ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗಾಗಿ 2020ಕ್ಕೆ ಬರಲಿವೆ 'ಏರ್ ಫೋರ್ಸ್ ಒನ್' ವಿಮಾನಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 9: ಮುಂದಿನ ವರ್ಷದ ಜೂನ್ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಎರಡು ಹೊಸ ವಿಶೇಷ ವಿಮಾನಗಳು ಭಾರತಕ್ಕೆ ಬರಲಿವೆ. ಅವುಗಳನ್ನು ಏರ್ ಇಂಡಿಯಾ ಬದಲಿಗೆ ಭಾರತೀಯ ವಾಯುಸೇನೆ ಸುಪರ್ದಿಗೆ ನೀಡಬಹುದು ಎಂದು ಸೌತ್ ಬ್ಲಾಕ್ ನ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಬೋಯಿಂಗ್ 777- 300ER ವಿಮಾನವನ್ನು ಬೋಯಿಂಗ್ ಡಲ್ಲಾಸ್ ಕೇಂದ್ರದಲ್ಲಿ ಸಿದ್ಧಗೊಳಿಸಲಾಗುತ್ತಿದೆ. 2020ರ ಜೂನ್ ನಲ್ಲಿ ನವದೆಹಲಿಯನ್ನು ತಲುಪುವ ನಿರೀಕ್ಷೆಯಿದೆ. ವಿಮಾನದಲ್ಲಿ ಕ್ಷಿಪಣಿ ರಕ್ಷಣಾಅ ವ್ಯವಸ್ಥೆ ಕೂಡ ಇರಲಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸುವ ಬೋಯಿಂಗ್ 747- 200B ರೀತಿಯಲ್ಲೇ ಸಿದ್ಧಗೊಳ್ಳುತ್ತದೆ.

ದೆಹಲಿಯಿಂದ ಕಾಶ್ಮೀರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್: ಮೋದಿ ನವರಾತ್ರಿ ಗಿಫ್ಟ್‌ದೆಹಲಿಯಿಂದ ಕಾಶ್ಮೀರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್: ಮೋದಿ ನವರಾತ್ರಿ ಗಿಫ್ಟ್‌

ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಅಂತಲೇ ಮೀಸಲಾದ ಭಾರತದ ಮೊದಲ ವಿಮಾನ ಇದು. ಇವರು ವಿದೇಶಗಳಿಗೆ ತೆರಳುವಾಗ ಏರ್ ಇಂಡಿಯಾದ ಖಾಸಗಿ ವಿಮಾನಗಳನ್ನು ಬಳಸುತ್ತಾರೆ. ಹತ್ತಿರದ ಸ್ಥಳಗಳಿಗೆ ತೆರಳುವಾಗ ಭಾರತೀಯ ವಾಯುಸೇನೆಯ ವಿವಿಐಪಿ ವಿಮಾನಗಳನ್ನು ಬಳಸುತ್ತಾರೆ.

Boeing 777 Air Crafts Will Be Arrive In Delhi in 2020 For PM Modi

ಸ್ಪೆಷಲ್ ಪ್ರೊಟೆಕ್ಷನ್ ಸೂಟ್ ಹೊಂದಿರುವ ಮೊದಲ ಭಾರತೀಯ ವಿಮಾನ ಬೋಯಿಂಗ್ 777 ಆಗಲಿದೆ. ಇದು ಶತ್ರು ದೇಶಗಳ ರಾಡಾರ್ ತರಂಗಗಳನ್ನು ಕೂಡ ತಡೆಯಬಲ್ಲದು. ಉಷ್ಣತೆ ಬೇಡುವ ಕ್ಷಿಪಣಿಗಳ ದಿಕ್ಕು ತಪ್ಪಿಸಬಲ್ಲದು. ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ಯಾವುದೇ ಸಿಬ್ಬಂದಿ ಸಹಾಯ ಇಲ್ಲದೆ ನಿಗಾ ಮಾಡಬಲ್ಲದು.

ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತಕ್ಕೆ ಸರ್ಕಾರ ಯೋಚಿಸುತ್ತಿರುವುದರಿಂದ ಭಾರತೀಯ ವಾಯು ಸೇನೆ ಸುಪರ್ದಿಯಲ್ಲಿ ಈ ವಿಮಾನಗಳು ಇರುತ್ತವೆ. ಈ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ 19 ಕೋಟಿ ಅಮೆರಿಕನ್ ಡಾಲರ್ ವೆಚ್ಚವಾಗಿದೆ ಎಂದು ಮೂಲಗಳು ತಿಳಿಸಿವೆ.

English summary
Boeing 777 air crafts along with advanced missile system will arrive in Delhi on 2020 January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X