ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ಮೂಲಕ ರಕ್ತ ಲಭ್ಯತೆ ಮಾಹಿತಿ ಪಡೆಯಿರಿ

|
Google Oneindia Kannada News

ನವದೆಹಲಿ, ಡಿ. 6: ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಗುಂಪಿನ ರಕ್ತಕ್ಕೆ ಬ್ಲಡ್ ಬ್ಯಾಂಕ್ ಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬ್ಲಡ್ ಬ್ಯಾಂಕ್ ವ್ಯವಸ್ಥೆ ಇನ್ನಷ್ಟು ಸುಧಾರಿಸಲು ಮುಂದಾಗಿರುವ ಸರ್ಕಾರ ಎಲ್ಲ ಬ್ಲಡ್ ಬ್ಯಾಂಕ್ ಗಳಿಗೂ ಆನ್ ಲೈನ್ ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ದೇಶದ ಹಲವು ಭಾಗದಲ್ಲಿ ಬ್ಲಡ್ ಬ್ಯಾಂಕ್ ಗಳಿದ್ದರೂ ಜನರು ತಮಗೆ ಅಗತ್ಯವಿರುವ ರಕ್ತಕ್ಕಾಗಿ ಅಲೆಯಬೇಕಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಲು ಇಂಥ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಶುಕ್ರವಾರ ಲೋಕಸಭೆಗೆ ತಿಳಿಸಿದರು.[ಮಂಗಳೂರು : ತುರ್ತಾಗಿ ರಕ್ತ ಬೇಕೆ, ವೆಬ್ ಸೈಟ್ ನೋಡಿ]

blood

ವಿಶ್ವಸಂಸ್ಥೆ ಗುರುತಿಸಿರುವ ಸುರಕ್ಷಿತ ಮತ್ತು ಉತ್ತಮ ಬ್ಲಡ್ ಬ್ಯಾಂಕ್ ಹೊಂದಿರುವ 51 ದೇಶಗಳ ಪೈಕಿ ಭಾರತವೂ ಸ್ಥಾನ ಪಡೆದುಕೊಂಡಿದೆ. ಆನ್ ಲೈನ್ ವ್ಯವಸ್ಥೆ ಜಾರಿಯಾದರೆ ಈ ವ್ಯವಸ್ಥೆ ಇನ್ನಷ್ಟು ಭದ್ರವಾಗಲಿದೆ ಎಂದು ಹೇಳಿದರು.[ತೀವ್ರ ರಕ್ತ ಸ್ರಾವದಿಂದ ಮೃತಪಟ್ಟ ಕ್ರಿಕೆಟಿಗ ಹ್ಯೂಸ್]

ದೇಶಾದ್ಯಂತ ಇನಷ್ಟು ಬ್ಲಡ್ ಬ್ಯಾಂಕ್ ತೆರಯುವ ಚಿಂತನೆಯನ್ನು ನಡೆಸಲಾಗಿದ್ದು ಜನರಿಗೆ ಅಗತ್ಯವಾದ ಗುಂಪಿನ ಬ್ಲಡ್ ಎಲ್ಲಿ ಲಭ್ಯವಿದೆ? ಎಂಬುದು ತಕ್ಷಣ ಗೊತ್ತಾಗಬೇಕು. ಆನ್ ಲೈನ್ ವ್ಯವಸ್ಥೆ ಇದಕ್ಕೆ ಪರಿಹಾರವಾಗಬಲ್ಲದು ಎಂದು ತಿಳಿಸಿದರು.

English summary
Government will explore the possibility of establishing a mechanism where people can check online the availability of required blood groups in blood banks across the country, Health Minister J P Nadda told Lok Sabha on Friday. He said during Question Hour that government is taking initiative to digitise the entire blood bank network and improve the system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X