ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್‌: ನಟಿ ಜೂಹಿ ಮೊಬೈಲ್ ಮಾತು ಕೇಳಿಸಿಕೊಳ್ಳಿ

By Srinath
|
Google Oneindia Kannada News

ಮುಂಬೈ, ಅ.19: ಮೊಬೈಲ್‌ ಬಳಕೆ ಮತ್ತು ವಾಯುಮಾಲಿನ್ಯವು ಮಾರಕ ಕ್ಯಾನ್ಸರ್ ಅನ್ನು ಹೇಗೆ ಪೋಷಿಸುತ್ತದೆ ಎಂಬ ಬಗ್ಗೆ ಇಲ್ಲೆರಡು ವರದಿಗಳಿವೆ ತಪ್ಪದೆ ಓದಿ.

ಮೊದಲು ಬಾಲಿವುಡ್‌ ನಟಿ ಜೂಹಿ ಮೊಬೈಲ್ ಮಾತು:
ವಿಪರೀತವಾಗಿ ಮೊಬೈಲ್‌ ಫೋನ್‌ ಬಳಸಿದರೆ ಕ್ಯಾನ್ಸರ್‌ ರೋಗ ಬರಬಹುದು. ಅಷ್ಟೇ ಅಲ್ಲ. ಮೊಬೈಲ್‌ ಟವರುಗಳು ನಾಯಿಕೊಡೆಗಳಂತೆ ಎಲ್ಲೆಡ ತಲೆ ಎತ್ತುತ್ತಿವೆ. ಇದರಿಂದ ಕೂಡ ವಿಕಿರಣ ಉಂಟಾಗಿ ಜನರಿಗೆ ಕ್ಯಾನ್ಸರ್‌ ಅಂತಹ ಮಹಾ ರೋಗಗಳು ಬರಬಹುದು ಎಂಬು ನಿತ್ಯ ಸತ್ಯ. ಆದರೆ ಇದನ್ನು ಯಾರೂ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ.

Bollywood actress Juhi Chawla precautions mobile usage cause cancer

ಇದಕ್ಕೆ ಕಾರಣ ಮೊಬೈಲ್‌ ಫೋನಿಗೆ ಜನರು ಜೋತುಬಿದ್ದಿರುವುದು. ಇಂದು ಮೊಬೈಲ್‌ ಫೋನ್‌ ಕೇವಲ ಮಾತನಾಡುವ ಸಾಧನವಾಗಿ ಉಳಿದಿಲ್ಲ. ಅದೊಂದು ಕಂಪ್ಯೂಟರ್‌ ಆಗಿಯೂ ಮಾರ್ಪಟ್ಟಿದ್ದು, ಸುಲಭ ಮನೋರಂಜನೆಯ ಸಾಧನ ಕೂಡ ಆಗಿಬಿಟ್ಟಿದೆ. ಆದರೆ ಜನರಿಗೆ ಮೊಬೈಲಿಂದ ಉಂಟಾಗುವ ಆರೋಗ್ಯ ಹಾನಿಯ ಬಗ್ಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆಯುತ್ತಿಲ್ಲ ಎಂದು ಬಾಲಿವುಡ್‌ ನಟಿ ಜೂಹಿ ಚಾವ್ಲಾ ವಿಷಾಸಿದ್ದಾರೆ.

ಸದ್ಯೋಭವಿಷ್ಯದಲ್ಲಿ ಭಾರತವು ಕ್ಯಾನ್ಸರ್‌ ಕಾಯಿಲೆಯಲ್ಲಿ ಇಡೀ ವಿಶ್ವಕ್ಕೆ ರಾಜಧಾನಿಯಾಗುವುದು ನಿಶ್ಚಿತ ಎಂಬುದನ್ನು ಮನಗಂಡು ನಟಿ ಜೂಹಿ ಈ ಕುರಿತಾಗಿ ಜನಜಾಗೃತಿಯಲ್ಲಿ ತೊಡಗಿದ್ದಾರೆ.

ಇನ್ನು, ಉಸಿರಾಡುವ ಗಾಳಿಯೂ ಕ್ಯಾನ್ಸರ್ ಕಾರಕ :
'ಬೇರೆಯವರು ಸೇದಿಬಿಟ್ಟ ಸಿಗರೇಟ್‌ನ ಹೊಗೆ ಸೇವನೆ ಅಪಾಯಕಾರಿಯೇ. ಉಸಿರಾಟಕ್ಕಾಗಿ ನಾವು ದೇಹದೊಳಕ್ಕೆ ಎಳೆದುಕೊಳ್ಳುವ ಗಾಳಿಯಲ್ಲೂ ಕ್ಯಾನ್ಸರ್‌ ಕಾರಕ ಅಂಶಗಳಿವೆ'ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್‌ ಸಂಘಟನೆ ಲಂಡನ್ನಿನಲ್ಲಿ ಹೇಳಿದೆ. [ಬೆಂಗಳೂರು ಕ್ಯಾನ್ಸರ್ ರಾಜಧಾನಿ]

2010ರಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ವಿಶ್ವಾದ್ಯಂತ ವಾಯುಮಾಲಿನ್ಯದಿಂದಾಗಿ ಶ್ವಾಸಕೋಶ ಕ್ಯಾನ್ಸರಿಗೆ ತುತ್ತಾಗಿದ್ದಾರೆ. ಮೂತ್ರಕೋಶ ಕ್ಯಾನ್ಸರ್‌ ಸಂಭಾವ್ಯತೆಯನ್ನೂ ವಾಯುಮಾಲಿನ್ಯ ಹೆಚ್ಚಿಸುತ್ತದೆ ಎಂಬುದಕ್ಕೆ ಪುರಾವೆಗಳೂ ಲಭಿಸಿವೆ ಎಂದು ಅಂತಾರಾಷ್ಟ್ರೀಯ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆ ಹೇಳಿದೆ. ಅಲ್ಲದೆ ವಾತಾವರಣದಲ್ಲಿನ ಗಾಳಿ ಮಾನವರಿಗೆ ಕ್ಯಾನ್ಸರ್‌ ಕಾರಕ ಎಂದು ವರ್ಗೀಕರಿಸಿದೆ.

ಜನರು ವಾಯುಮಾಲಿನ್ಯಕ್ಕೆ ಹೆಚ್ಚೆಚ್ಚು ತುತ್ತಾದಷ್ಟೂ ಶ್ವಾಸಕೋಶ ಕ್ಯಾನ್ಸರಿಗೆ ತುತ್ತಾಗುವ ಅಪಾಯವಿರುತ್ತದೆ. ವಿವಿಧ ಭಾಗಗಳಲ್ಲಿನ ಮಾಲಿನ್ಯಪೂರಿತ ಗಾಳಿಯ ಸೇವನೆ ಪ್ಯಾಸಿವ್‌ ಸ್ಮೋಕಿಂಗ್‌ (ಬೇರೆಯವರು ಸೇದಿಬಿಟ್ಟ ಸಿಗರೇಟ್‌ನ ಹೊಗೆ ಸೇವನೆ)ನಷ್ಟೇ ಅಪಾಯಕಾರಿ ಎಂದು ಕಂಡುಬಂದಿದೆ.

ಸಾರಿಗೆ, ವಿದ್ಯುತ್‌ ಉತ್ಪಾದನೆ, ಕೈಗಾರಿಕಾ ಅಥವಾ ಕೃಷಿ ಕ್ಷೇತ್ರದಲ್ಲಿ ಹಾಗೂ ನಿವಾಸಗಳಲ್ಲಿ ಅಡುಗೆ ವೇಳೆ ಬಿಡುಗಡೆಯಾಗುವ ಅನಿಲದಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ಇದರಿಂದಾಗಿ ಉಸಿರಾಟ ಹಾಗೂ ಹೃದ್ರೋಗ ಕೂಡ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದೆ. [ಧೂಮಪಾನಿಗಳು ಓದಲೇಬೇಕಾದ ಸಮೀಕ್ಷೆಯಿದು!]

English summary
Bollywood actress Juhi Chawla precautions mobile usage cause cancer. Juhi Chawla urged the governments support to spread awareness regarding the ill effects of radiation coming from mobile towers. The actor has been a prominent member of the movement against the mobile towers for some time now. Many people sleep with their cell phones under their pillows and there are others who keep them in their shirt pockets. She wants the government to help her in creating awareness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X