ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಟ್ಟೆ ಹುಣ್ಣಾಗುವಂತೆ ನಗಿಸುವ ಗುರ್ಗಾಂವಿನ ಖಗೋಳ ವಿಸ್ಮಯ!

|
Google Oneindia Kannada News

ಗುರ್ಗಾಂವ್, ಜನವರಿ 22: ಹರ್ಯಾಣ ರಾಜ್ಯದ ಗುರ್ಗಾಂವಿನಲ್ಲಿ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಆಕಾಶದಿಂದ ವಿಲಕ್ಷಣ ವಸ್ತುವೊಂದು ಬಿದ್ದಿದ್ದು ಕಾಣಿಸಿತ್ತು. ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರಾಜ್ಬಿರ್ ಯಾದವ್ ಗೆ ಆ ವಸ್ತುವನ್ನು ಬೀಳುತ್ತಿದ್ದಂತೆಯೇ ಮೊದಲು ಅನ್ನಿಸಿದ್ದು, 'ಇದು ಯಾವುದಾದರೂ ಕ್ಷಿಪಣಿ ಇರಬಹುದಾ? ಅಥವಾ ಬಾಂಬ್? ಇಲ್ಲಾ ಉಲ್ಕೆಯಾ?' ಎಂಬ ಪ್ರಶ್ನೆ.

ತಡಮಾಡದೆ ಈ ವಿಷಯವನ್ನು ಗ್ರಾಮದ ಮುಖ್ಸ್ಥರಿಗೆ ತಿಳಿಸಿದ ರೈತ. ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಇದು ಖಂಡಿತ ಖಗೋಳ ವಿಸ್ಮಯ ಎಂದರು ಕೆಲವರು. ಇದು ಅನ್ಯಗ್ರಹ ಜೀವಿಗಳು ನಮಗೆ ನೀಡಿದ ಉಡುಗೊರೆ ಎಂದರು ಮಕ್ಕಳು! ಒಟ್ಟಿನಲ್ಲಿ ಆಗಸದಿಂದ ಬಿದ್ದ ಆ ಕಲ್ಲಿನಂಥ ವಸ್ತುವಿನ ಸುತ್ತ ಜನಸಾಗರವೇ ನೆರೆದುಬಿಟ್ಟಿತ್ತು.

ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ-ಅಂತರಿಕ್ಷದ ಅದ್ಭುತ ಚಿತ್ರಗಳ ಸರಣಿಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ-ಅಂತರಿಕ್ಷದ ಅದ್ಭುತ ಚಿತ್ರಗಳ ಸರಣಿ

ಸುದ್ದಿ ಹವಾಮಾನ ಇಲಾಖೆಗೆ, ನೈಸರ್ಗಿಕ ವಿಪತ್ತು ನಿರ್ವಹಣ ಮಂಡಳಿಗೂ ತಲುಪಿತು. ಓಡೋಡಿ ಬಂದ ಈ ತಂಡಗಳು ಆ ವಿಲಕ್ಷಣ ವಸ್ತುವಿನ ಮುಂದೆ ನಿಂತು, ಅಳಬೇಕೋ, ನಗಬೇಕೋ ತಿಳಿಯದೆ ಜನರ ಮುಖವನ್ನೆಲ್ಲ ನೋಡುತ್ತ ನೀತರು.

Blue ice and celestial gift: A humorous story from Gurgoan

ಏಕೆಂದರೆ ಜನರೆಲ್ಲ ಖಗೋಳ ವಿಸ್ಮಯ ಎಂದುಕೊಂಡಿದ್ದ, ಅನ್ಯಗ್ರಹ ಜೀವಿಗಳು ನೀಡಿದ ಉಡುಗೊರೆ ಎಂದುಕೊಂದಿದ್ದ ಆ ವಸ್ತು, ಯಾವುದೋ ವಿಮಾನದಿಂದ ಬಿದ್ದ ಟಾಯ್ಲೆಟ್ ವೇಸ್ಟ್ ಆಗಿತ್ತು! ವಿಮಾನಗಳಲ್ಲಿ ಹೆಪ್ಪುಗಟ್ಟಿಸುವ ಈ ಟಾಯ್ಲೆಟ್ ವೇಸ್ಟ್ ಗಳನ್ನು ಬ್ಲೂ ಐಸ್ ಎಂದೇ ಕರೆಯಲಾಗುತ್ತದೆ.

'ಇದು ಯಾವುದೋ ವಿಮಾನದಿಂದ ಸೋರಿಕೆಯಾದ ಟಾಯ್ಲೆಟ್ ವೇಸ್ಟ್. ಯಾವುದೇ ಖಗೋಳ ವಿಸ್ಮಯವೂ ಅಲ್ಲ. ಆದರೂ ಜನರ ಸಮಾಧಾನಕ್ಕಾಗಿ ಇದನ್ನು ಪ್ರಯೋಗಾಲಕ್ಕೆ ಕಳಿಸಿ, ವರದಿ ನೀಡಲು ತಿಳಿಸಿದ್ದೇವೆ' ಎಂದು ನೈಸರ್ಗಿಕ ವಿಪತ್ತು ನಿರ್ವಹಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

English summary
People of Gurgaon(Gurugram), Haryana thought, blue ice -a term used for frozen toilet waste leaking from aircraft- as a celestial gift! Here is a humorous story!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X