ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬ್ರಿಟನ್ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ
ನವದೆಹಲಿ,ಜನವರಿ 17: ಬ್ರಿಟನ್ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ.
ನೈಋತ್ಯ ಇಂಗ್ಲೆಂಡ್ನ ಸಣ್ಣ ಕಡಲತೀರದ ರೆಸಾರ್ಟ್ ಕಾರ್ನ್ವಾಲ್ನಲ್ಲಿ ಜೂನ್ 11ರಿಂದ 13ರವರೆಗೆ ನಡೆಯಲಿರುವ ಜಿ7ರ 47ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
2021ರಲ್ಲಿ ಜಿ7 ಅಧ್ಯಕ್ಷತೆ ಮತ್ತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ ಅಧ್ಯಕ್ಷತೆಯ ಸ್ಥಾನ ಪಡೆಯಲು ನಾವು ಎದುರು ನೋಡುತ್ತಿದ್ದೇವೆ. ವಿಶ್ವಸಂಸ್ಥೆಯ ಭದ್ರತಾ ಪರಿಷತ್ಗೆ ಭಾರತ ಮರಳಿದ್ದನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಜಿ7 ಶೃಂಗಸಭೆ ಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಡಿ.15ರಂದು ಅಧಿಕೃತವಾಗಿ ಭಾರತವನ್ನು ಆಹ್ವಾನಿಸಿತ್ತು.
ಮುಂದಿನ ವರ್ಷ ಬ್ರಿಟನ್ ಆತಿಥೇಯ ಜಿ7 ಶೃಂಗಸಭೆಗೆ ಸೇರಲು ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸಹ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದಾರೆ.