಲ್ಲಿ ಭಾಗಿಯಾಗಿದ್ದರ ಬಗ್ಗೆ ದಾಖಲೆಗಳಿವೆ.

ಸಿನಿಮಾ ಸಂಭ್ರಮ

ದಿಲ್ವಾಲೆ ಸಿನಿಮಾವನ್ನು ಮೊದಲ ದಿನವೇ ವೀಕ್ಷಣೆ ಮಾಡಲು ತೆರಳಿ ಸಂಭ್ರಮ ವ್ಯಕ್ತಪಡಿಸುತ್ತಿರುವ ಯುವತಿಯರು.

ಕಾಲೇಜಲ್ಲಿ ಯಾರೂ ಇಲ್ಲವಂತೆ!

ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲ ಉಪನ್ಯಾಸಕರು ಸಹ ದಿಲ್ವಾಲೆ ಚಿತ್ರವನ್ನು ನೋಡಲು ತೆರಳಿದ್ದಾರೆ ಎಂದು ಹೇಳುತ್ತಿರುವ ವಾಟ್ಸಾಪ್ ಸಂದೇಶ.

ಅಭಿಮಾನಿಗಳ ಜಯಘೋಷ

ಶಾರುಖ್ ಖಾನ್ ಪ್ರವೇಶವಾಗುತ್ತಿದ್ದಂತೆ ದಿಲ್ವಾಲೆ ಚಿತ್ರ ನೋಡಲು ಮುಗಿಬಿದ್ದವರ ಜಯಘೋಷ.

English summary
Indians teach a good lesson to Bollywood King Shahrukh Khan by Boycotting his Dilwale Hindi film. Social Media Twitter and Facebook reflects the opinions about Dilwale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more