ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ಶ್ರೀದೇವಿಯದು ಸಹಜ ಸಾವಲ್ಲ, ಕೊಲೆ: ಡಿಜಿಪಿ ಹೇಳಿಕೆ

|
Google Oneindia Kannada News

ನವದೆಹಲಿ, ಜುಲೈ 12: ನಟಿ ಶ್ರೀದೇವಿ ದುಬೈನಲ್ಲಿ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದು ಒಂದೂವರೆ ವರ್ಷವೇ ಕಳೆದಿದೆ. ಅವರು 2018ರ ಫೆಬ್ರವರಿ 24ರಂದು ಮೃತಪಟ್ಟಿದ್ದರು. ಅವರ ಸಾವು ಆಕಸ್ಮಿಕ ಎಂದೇ ಹೇಳಲಾಗಿತ್ತು.

ಅವರ ಸಾವಿನ ಬಗ್ಗೆ ಅನುಮಾನಗಳು ಉಂಟಾಗಿದ್ದರಿಂದ ತನಿಖೆ ನಡೆಸಲಾಗಿತ್ತು. ಆದರೆ ಯುಎಇ ಅಧಿಕಾರಿಗಳು ಇದು ಆಕಸ್ಮಿಕ ಸಾವು ಎಂದೇ ಹೇಳಿದ್ದರು. ಅವರ ಸಾವಿನ ಘಟನೆ ಬಹುತೇಕ ಮರೆತು ಹೋಗುತ್ತಿರುವ ಸಂದರ್ಭದಲ್ಲಿ ಮತ್ತೆ ಅದು ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ಕೇರಳದ ಮಾಜಿ ಡಿಜಿಪಿ ರಿಷಿರಾಜ್ ಸಿಂಗ್.

ಶ್ರೀದೇವಿ ಸಾವಿನ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಶ್ರೀದೇವಿ ಸಾವಿನ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಕೇರಳದ ಸ್ಥಳೀಯ ಪತ್ರಿಕೆಯೊಂದರಲ್ಲಿ ಬರೆದಿರುವ ಅಂಕಣದಲ್ಲಿ ರಿಷಿರಾಜ್ ಸಿಂಗ್ ಅವರು ಶ್ರೀದೇವಿ ಅವರ ಸಾವಿನಲ್ಲಿ ಬೇರೆ ಯಾವುದೋ ಅನುಮಾನಾಸ್ಪದ ಕೈವಾಡ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅವರ ಸಾವು ಆಕಸ್ಮಿಕವಾಗಿ ಮುಳುಗಿ ಸಂಭವಿಸಿರಲು ಸಾಧ್ಯವಿಲ್ಲ ಎಂದಿದ್ದಾರೆ.

bollywood sridevi death in dubai murder kerala dgp rishiraj singh

ತಮ್ಮ ಸ್ನೇಹಿತರಾಗಿದ್ದ ವಿಧಿ ವಿಜ್ಞಾನ ತಜ್ಞ ಡಾ. ಉಮಾದಾಥನ್ ಅವರೊಂದಿಗೆ ಈ ಹಿಂದೆ ನಡೆಸಿದ್ದ ಸಂಭಾಷಣೆಯ ಸಂದರ್ಭದಲ್ಲಿ ಅವರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎಂದು ಸಿಂಗ್ ತಿಳಿಸಿದ್ದಾರೆ. ಇದನ್ನು ಖಚಿತಪಡಿಸಲು ಉಮಾದಾಥನ್ ಅವರು ಈಗ ಬದುಕಿಲ್ಲ.

ಪತ್ನಿ ಶ್ರೀದೇವಿ ಬಗ್ಗೆ ಭಾವುಕರಾಗಿ ಪತ್ರ ಬರೆದ ಬೋನಿಕಪೂರ್ ಪತ್ನಿ ಶ್ರೀದೇವಿ ಬಗ್ಗೆ ಭಾವುಕರಾಗಿ ಪತ್ರ ಬರೆದ ಬೋನಿಕಪೂರ್

'ವಿಧಿವಿಜ್ಞಾನ ತಜ್ಞನಾಗಿದ್ದ ನನ್ನ ಸ್ನೇಹಿತ ದಿ. ಉಮಾದಾಥನ್, ಶ್ರೀದೇವಿ ಅವರ ಸಾವು ಕೊಲೆಯಾಗಿರಬಹುದು ಮತ್ತು ಅದು ಆಕಸ್ಮಿಕ ಸಾವಲ್ಲ ಎಂದು ಬಹಳ ಹಿಂದೆಯೇ ನನಗೆ ಹೇಳಿದ್ದ. ಕುತೂಹಲ ತಡೆಯಲಾಗದೆ ಆತನ ಬಳಿ ಕೇಳಿದ್ದರಿಂದ ಆತ ಹೀಗೆ ಹೇಳಿದ್ದ' ಎಂದು ಸಿಂಗ್ ತಿಳಿಸಿದ್ದಾರೆ.

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕೆಲವು ಸಂಗತಿಗಳನ್ನು ಪ್ರಸ್ತಾಪಿಸಿದ್ದ. ಒಂದು ಅಡಿ ಆಳದ ನೀರಿನೊಳಗೆ ಎಷ್ಟೇ ನೀರು ಕುಡಿದರೂ ವ್ಯಕ್ತಿ ಮುಳುಗಲು ಸಾಧ್ಯವೇ ಇಲ್ಲ. ಯಾರಾದರೂ ಬಲವಂತವಾಗಿ ಆತನ ಎರಡೂ ಕಾಲುಗಳನ್ನು ಒತ್ತಿಹಿಡಿದು ತಲೆಯನ್ನು ನೀರಿನೊಳಗೆ ಮುಳುಗಿಸದ ಹೊರತು ಸಾಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

English summary
Kerala former DGP Rishiraj Singh claimed that Sridevi's death might have been a murder and not an accidental. He was qouting his late friend who was a forensic expert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X