ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಭಾಷ್ ಚಂದ್ರ ಬೋಸ್ 1948ರ ವರೆಗೆ ಚೀನಾದಲ್ಲಿದ್ದರು

|
Google Oneindia Kannada News

ಕೋಲ್ಕತ್ತಾ, ಸೆಪ್ಟೆಂಬರ್. 21: ನೇತಾಜಿಗೆ ಸಂಬಂಧಿಸಿದ ಕಡತಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಬಹಿರಂಗ ಮಾಡಿದ ನಂತರ ಒಂದೊಂದೇ ಮಾಹಿತಿಗಳು ಸಿಗಲಾರಂಭಿಸಿವೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1948ರ ವರೆಗೆ ಚೀನಾದ ಮಂಚೂರಿಯಾ ಎಂಬ ಪ್ರದೇಶದಲ್ಲಿ ವಾಸವಾಗಿದ್ದರು. ಹೀಗಂತ ನೇತಾಜಿಯ ಆಪ್ತ ದೇಬ್ ನಾಥ್ ದಾಸ್ ಹೇಳಿರುವ ಬಗ್ಗೆ ಬಗ್ಗೆ ಕಡತಗಳಲ್ಲಿ ಪುರಾವೆ ಸಿಕ್ಕಿದೆ.

ಪಶ್ಚಿಮ ಬಂಗಾಳ ಬಿಡುಗಡೆ ಮಾಡಿದ ಕಡತದ ನಂಬರ್ 22ರಲ್ಲಿ ನೇತಾಜಿ ಬದುಕಿನ ಬಗ್ಗೆ ಸ್ಷಷ್ಟ ಉಲ್ಲೇಖ ಕಾಣಸಿಗುತ್ತದೆ. ದಿನಾಂಕ ಆಗಸ್ಟ್ 9, 1948 ಕಾಂಗ್ರೆಸ್ ವಿರುದ್ಧ ಸಿದ್ಧಾಂತ ಹೊಂದಿದ್ದ ಐಎನ್‌ಎ ಮಾಜಿ ನಾಯಕ ದೇಬ್ ನಾಥ್ ದಾಸ್ ಎಂಬವರು ನೇತಾಜಿ ಸುಭಾಷ್ ಚಂದ್ರ ಬೋಸ್ ಚೀನಾದ ಮಂಚೂರಿಯಾ ಎಂಬಲ್ಲಿ ವಾಸವಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಹೇಳಿಕೊಂಡಿದ್ದರು ಎಂಬುದನ್ನು ಕಡತ ವಿವರಿಸುತ್ತದೆ. [ನೇತಾಜಿಗೆ ಸಂಬಂಧಿಸಿದ 64 ರಹಸ್ಯ ಕಡತ ಬಹಿರಂಗ]

Bose alive in China in 1948, indicates declassified file

ಎರಡನೇ ಮಹಾಯುದ್ಧದ ನಂತರ ಮೂರನೇ ಮಹಾಯುದ್ಧವಾಗುವ ಸಾಧ್ಯತೆ ಇದೆ ಎಂದು ವಿಮಾನ ಅಪಘಾತಕ್ಕೆ ಮುನ್ನ ನೇತಾಜಿ ದಾಸ್ ಅವರಲ್ಲಿ ಹೇಳಿದ್ದರು. ಜಪಾನ್‌ಗೆ ಪ್ರಯಾಣಿಸುತ್ತಿದ್ದ ಬೋಸ್ ತೈವಾನ್ ನಲ್ಲಿ(ಆಗಸ್ಟ್ 18, 1945) ವಿಮಾನ ಅಪಘಡಕ್ಕೆ ಸಿಕ್ಕು ಮರಣ ಹೊಂದಿದರು ಎಂದು ಆಗಸ್ಟ್ 22, 1945ರಂದು ಟೋಕಿಯೋ ರೆಡಿಯೋ ಸುದ್ದಿ ಪ್ರಸಾರ ಮಾಡಿತ್ತು. ಆದರೆ ದಾಸ್ ಪ್ರಕಾರ ಬೋಸ್ 1948 ರ ವರೆಗೂ ಬದುಕಿದ್ದರು.

ಬೋಸ್ ಬೆಂಬಲಿಗರು ಮಾಡುತ್ತಿರುವ ವಾದಕ್ಕೆ ಈ ಹೇಳಿಕೆ ಪುಷ್ಠಿ ನೀಡುವಂತಿದೆ. ದಾಸ್ ಹೇಳಿಕೆಯನ್ನು ವಿಶ್ಲೇಷಿಸುವುದಾದರೆ ನೇತಾಜಿ 1948ರ ವರೆಗೆ ಬದುಕಿದ್ದು, ದೇಶದ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ನೇತಾಜಿ ದಾಸ್ ಅವರೊಂದಿಗೆ ದಕ್ಷಿಣ ಕೋಲ್ಕತ್ತಾದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆಯೂ ಮಾತನಾಡಿದ್ದರು ಎಂಬ ದಾಖಲೆ ಕಡತದಲ್ಲಿ ಲಭ್ಯವಾಗಿದೆ.[ನೇತಾಜಿ ರಹಸ್ಯ ಬಯಲು : ಮಮತಾ ಸೂಪರ್ ಟೈಮಿಂಗ್]

ಕಾಂಗ್ರೆಸ್ ಸರ್ಕಾರ ಮತ್ತು ಆಡಳಿತದ ಬಗ್ಗೆ ಸದಾ ಮಾತನಾಡುತ್ತಿದ್ದ ದಾಸ್ ಅವರ ಮೇಲೆ ಕೋಲ್ಕತ್ತಾ ಪೊಲೀಸರು ಕಣ್ಣಿಟ್ಟಿದ್ದರು ಎಂಬ ಸಂಗತಿಯನ್ನು ಕಡತ ಹೇಳುತ್ತದೆ.

ಸೆಪ್ಟೆಂಬರ್ 18 ರಂದು ಪಶ್ಚಿಮ ಬಂಗಾಳ ಸರ್ಕಾರ ನೇತಾಜಿಗೆ ಕಣ್ಮರೆಗೆ ಸಂಬಂಧಿಸಿದ 64 ಕಡತಗಳನ್ನು ಬಹಿರಂಗ ಮಾಡಿದ್ದು ಈ ಬಗೆಯ ನೂರಾರು ವಿಚಾರಗಳು ಅದರಲ್ಲಿ ಅಡಗಿ ಕುಳಿತಿವೆ ಎಂದು ಹೇಳಲಾಗಿದೆ.

English summary
Freedom fighter Netaji Subash Chandra Bose was "alive" and "somewhere in Manchuria, China" in 1948, one of his trusted aides, Deb Nath Das, had claimed then, according to the declassified files by the West Bengal government. Among the released dossier, file No. 22 sheds light on intelligence gathered by the Bengal government (office of the deputy commissioner of police), on INA leaders, including Das.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X