• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಯ್ಲೆಟ್ ಸೀಟ್ ಕವರ್ ನಲ್ಲಿ ಹಿಂದೂ ದೇವತೆಗಳ ಚಿತ್ರ; #BoycottAmazon ಟ್ವಿಟ್ಟರ್ ನಲ್ಲಿ ಟ್ರೆಂಡ್

|

ಅಮೆಜಾನ್ ಡಾಟ್ ಕಾಮ್ ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಟ್ವಿಟ್ಟರ್ ನಲ್ಲಿ #BoycottAmazon ಎಂಬುದು ಟ್ರೆಂಡಿಂಗ್ ಆಗಿದೆ. ಟಾಯ್ಲೆಟ್ ಸೀಟ್ ಕವರ್ ಹಾಗೂ ಇತರ ವಸ್ತುಗಳ ಮೇಲೆ ಹಿಂದೂ ದೇವತೆಗಳ ಚಿತ್ರ ಇರುವುದು ಅಮೆರಿಕ ಮೂಲದ ಈ ವೆಬ್ ಸೈಟ್ ನಲ್ಲಿ ಕಂಡುಬಂದಿದೆ. ಆದ್ದರಿಂದ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಸಿಟ್ಟು ವ್ಯಕ್ತವಾಗಿದೆ.

ಅಮೆಜಾನ್ ಅನ್ನು ಬಹಿಷ್ಕರಿಸಬೇಕು ಎಂಬ ಧ್ವನಿಗೆ ಸಾವಿರಾರು ಸಂಖ್ಯೆಯಲ್ಲಿ ಟ್ವಿಟ್ಟರ್ ಬಳಕೆದಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವರು ಈ ವಿಚಾರವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗಮನಕ್ಕೂ ತಂದಿದ್ದು, ಜಗತ್ತಿನ ಅತಿ ದೊಡ್ಡ ಆನ್ ಲೈನ್ ರೀಟೇಲರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅಮೆಜಾನ್ ತನ್ನ ಪ್ರತಿಕ್ರಿಯೆಯನ್ನು ನೀಡಿಲ್ಲ. ಎರಡು ವರ್ಷದ ಹಿಂದೆ ಇದೇ ಕಂಪೆನಿಯು ಕೆನಡಾ ವೆಬ್ ಸೈಟ್ ನಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹೋಲುವಂಥದ್ದನ್ನು ಕಾಲೊರೆಸುವ ಡೋರ್ ಮ್ಯಾಟ್ ಗೆ ಬಳಸಿ ಮಾರಾಟ ಮಾಡುತ್ತಿದ್ದುದು ಗಮನಕ್ಕೆ ಬಂದಿತ್ತು. 'ನಿಮ್ಮ ವೆಬ್ ಸೈಟ್ ನಿಂದ ಆ ಡೋರ್ ಮ್ಯಾಟ್ ತೆಗೆಯದಿದ್ದರೆ ಅಮೆಜಾನ್ ಸಿಬ್ಬಂದಿಗೆ ಭಾರತ ವೀಸಾ ಸಿಗುವುದಿಲ್ಲ' ಎಂದು ಬೆದರಿಕೆ ಹಾಕಿದ್ದರು.

ಟಾಯ್ಲೆಟ್ ಸೀಟ್ ಕವರ್, ಯೋಗಕ್ಕೆ ಬಳಸುವ ಹಾಸು, ಹೊದಿಕೆ ಮತ್ತಿತರ ವಸ್ತುಗಳ ಮೇಲೆ ಹಿಂದೂ ದೇವತೆಗಳು ಹಾಗೂ ಧಾರ್ಮಿಕ ಸಂಕೇತಗಳನ್ನು ಅಮೆಜಾನ್ ನ ಅಮೆರಿಕ ವೆಬ್ ಸೈಟ್ ನಲ್ಲಿ ಬಳಸಿರುವುದನ್ನು ರಾಯಿಟರ್ಸ್ ಕಂಡುಹಿಡಿದಿತ್ತು. ಸದ್ಯಕ್ಕೆ ಕೆಲ ವಸ್ತುಗಳು ಮಾರಾಟಕ್ಕೆ ಲಭ್ಯವಿಲ್ಲ. ಎರಡು ವರ್ಷದ ಹಿಂದೆ ಹೇಗೆ ಹಿಂಪದೆದಿತ್ತೋ ಅಮೆಜಾನ್ ಈಗಲೂ ಹಾಗೇ ಮಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
#BoycottAmazon twitter trending in India, know why? Here is the story about why this hash tag trending in social media on Thursday. Amazon selling toilet seat covers and other things, which contain pictures of Hindu gods.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more