ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಾ ನದಿಯಲ್ಲಿ ದೋಣಿ ಮುಳುಗಡೆ, 11 ಮಂದಿ ಜಲಸಮಾಧಿ

|
Google Oneindia Kannada News

ವಿಜಯವಾಡ, ನವೆಂಬರ್ 12 : ಆಂಧ್ರಪ್ರದೇಶದ ಕೃಷ್ಣಾ ನದಿಯಲ್ಲಿ ದೋಣಿ ಮುಳುಗಡೆಯಾಗಿದ್ದು, 11 ಜನರು ಜಲಸಮಾಧಿಯಾಗಿದ್ದಾರೆ. 20ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಭಾನುವಾರ ಕೃಷ್ಣಾ ಜಿಲ್ಲೆಯ ಇಬ್ರಾಹಿಂ ಪಟ್ಟಣದಲ್ಲಿ ಈ ದುರಂತ ನಡೆದಿದೆ. 35 ಪ್ರವಾಸಿಗರಿದ್ದ ದೋಣಿ ಭವಾನಿ ಐಲ್ಯಾಂಡ್‌ನಿಂದ ಪವಿತ್ರ ಸಂಗಮಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮಂಗಳೂರು: ಸಮುದ್ರ ಮಧ್ಯೆ ಸುಟ್ಟು ಕರಕಲಾದ ಬೋಟ್ಮಂಗಳೂರು: ಸಮುದ್ರ ಮಧ್ಯೆ ಸುಟ್ಟು ಕರಕಲಾದ ಬೋಟ್

board capsized

11 ಪ್ರವಾಸಿಗರು ಈ ದುರಂತದಲ್ಲಿ ಜಲಸಮಾಧಿಯಾಗಿದ್ದು ಅವರ ದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ 20 ಪ್ರವಾಸಿಗರು ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರೆದಿದೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.

ರೋಹಿಂಗ್ಯಾ ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ 12 ಸಾವುರೋಹಿಂಗ್ಯಾ ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ 12 ಸಾವು

ಅಗ್ನಿ ಶಾಮಕ ದಳ, ಪೊಲೀಸರು ನಾಪತ್ತೆಯಾದವರನ್ನು ಹುಡುಕಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಂಧ್ರಪ್ರದೇಶ ಡಿಜಿಪಿ ಸಾಂಭಶಿವರಾವ್ ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

English summary
At least 26 were feared dead after a boat carrying 38 people on board capsized at Pavitra Sangamam ghat in river Krishna on Sunday, November 12, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X