ಉತ್ತರ ಪ್ರದೇಶದಲ್ಲಿ ಬಿಜೆಪಿಗೇ ಅಧಿಕಾರ ಎಂದ ಬೆಟ್ಟಿಂಗ್ ಲೋಕ!!

Posted By:
Subscribe to Oneindia Kannada

ಜೈಪುರ/ಮುಂಬೈ, ಮಾರ್ಚ್ 10: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಫಲಿತಾಂಶಗಳ ವಿಚಾರವಾಗಿ ರಾಜಸ್ಥಾನ ಹಾಗೂ ಮಹಾರಾಷ್ಟ್ರಗಳಲ್ಲಿ ವ್ಯಾಪಕ ಬೆಟ್ಟಿಂಗ್ ನಡೆಯುತ್ತಿದ್ದು, ಈ ಬೆಟ್ಟಿಂಗ್ ಲೋಕವು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬೆಟ್ಟಿಂಗ್ ಸಾಮ್ರಾಜ್ಯವು, ಉತ್ತರ ಪ್ರದೇಶದಲ್ಲಿ ಬಿಜೆಪಿಯು ಅಧಿಕಾರ ಗದ್ದುಗೆ ಹಿಡಿಯುವುದು ಬಹುತೇಕ ನಿಶ್ಚಿತ ಎಂದಿದೆ. ಪಂಜಾಬ್ ನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದೂ ಹೇಳಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.[ಉತ್ತರಪ್ರದೇಶದಲ್ಲಿ ಯಾವ ಎಕ್ಸಿಟ್ ಪೋಲ್ ಆಟ ನಡೆಯಲ್ಲ ಏಕೆ?]

Bookies give UP to BJP, see hung house in Punjab

ಈ ಎಲ್ಲಾ ವಿಚಾರಗಳೂ ಬೆಟ್ಟಿಂಗ್ ಸಾಮ್ರಾಜ್ಯದಲ್ಲಿ ಹರಿದಾಡುತ್ತಿದ್ದು ಯಾರು ಅಧಿಕಾರ ಗದ್ದುಗೆ ಹಿಡಿಯಲಿದ್ದಾರೆ. ಯಾರು ಮುಖ್ಯಮಂತ್ರಿಯಾಗಲಿದ್ದಾರೆಂಬ ಚರ್ಚೆ ಆರಂಭವಾಗಿ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ಗೆ ಕಾರಣವಾಗಿದೆ ಎಂದು ಹೇಳಲಾಗಿದೆ.[ಸಿವೋಟರ್ ಸಮೀಕ್ಷೆ : ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ?]

ಮುಂಬೈ ಹಾಗೂ ರಾಜಸ್ಥಾನದ ಸತ್ತಾ ಬಜಾರ್ ಗಳಲ್ಲಿ ಈ ಬೆಟ್ಟಿಂಗ್ ಜಾಲ ಜೋರಾಗಿದ್ದು, ಈ ಬೆಟ್ಟಿಂಗ್ ನಲ್ಲಿ ಹಣ ಹಾಕಿರುವವರು ಶನಿವಾರ ಹೊರಬೀಳಲಿರುವ ಐದು ರಾಜ್ಯಗಳ ಚುನಾವಣಾ ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Going by the predictions of the satta markets in Churu (Rajasthan) and Mumbai, the BJP is well within striking distance of forming the government in Uttar Pradesh , while Punjab is set for a cliffhanger with the Congress and the Aam Aadmi Party, says report.
Please Wait while comments are loading...