• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಛತ್ತೀಸ್ ಗಢದ ಚುನ್ ಚುನಾದ ಮತಗಟ್ಟೆ ಬಳಿ ಸ್ಫೋಟ

|

ರಾಯ್ ಪುರ್, ಏಪ್ರಿಲ್ 23: ಇಲ್ಲಿನ ಬಲರಾಂಪುರ ಜಿಲ್ಲೆಯ ಚುನ್ ಚುನಾದ ಮತಗಟ್ಟೆ ಬಳಿ ಬೆಳಗ್ಗೆ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟ ಸಂಭವಿಸಿದೆ. ಆದರೆ, ಇದರಿಂದ ಧೃತಿಗೆಡದ ಚುನಾವಣಾಧಿಕಾರಿಗಳು, ಮತಕೇಂದ್ರವನ್ನು ಬದಲಾಯಿಸಿ, ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಏಪ್ರಿಲ್ 22ರಂದು ಛತ್ತೀಸ್ ಗಢದ ಬಸಂತ್ ಪುರ್ ನಿಂದ ಬಲರಾಂಪುರಕ್ಕೆ ಬರುವಾಗ ಚುನಾವಣಾಧಿಕಾರಿಯೊಬ್ಬರು ಅಪಘಾತದಲ್ಲಿ ಮೃತಪಟ್ಟು, ಐವರು ಇತರೆ ಸಿಬ್ಬಂದಿಗಳಿಗೆ ಗಾಯಗಳಾಗಿ ಆಸ್ಪತ್ರೆಗೆ ಸೇರಿದ ಘಟನೆ ನಡೆದ ಬೆನ್ನಲ್ಲೇ ಇಂದು ಈ ಬಾಂಬ್ ಸ್ಫೋಟ ಸಂಭವಿಸಿದೆ.

ಲೋಕಸಭೆ ಚುನಾವಣೆ LIVE: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ಬಾಂಬ್ ಎಸೆತ

ಚುನ್ ಚುನಾ ಮತಗಟ್ಟೆ ಹಾಗೂ ಪುದಂಗ್ ಮತಗಟ್ಟೆ ಬಳಿ ಕಡಿಮೆ ತೀವ್ರತೆಯುಳ್ಳ ಬಾಂಬ್ ಸ್ಫೋಟವಾಗಿದ್ದು, ಯಾವುದೇ ಹಾನಿಯಾಗಿಲ್ಲ. ಬಲರಾಂಪುರ್ ಜಿಲ್ಲೆಯ ಬಂದರ್ ಚುವಾ ಗ್ರಾಮದಲ್ಲಿ ಮತದಾನ ಪ್ರಕ್ರಿಯೆಗೆ ಯಾವುದೆ ಅಡ್ಡಿಯುಂಟಾಗಿಲ್ಲ. ಸ್ಫೋಟದ ನಂತರವೂ ಮತದಾರರು ಭಯಭೀತರಾಗದೆ ಬದಲಿ ಮತಕೇಂದ್ರದತ್ತ ಸಾಗಿ ಮತದಾನ ಮಾಡುತ್ತಿದ್ದಾರೆ ಎಂದು ವರದಿ ಬಂದಿದೆ.

ಮೊದಲ ಎರಡು ಗಂಟೆ ಅವಧಿ(9.30ಕ್ಕೆ)ಯಲ್ಲಿ ಶೇ12.08ರಷ್ಟು ಮತದಾನ ದಾಖಲಾಗಿದ್ದೆ. ರಾಯ್ ಪುರ್, ದುರ್ಗ್, ಬಿಲಾಸ್ ಪುರ್, ಕೊರ್ಬಾ, ಜಂಜ್ಗಿರ್ ಚಂಪಾ(ಎಸ್ ಸಿ), ಸುರ್ಗುಜಾ(ಎಸ್ಟಿ), ರಾಯ್ ಗಢ(ಎಸ್ಟಿ) ಲೋಕಸಭಾ ಕ್ಷೇತ್ರಗಳಲ್ಲಿ ಭಾರಿ ಬಿಗಿ ಬಂದೋಬಸ್ತ್ ನಡುವೆ ಮತದಾನ ಪ್ರಕ್ರಿಯೆ ನಡೆಸಲಾಗುತ್ತಿದೆ.

7 ಸ್ಥಾನಗಳಿಗಾಗಿ 123 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,27,13,816 ಮತದಾರರಿದ್ದು, 15,408 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 60 ಸಾವಿರ ಭದ್ರತಾ ಪಡೆ ಸಿಬ್ಬಂದಿ, ಪ್ಯಾರಾ ಮಿಲಿಟರಿ, ರಾಜ್ಯ ಪೊಲೀಸರು ಮತಗಟ್ಟೆಗಳನ್ನು ಕಾಯುತ್ತಿದ್ದಾರೆ.

English summary
Blast in Chhattisgarh near Chun Chuna and Pundang polling booths; EC officials shift booths to resume polling .A small intensity blast has been reported in Bandarchua village in Balrampur district of Chhattisgarh. It is being said that it was done to discourage voters from participating in the elections. After the blast, the Chun Chuna and Pundang polling booths have been shifted to other parts of Bandarchua after the blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X