ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 31ರಂದು ಬ್ಲೂ ಮೂನ್ ದರ್ಶನ ಮಿಸ್ ಮಾಡ್ಕೊಳ್ಬೇಡಿ!

|
Google Oneindia Kannada News

ಬೆಂಗಳೂರು, ಅ. 29: ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ -ಕವಿ, ವಿಜ್ಞಾನಿ, ಅಬಾಲವೃದ್ಧರಾದಿಯಾಗಿ ಎಲ್ಲರ ಆಕರ್ಷಣೆಯ ವಿಷಯ. ಈ ಬಾರಿ ಅಕ್ಟೋಬರ್ 31ರಂದು ಬ್ಲೂ ಮೂನ್ ದರ್ಶನವಾಗಲಿದ್ದು, ಮತ್ತೊಮ್ಮೆ ಚಂದ್ರ ಟ್ರೆಂಡಿಂಗ್ ನಲ್ಲಿದ್ದಾನೆ.

ಕೊರೊನಾವೈರಸ್ ಕಾರ್ಮೋಡದ ನಡುವೆ ಏಪ್ರಿಲ್ ತಿಂಗಳಿನಲ್ಲಿ ಖಗೋಳ ವಿಸ್ಮಯವೊಂದನ್ನು ವೀಕ್ಷಿಸುವ ಅವಕಾಶ ಭಾರತೀಯರಿಗೆ ಲಭಿಸಿತ್ತು. ಹುಣ್ಣಿಮೆಯ ಚಂದಿರ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದ ಬಾಲ್ಕನಿ, ಮನೆ ಮಹಡಿಯಿಂದ ಸೂಪರ್ ಪಿಂಕ್ ಚಂದ್ರನನ್ನು ನೋಡಿ ಆನಂದಿಸಿದ್ದರು. ನಂತರ ಜೂನ್ ತಿಂಗಳಿನಲ್ಲಿ ಸ್ಟ್ರಾಬೆರಿ ಚಂದ್ರ ಕಾಣಿಸಿದ್ದ ಈಗ ಮೈಕ್ರೋ ಮೂನ್ ಅಥವಾ ಬ್ಲೂ ಮೂನ್ ಸರದಿ.

ಚಂದ್ರನಲ್ಲಿದೆ ಭಾರಿ ಪ್ರಮಾಣ ನೀರು, 'ಸೋಫಿಯಾ' ಹೇಳಿದ್ದೇನು?ಚಂದ್ರನಲ್ಲಿದೆ ಭಾರಿ ಪ್ರಮಾಣ ನೀರು, 'ಸೋಫಿಯಾ' ಹೇಳಿದ್ದೇನು?

ಏನಿದು ಬ್ಲೂ ಮೂನ್?:
ನೀಲಿ ಚಂದ್ರ ಎಂದರೆ ಒಂದು ತಿಂಗಳಿನಲ್ಲಿ ಎರಡು ಹುಣ್ಣಿಮೆಗಳು ಬಂದರೆ ಅದನ್ನು 'ನೀಲಿ ಚಂದ್ರ', 'ಬ್ಲೂ ಮೂನ್' ಎನ್ನಲಾಗುತ್ತದೆ. ಚಂದ್ರನ ಬಣ್ಣವೇನು ನೀಲಿ ಬಣ್ಣಕ್ಕೆ ತಿರುಗುವುದಿಲ್ಲ. ತಿಂಗಳಿನಲ್ಲಿ ಎರಡು ಬಾರಿ ಹುಣ್ಣಿಮೆಯಾಗಿ, ಆ ಸಮಯದಲ್ಲಿ ಚಂದ್ರಗ್ರಹಣವಾದರೆ ಅದಕ್ಕೆ ಆಗ ಬ್ಲ್ಯೂ ಬ್ಲಡ್ ಮೂನ್, ರಕ್ತ ನೀಲಿ ಚಂದಿರ ಎಂದು ಕರೆಯಲಾಗುತ್ತದೆ.

Blue Moon is all set to grace the sky on October 31

ಚಿತ್ರಗಳಲ್ಲಿ: ಮೋಡದ ಮರೆಯಲ್ಲಿ ಕಾಣಿಸಿದನೇ ಸೂಪರ್ ಚಂದಿರ ಚಿತ್ರಗಳಲ್ಲಿ: ಮೋಡದ ಮರೆಯಲ್ಲಿ ಕಾಣಿಸಿದನೇ ಸೂಪರ್ ಚಂದಿರ

2020ರಲ್ಲಿ ಅಕ್ಟೋಬರ್ 1 ಹಾಗೂ 2 ರ ರಾತ್ರಿ ವೇಳೆ ಹಾಗೂ ಅಕ್ಟೋಬರ್ 31ರಂದು ಹೀಗೆ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಬಂದಿರುವುದರಿಂದ ಬ್ಲೂ ಮೂನ್ ಚಂದಿರ ದರ್ಶನ ಸಿಗಲಿದೆ. ಅಕ್ಟೋಬರ್ 31ರಂದು ರಾತ್ರಿ 8.19 ರಿಂದ ಪೂರ್ಣ ಚಂದ್ರನನ್ನು ನೋಡಬಹುದು. ಪ್ರತಿ 30 ತಿಂಗಳಿಗೊಮ್ಮೆ ಫೆಬ್ರವರಿ ತಿಂಗಳನ್ನು ಹೊರತುಪಡಿಸಿ ಬ್ಲೂ ಮೂನ್ ಕಾಣಬಹುದಾಗಿದೆ ಎಂದು ನೆಹರೂ ತಾರಾಲಯದ ಅರವಿಂದ್ ಪರಾಂಜಪೆ ತಿಳಿಸಿದ್ದಾರೆ.

English summary
The 'Blue Moon' will be visible in the night sky on October 31st from around 8.19 PM. Everything you need to know in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X