ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗನಿರೋಧಕ ಶಕ್ತಿಗೆ "ಬೂಸ್ಟರ್ ಡೋಸ್" ಕೂಡ ಅಗತ್ಯ ಎಂದ ವೈದ್ಯರು

|
Google Oneindia Kannada News

ನವದೆಹಲಿ, ಜೂನ್ 10: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಶದಲ್ಲಿ ಸದ್ಯ ಮೂರು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಜನವರಿಯಿಂದ ಲಸಿಕಾ ಅಭಿಯಾನ ನಡೆಯುತ್ತಿದೆ. ಈ ನಡುವೆ ಬೂಸ್ಟರ್ ಡೋಸ್, ಅಂದರೆ ಅಧಿಕ ಒಂದು ಡೋಸ್ ಲಸಿಕೆ ನೀಡುವ ಕುರಿತು ಚರ್ಚೆಗಳು ಕೇಳಿಬಂದಿವೆ. ದೆಹಲಿ ಹಾಗೂ ಪಾಟ್ನಾದಲ್ಲಿ ಅಧ್ಯಯನ ಕೈಗೊಳ್ಳಲಾಗಿದ್ದು, ಬೂಸ್ಟರ್ ಡೋಸ್ ಅಗತ್ಯವನ್ನು ಈ ಅಧ್ಯಯನ ಎತ್ತಿಹಿಡಿದಿದೆ.

ಕೊರೊನಾ ಲಸಿಕೆಯ ಬೂಸ್ಟರ್ ಡೋಸ್‌ನಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಜೊತೆಗೆ ರೂಪಾಂತರಗೊಳ್ಳುತ್ತಿರುವ ಸೋಂಕನ್ನು ನಿಯಂತ್ರಿಸಲು ಇದು ಸಹಕಾರಿಯಾಗಬಲ್ಲದು ಎಂದು ದೆಹಲಿ ಏಮ್ಸ್‌ನ ಔಷಧ ವಿಭಾಗದ ವೈದ್ಯ ಸಂಜೀವ್ ಸಿನ್ಹಾ ತಿಳಿಸಿದ್ದಾರೆ. ಈ ಕುರಿತು ಹಲವು ಅಂಶಗಳನ್ನು ಅವರು ಹಂಚಿಕೊಂಡಿದ್ದಾರೆ. ಮುಂದೆ ಓದಿ...

Booster Dose Of Corona Vaccine Can Increase Immunity Says AIIMS Doctor

ಲಸಿಕೆ ಪಡೆದ ಆರು ತಿಂಗಳವರೆಗೂ ರಕ್ಷಣೆ

ಲಸಿಕೆ ಪಡೆದ ಆರು ತಿಂಗಳವರೆಗೂ ರಕ್ಷಣೆ

ಇದೇ ಜನವರಿ ತಿಂಗಳಿನಲ್ಲಿ ಕೊರೊನಾ ಲಸಿಕೆ ಪಡೆದ ಬಹುಪಾಲು ಜನರಿಗೆ ಎರಡನೇ ಅಲೆಯಲ್ಲಿ ತೊಂದರೆಯಾಗಿಲ್ಲ. ಲಸಿಕೆಯು ಕೊರೊನಾ ಸೋಂಕನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಲಸಿಕೆ ಪಡೆದ ಆರು ತಿಂಗಳವರೆಗೂ ರೋಗನಿರೋಧಕ ಶಕ್ತಿಯಿರುತ್ತದೆ. ನಂತರ ದೇಹದಲ್ಲಿ ಪ್ರತಿರೋಧಕ ಶಕ್ತಿ ಕ್ರಮೇಣ ತಗ್ಗಬಹುದು ಎಂಬ ಅನುಮಾನವಿದೆ. ಹೀಗಾಗಿ ಮೂರನೇ ಅಲೆಯಲ್ಲಿ ಮತ್ತೆ ಅವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಇರಬಹುದು. ಅಂಥವರಿಗೆ ಬೂಸ್ಟರ್‌ ಡೋಸ್‌ನ ಅಗತ್ಯ ಬರಬಹುದು ಎಂದು ಹೇಳಿದ್ದಾರೆ. ಜೊತೆಗೆ ಕೊರೊನಾ ಸೋಂಕು ತನ್ನ ಸ್ವರೂಪ ಬದಲಿಸಿಕೊಳ್ಳುತ್ತಿದೆ, ಸೋಂಕು ಎಷ್ಟು ಅವಧಿ ಇರುತ್ತದೋ ಅದರ ವಿರುದ್ಧ ಹೋರಾಟವೂ ಮುಂದುವರೆಯಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

ದೇಹವನ್ನು ಸೋಂಕಿನ ವಿರುದ್ಧ ಅಣಿಗೊಳಿಸುವ ಲಸಿಕೆ

ದೇಹವನ್ನು ಸೋಂಕಿನ ವಿರುದ್ಧ ಅಣಿಗೊಳಿಸುವ ಲಸಿಕೆ

"ಬೂಸ್ಟರ್ ಡೋಸ್ ಕುರಿತಂತೆ ಭಾರತ, ಅಮೆರಿಕ ಹಾಗೂ ಯುರೋಪಿಯನ್ ದೇಶಗಳಲ್ಲಿ ಸಂಶೋಧನೆ ನಡೆಯುತ್ತಿದ್ದು, ಲಸಿಕೆಯ ಈ ಹೆಚ್ಚುವರಿ ಡೋಸ್‌ಗಳು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಫ್ಲೂಗೆ ನೀಡಿದಂತೆ ಹಲವು ರೀತಿಯ ಸೋಂಕುಗಳಿಗೆ ಬೂಸ್ಟರ್ ಲಸಿಕೆ ಅಗತ್ಯವಿದೆ. ಈ ಬೂಸ್ಟರ್ ಡೋಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೂಪಾಂತರಗೊಳ್ಳುತ್ತಿರುವ ಸೋಂಕಿನ ವಿರುದ್ಧ ಹೋರಾಡಲು ದೇಹವನ್ನು ಅಣಿಗೊಳಿಸುತ್ತದೆ" ಎಂದು ಸಂಜೀವ್ ಸಿನ್ಹಾ ಹೇಳಿದ್ದಾರೆ.

ಎಷ್ಟು ಕಾಲದವರೆಗೆ ಕೊರೊನಾ ಲಸಿಕೆ ಸೋಂಕಿನಿಂದ ರಕ್ಷಣೆ ನೀಡಬಲ್ಲದು?
190 ಮಂದಿ ಮೇಲೆ ಬೂಸ್ಟರ್ ಡೋಸ್ ಪ್ರಯೋಗ

190 ಮಂದಿ ಮೇಲೆ ಬೂಸ್ಟರ್ ಡೋಸ್ ಪ್ರಯೋಗ

ದೆಹಲಿ ಹಾಗೂ ಪಾಟ್ನಾದ ಏಮ್ಸ್‌ನಲ್ಲಿ, ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಕೋವ್ಯಾಕ್ಸಿನ್‌ನ ಮೂರನೇ ಡೋಸ್, ಅಂದರೆ ಬೂಸ್ಟರ್ ಡೋಸ್ ನೀಡುವ ಕುರಿತು ವೈದ್ಯಕೀಯ ಪ್ರಯೋಗ ಆರಂಭಿಸಲಾಗಿದೆ. ಆರು ತಿಂಗಳ ಹಿಂದೆ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡ 190 ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಆರು ತಿಂಗಳ ಕಾಲ ಅಧ್ಯಯನ ನಡೆಸಲಾಗುತ್ತದೆ. ಮೂರನೇ ಡೋಸ್ ಪಡೆದ ನಂತರದ ಆರು ತಿಂಗಳವರೆಗೂ ಲಸಿಕೆ ಪಡೆದವರ ಕುರಿತು ನಿಗಾ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ರೂಪಾಂತರ ಸೋಂಕಿನ ವಿರುದ್ಧ ಬೂಸ್ಟರ್ ಡೋಸ್ ಅಗತ್ಯವಿದೆಯೇ?

ರೂಪಾಂತರ ಸೋಂಕಿನ ವಿರುದ್ಧ ಬೂಸ್ಟರ್ ಡೋಸ್ ಅಗತ್ಯವಿದೆಯೇ?

ಕೊರೊನಾ ಸೋಂಕಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದಾಯಿತು. ಆದರೆ ಈ ಲಸಿಕೆಗಳು ಪರಿಚಿತಗೊಂಡ ನಂತರ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಗಳಿಗೆ ಸದ್ಯ ಇರುವ ಈ ಲಸಿಕೆಗಳು ಹಾಗೂ ಲಸಿಕೆಗಳ ಪ್ರಮಾಣ ಪರಿಣಾಮಕಾರಿಯೇ? ಈ ಪ್ರಶ್ನೆ ಈಗ ಮುಂದಿದೆ. ಈ ರೂಪಾಂತರಗಳ ಮೇಲೆ ಲಸಿಕೆಗಳ ಪ್ರಭಾವ ಕಡಿಮೆಯಾಯಿತು ಎಂದಾದರೆ ಮೂರನೇ ಬೂಸ್ಟರ್ ಡೋಸ್ ಕೊಡುವ ಅಗತ್ಯ ಬರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಬೂಸ್ಟರ್ ಡೋಸ್ ಒಂದು ವರ್ಷದವರೆಗೂ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದ್ದಾರೆ.

English summary
Booster dose of covid vaccine can increase immunity and also help in combating a variant of concern says AIIMS, Department of Medicine Dr Sanjeev Sinha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X