ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಬಂಪರ್: ಪ್ರಧಾನಮಂತ್ರಿ-ಕಿಸಾನ್ ಯೋಜನೆ ಇನ್ನಷ್ಟು ವಿಸ್ತರಣೆ

|
Google Oneindia Kannada News

ನವದೆಹಲಿ, ಮೇ 31: ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ 2.0 ಸರ್ಕಾರದ ಚೊಚ್ಚಲ ಸಚಿವ ಸಂಪುಟದ ಸಭೆಯಲ್ಲೇ ಮಹತ್ವದ ಆದೇಶಗಳನ್ನು ನರೇಂದ್ರ ಮೋದಿ ಅವರು ನೀಡಿದ್ದಾರೆ.

ಹುತಾತ್ಮ ಯೋಧರ ಸಂಬಂಧಿಕರ ಶಿಕ್ಷಣಕ್ಕೆ ಕುರಿತಾದ ಮಹತ್ವದ ಆದೇಶದ ಬಳಿಕ ರೈತರಿಗೆ ಶುಭ ಸುದ್ದಿ ನೀಡಿದ್ದಾರೆ. 14.5 ಕೋಟಿ ರೈತ ಸಮೂಹಕ್ಕೆ ಪ್ರಧಾನಮಂತ್ರಿ -ಕಿಸಾನ್ ಯೋಜನೆಯನ್ನು ವಿಸ್ತರಿಸಲಾಗಿದೆ.

ಅಧಿಕಾರ ವಹಿಸಿಕೊಂಡ ಬಳಿಕ ಮಹತ್ವ ಆದೇಶ ನೀಡಿದ ಮೋದಿಅಧಿಕಾರ ವಹಿಸಿಕೊಂಡ ಬಳಿಕ ಮಹತ್ವ ಆದೇಶ ನೀಡಿದ ಮೋದಿ

* ಇದೇ ವೇಳೆ ಪ್ರಧಾನಮಂತ್ರಿ ಕಿಸಾನ್ ಪಿಂಚಣಿ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಮಾಸಿಕ 3000 ರೂ. ಪಿಂಚಣಿ ನೀಡುವ ಮಹತ್ವದ ಯೋಜನೆ ಜಾರಿಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

Bonanza to farmers in first Cabinet; govt extends PM-KISAN, announces new farm pension scheme

* ಬಜೆಟ್ ನಲ್ಲಿ ಘೋಷಿಸಿದಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ(PMKSS) ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳಿಗೆ 3000 ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು.

5 ಪಟ್ಟು ಭತ್ಯೆ ಹೆಚ್ಚಳ, ಮೋದಿ ಸರ್ಕಾರದ ಬಂಪರ್ ಕೊಡುಗೆ5 ಪಟ್ಟು ಭತ್ಯೆ ಹೆಚ್ಚಳ, ಮೋದಿ ಸರ್ಕಾರದ ಬಂಪರ್ ಕೊಡುಗೆ

* 12.5 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ (2 ಹೆಕ್ಟೇರ್) ವಾರ್ಷಿಕ 6000 ರೂ(ಮೂರು ಕಂತಿನಲ್ಲಿ). ನೀಡಲಾಗುತ್ತದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

* ಈ ಎರಡು ಯೋಜನೆಗಳಿಂದ 26.5 ಕೋಟಿ ರೈತರಿಗೆ ಅನುಕೂಲವಾಗಲಿದೆ ಹಾಗೂ 2 ಕೋಟಿ ಅಧಿಕ ರೈತರನ್ನು ಸೇರಿಸಿಕೊಂಡು ಒಟ್ಟು 14.5 ಫಲಾನುಭವಿಗಳಾಗುತ್ತಾರೆ ಎಂದರು.

'ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾದ ರೈತರ ವಿವರಗಳನ್ನು ರಾಜ್ಯಗಳಿಂದ ಪಡೆಯಲಾಗುತ್ತಿದೆ. ಮೊದಲ ಕಂತಿನಲ್ಲಿ 3.11 ಕೋಟಿ ರೈತರಿಗೆ ಹಾಗೂ ಎರಡನೇ ಕಂತಿನಲ್ಲಿ 2.66 ಕೋಟಿ ರೈತರಿಗೆ ಸೌಲಭ್ಯ ಸಿಗಲಿದೆ' ಎಂದು ಹೇಳಿದರು.

English summary
In the first Cabinet meeting, the government Friday decided to extend PM-KISAN scheme to all 14.5 crore farmers in the country costing Rs 87,000 crore a year and also announced over Rs 10,000 crore pension scheme for 5 crore farmers, thereby fulfilling the BJP's poll promise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X