ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾನಿಯಂತ್ರಿತ ರೈಲ್ವೆ ಬೋಗಿಗಳ ಬ್ಲಾಂಕೆಟ್‌ 2 ತಿಂಗಳಿಗೊಮ್ಮೆ ವಾಷ್‌

By Nayana
|
Google Oneindia Kannada News

Recommended Video

AC ರೈಲ್ವೆ ಬೋಗಿಗಳ ಬ್ಲಾಂಕೆಟ್‌ ವಾಶ್ ಆಗೋದು ಯಾವಾಗ ? | Oneindia kannada

ಬೆಂಗಳೂರು, ಜೂನ್‌ 27: ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್‌ಗಳನ್ನು ಇನ್ನು ಮುಂದೆ ತಿಂಗಳಿಗೆ ಎರಡು ಬಾರಿ ತೊಳೆಯಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.ಪ್ರಸ್ತುತ ಎಸಿ ಪ್ರಯಾಣಿಕರ ಬ್ಲಾಂಕೆಟ್ ಗಳನ್ನು ಎರಡು ತಿಂಗಳಿಗೊಮ್ಮೆ ಶುಚಿಗೊಳಿಸಲಾಗುತ್ತಿತ್ತು.

ಪದೇಪದೇ ತೊಳೆಯುವುದರಿಂದ ಬ್ಲಾಂಕೆಟ್ ಸಹ ಕಡಿಮೆ ಬಾಳಿಕೆ ಬರುತ್ತದೆ. ಇಷ್ಟು ದಿನ ನಾಲ್ಕು ವರ್ಷ ಬರುತ್ತಿದ್ದ ಬ್ಲಾಂಕೆಟ್ ಇನ್ನು ಮುಂದೆ ಕೇವಲ ಎರಡು ವರ್ಷ ಬಾಳಿಕೆ ಬರಲಿದೆ. ಇದರಿಂದ ಎಸಿ ಪ್ರಯಾಣಿಕರಿಗೆ ತಗುಲುವ ವೆಚ್ಚ ಡಬಲ್ ಆಗಲಿದೆ ಎಂದು ಅವರು ಹೇಳಿದ್ದಾರೆ.

ಸಬ್‌ಸ್ಟೇಷನ್‌ ಅಪೂರ್ಣ: ಬೆಂಗಳೂರು-ಮೈಸೂರು ವಿದ್ಯುತ್‌ ರೈಲು ವಿಳಂಬಸಬ್‌ಸ್ಟೇಷನ್‌ ಅಪೂರ್ಣ: ಬೆಂಗಳೂರು-ಮೈಸೂರು ವಿದ್ಯುತ್‌ ರೈಲು ವಿಳಂಬ

ಕಳೆದ 10 ವರ್ಷಗಳಿಂದ ಬ್ಲಾಂಕೆಟ್ ಬೆಲೆ ಪರಿಷ್ಕರಿಸಿಲ್ಲ. ಈಗ ಮೊದಲಿನ ದರಕ್ಕಿಂತಲೂ ಸ್ವಲ್ಪ ದುಬಾರಿಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತೀಯ ರೇಲ್ವೆಯ ಎಸಿ ಪ್ರಯಾಣಿಕರಿಗಾಗಿ ನಿತ್ಯ 3.90 ಲಕ್ಷ ಬ್ಲಾಂಕೆಟ್ ಗಳ ಅಗತ್ಯವಿದೆ. ಪ್ರಥಮ ದರ್ಜೆ ಎಸಿ ಪ್ರಯಾಣಿಕರಿಗೆ ನಿತ್ಯ ಶುಚಿಗೊಳಿಸಿದ ಬ್ಲಾಂಕೆಟ್ ನೀಡಲಾಗುತ್ತಿದೆ. ಆದರೆ ದ್ವಿತೀಯ ಮತ್ತು ತೃತೀಯ ದರ್ಜೆ ಎಸಿ ಪ್ರಯಾಣಿಕರಿಗೆ ಈ ಸೌಲಭ್ಯ ಇಲ್ಲ.

Blankets in AC coach will wash twice in month

ಪ್ರಸ್ತುತ 400 ರೂ. ಬೆಲೆ ಬಾಳುವ ಉಣ್ಣೆಯ ಬ್ಲಾಂಕೆಟ್ ಗಳನ್ನು ನೀಡಲಾಗುತ್ತಿದ್ದು, ಈಗ ಬ್ಲಾಂಕೆಟ್ ಗಳನ್ನು ಬದಲಾಯಿಸಲಾಗುತ್ತಿದ್ದು, ಅದರ ಬೆಲೆಯನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವೇಳೆ ಸ್ವಚ್ಛವಿದೆ ಎಂದು ಕಂಡಲ್ಲಿ ಒಮ್ಮೆ ಮಾತ್ರ ವಾಷ್‌ ಮಾಡುವಂತೆ ಮಂಗಳವಾರ ಆದೇಶ ಹೊರಡಿಸಿದೆ. ಪ್ರತಿ ನಿತ್ಯ ಎಸಿ ಟ್ರಾವೆಲರ್‌ಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ 3.90 ಲಕ್ಷ ಬ್ಲಾಂಕೆಟ್‌ಗಳ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

English summary
Ministry of railway has announced that blankets in AC coach of trains will be washed twice in a month now onwards. Earlier it was once in alternative months blankets were get washed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X