ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಟ್ವಿಟ್ಟರ್‌ ಖಾತೆಗೆ ಮತ್ತೆ ಬಂತು ಬ್ಲ್ಯೂ ಟಿಕ್ ಮಾರ್ಕ್

|
Google Oneindia Kannada News

ನವದೆಹಲಿ, ಜೂನ್ 05: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ ಟಿಕ್ ಮಾರ್ಕ್ ತೆಗೆದು ಹಾಕಿ ಕೆಲವೇ ಗಂಟೆಗಳ ಮತ್ತೆ ಟಿಕ್ ಮಾರ್ಕ್ ಕಾಣಿಸಿಕೊಂಡಿದೆ.

ಜುಲೈ 2020ರಿಂದ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆ ಸಕ್ರಿಯವಾಗಿರಲಿಲ್ಲ ಎನ್ನುವ ಕಾರಣಕೊಟ್ಟು ಟ್ವಿಟ್ಟರ್ ಬ್ಲ್ಯೂ ಟಿಕ್ ಮಾರ್ಕ್ ತೆಗೆದುಹಾಕಿತ್ತು.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯಿಂದ ಬ್ಲ್ಯೂ ಟಿಕ್ ಮಾರ್ಕ್ ತೆಗೆದ ಟ್ವಿಟ್ಟರ್ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯಿಂದ ಬ್ಲ್ಯೂ ಟಿಕ್ ಮಾರ್ಕ್ ತೆಗೆದ ಟ್ವಿಟ್ಟರ್

ಕಳೆದ ಕೆಲ ತಿಂಗಳ ಹಿಂದೆ ಟ್ವಿಟ್ಟರ್​ ಬ್ಲೂ ಟಿಕ್​ ವೇರಿಫಿಕೇಶನ್​ ಬ್ಯಾಡ್ಜ್​ ಆಯ್ಕೆಯನ್ನು ಮತ್ತೆ ಪ್ರಾರಂಭಿಸಿದೆ. 2017ರ ನಂತರ ಸ್ಥಗಿತಗೊಳಿಸಿದ ಈ ಪ್ರಕ್ರಿಯೆಯನ್ನು ಇದೀಗ ಪ್ರಾರಂಭಸಿದೆ. ಮುಂದಿನ ಕೆಲವು ವಾರಗಳಲ್ಲಿ ಹೊಸ ಧೃಢೀಕರಣ ಆಯ್ಕೆಯನ್ನು ಕಲ್ಪಿಸುತ್ತಿದ್ದೇವೆ ಎಂದು ತಿಳಿಸಿತ್ತು.

Blue Tick Restored on Venkaiahs Personal Twitter Handle

ಟ್ವಿಟ್ಟರ್ ಅರ್ಹತೆ ಇರುವವರಿಗಾಗಿ ಮಾತ್ರ ಬ್ಯೂ ಬ್ಯಾಡ್ಜ್ ನೀಡುತ್ತಿದೆ. ಇನ್ನು ಖಾತೆ ವೈರಿಫೈಡ್ ಆದರೆ ಮಾತ್ರ ಅವರ ಹೆಸರಿನ ಮುಂದೆ ನೀಲಿ ಬಣ್ಣದ ಬ್ಲೂ ಟಿಕ್ ಕಾಣಿಸುತ್ತದೆ. ಟ್ವಿಟ್ಟರ್ ಕೆಲವು ಮಾರ್ಗಸೂಚಿಯನ್ನು ಹೊರಡಿಸಿದ್ದು, ಅದನ್ನು ಪಾಲಿಸಬೇಕು ಎಂದು ಸಂಸ್ಥೆ ತಿಳಿಸಿತ್ತು. ವೈಸ್ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂಬ ಕಚೇರಿ ಅಧಿಕೃತ ಖಾತೆಯ ಬ್ಲೂ ಟಿಕ್ ಮಾರ್ಕ್ ಹಾಗೆಯೇ ಉಳಿಸಿಕೊಂಡಿತ್ತು.

ಬಳಿಕ ಟ್ವಿಟ್ಟರ್‌ ಬಳಿ ಮಾತನಾಡಿದ್ದು, ಇದೀಗ ಟ್ವಿಟ್ಟರ್ ಬ್ಲ್ಯೂ ಟಿಕ್‌ ಮಾರ್ಕ್ ವಾಪಸ್ ನೀಡಿದೆ. ಇನ್ನು ಬ್ಲೂ ಟಿಕ್​ ಟಿಕ್​ ಹೊಂದಿದ ಖಾತೆಯು ಸಕ್ರಿಯವಾಗಿರಬೇಕು. ಸರ್ಕಾರದಿಂದ ಗುರುತಿಸಿಕೊಂಡಿರುವ, ಬ್ರಾಂಡ್​ಗಳು, ಲಾಭ ರಹಿತ ಸಂಸ್ಥೆ, ಸುದ್ದಿ ಸಂಸ್ಥೆಗಳಿಗೆ ಟ್ವಿಟ್ಟರ್​ ಬ್ಲೂ ಟಿಕ್​ ನೀಡುತ್ತದೆ.

English summary
Hours after removing the verified blue tick, Twitter on Saturday restored it on the personal handle of vice president M Venkaiah Naidu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X