ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಮೃಗ ಬೇಟೆ ಕೇಸ್ : ಸೋನಾಲಿ, ಸೈಫ್, ನೀಲಂ, ತಬುಗೆ ಸಂಕಷ್ಟ

|
Google Oneindia Kannada News

ಜೋಧ್ ಪುರ್, ಸೆಪ್ಟೆಂಬರ್ 15: ಬಾಲಿವುಡ್ ನ ಸ್ಟಾರ್ ನಟ, ನಟಿಯರ ಬದುಕಿಗೆ ಕಪ್ಪುಚುಕ್ಕೆಯಾಗಿ ಉಳಿದಿರುವ ಕೃಷ್ಣಮೃಗ ಪ್ರಕರಣ ಮತ್ತೆ ಸುದ್ದಿಯಲ್ಲಿದೆ.

ಸಲ್ಮಾನ್ ಖಾನ್ ಪ್ರಮುಖ ಆರೋಪಿಯಾಗಿರುವ ಈ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದು, ಈಗ ಖುಲಾಸೆಗೊಂಡಿರುವ ನಟ, ನಟಿಯರ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ರಾಜಸ್ಥಾನ ಸರ್ಕಾರ ಮುಂದಾಗಿದೆ.

'ಕೃಷ್ಣಮೃಗದ ನಾಲ್ಕನೇ ಸಂತತಿಗೆ ಸಿಕ್ತು ನ್ಯಾಯ!''ಕೃಷ್ಣಮೃಗದ ನಾಲ್ಕನೇ ಸಂತತಿಗೆ ಸಿಕ್ತು ನ್ಯಾಯ!'

ಮುಖ್ಯ ಆರೋಪಿಯ ಜತೆ ಘಟನಾ ಸ್ಥಳದಲ್ಲಿದ್ದ ಕಾರಣಕ್ಕೆ ಆರೋಪ ಹೊತ್ತಿದ್ದ ಹಮ್ ಸಾಥ್ ಸಾಥ್ ಹೈ ಚಿತ್ರ ತಂಡದ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಅವರು ಆರೋಪಿಗಳಾಗಿದ್ದರು. ಆದರೆ, ಐದು ತಿಂಗಳ ಹಿಂದೆ ಇವರೆಲ್ಲರ ವಿರುದ್ಧ ಸರಿಯಾದ ಸಾಕ್ಷಿ ಸಿಗದ ಕಾರಣ, ಪ್ರಕರಣದಿಂದ ಖುಲಾಸೆಗೊಂಡಿದ್ದರು.

ಜೋಧಪುರ್ ನ್ಯಾಯಾಲಯವು ನೀಡಿದ್ದ ಈ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ರಾಜಸ್ಥಾನ ಸರ್ಕಾರ ಮುಂದಾಗಿದೆ ಎಂದು ಎಎನ್ ಐ ವರದಿ ಮಾಡಿದೆ.

ಕೃಷ್ಣಮೃಗ ಬೇಟೆ ಪ್ರಕರಣದ ಟೈಮ್ ಲೈನ್ಕೃಷ್ಣಮೃಗ ಬೇಟೆ ಪ್ರಕರಣದ ಟೈಮ್ ಲೈನ್

ಜೋಧಪುರ್ ಕೋರ್ಟಿನ ತೀರ್ಪಿನ ಬಗ್ಗೆ ಬಿಷ್ಣೋಯಿ ಸಮುದಾಯದವರು ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೊನೆಗೂ ಒತ್ತಡಕ್ಕೆ ಮಣಿದಿರುವ ವಸುಂಧರಾ ರಾಜೇ ಸರ್ಕಾರವು, ಈ ಪ್ರಕರಣದಲ್ಲಿ ಖುಲಾಸೆಗೊಂಡವರ ವಿರುದ್ಧ ಮತ್ತೆ ತನಿಖೆಗೆ ಆಗ್ರಹಿಸಿ, ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ

'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ

1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ರಿಂದ ರಾಜಸ್ಥಾನದ ಕಂಕನಿ ಹಳ್ಳಿಯ ಬಳಿ ಕೃಷ್ಣಮೃಗ ಬೇಟೆಯಾಡಿದ್ದರು. ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಖಾನ್ ಹಾಗೂ ಇತರ ನಟರ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವನ್ಯಜೀವಿ ಸಂರಕ್ಷಣೆ ಕಾಯ್ದೆ 51 ಹಾಗೂ ದುಷ್ಟ ಕಾರ್ಯ ಮಾಡಲು ಗುಂಪು ಸೇರಿರುವ ಆರೋಪದ ಮೇಲೆ IPC ಸೆಕ್ಷನ್ 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.

ಐವರಿಗೆ ಖುಲಾಸೆಯಾಗಿತ್ತು, ಆದರೆ, ಮತ್ತೆ ಸಂಕಷ್ಟ

ಐವರಿಗೆ ಖುಲಾಸೆಯಾಗಿತ್ತು, ಆದರೆ, ಮತ್ತೆ ಸಂಕಷ್ಟ

ಏಪ್ರಿಲ್ 05ರಂದು ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಲಾಯಿತು. ಜೋಧಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದ ಸಲ್ಮಾನ್, ಜಾಮೀನು ಪಡೆದು ಹೊರ ಬಂದರು. ಮಿಕ್ಕ ಎಲ್ಲಾ ನಟ, ನಟಿಯರು ಹಾಗೂ ರಾಜಸ್ಥಾನಿ ಗೈಡ್ ದುಷ್ಯಂತ್ ಸಿಂಗ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು. ಬೆನಿಫಿಟ್ ಆಫ್ ಡೌಟ್ ಎಂದು ಪರಿಗಣಿಸಿ, ಘಟನೆ ನಡೆದ ಸ್ಥಳದಲ್ಲಿದ್ದರೂ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಸಿಂಗ್ ಅವರು ಕ್ರೈಂಗೆ ಕುಮ್ಮಕ್ಕು ನೀಡಿದ್ದರ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ

ತ್ವರಿತವಾಗಿ ಜಾಮೀನು ಪಡೆದಿದ್ದ ಸಲ್ಮಾನ್

ತ್ವರಿತವಾಗಿ ಜಾಮೀನು ಪಡೆದಿದ್ದ ಸಲ್ಮಾನ್

ಈ ಪ್ರಕರಣದಲ್ಲಿ ಸಲ್ಮಾನ್​ ಖಾನ್ ಅವರಿಗೆ 5 ವರ್ಷ ಶಿಕ್ಷೆ ಪ್ರಕಟಿಸಲಾಯಿತು. ಆದರೆ, ಜೋಧಪುರದ ಜೈಲಿನಲ್ಲಿದ್ದ ಸಲ್ಮಾನ್ ಗೆ ಷರತ್ತುಬದ್ಧ ಜಾಮೀನು ತಕ್ಷಣವೇ ಸಿಕ್ಕಿತು. 25 ಸಾವಿರ ರೂ ಭದ್ರತಾ ಠೇವಣಿ ಹಾಗೂ ವೈಯಕ್ತಿಕ ಬಾಂಡ್​ 50 ಸಾವಿರ ರೂ. ಇರಿಸಿ ಜಾಮೀನು ಪಡೆದರು. ವಿದೇಶಕ್ಕೆ ತೆರಳುವಾಗ ಕೋರ್ಟಿನ ಅನುಮತಿ ಅಗತ್ಯ ಎಂಬ ಷರತ್ತು ವಿಧಿಸಲಾಗಿದೆ.

ಸಲ್ಮಾನ್ ಬದುಕಲ್ಲಿ ಏನು ಬದಲಾಗಿಲ್ಲ

ಸಲ್ಮಾನ್ ಬದುಕಲ್ಲಿ ಏನು ಬದಲಾಗಿಲ್ಲ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಬಾಲಿವುಡ್ ನಟ ಸಲ್ಮಾನ್ ಖಾನ್ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಿದ ನ್ಯಾಯಾಲಯವ್8, ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಕೆಲವು ವೈಯಕ್ತಿಕ ಕಾರಣಗಳಿಂದ ನಾಲ್ಕು ದೇಶಗಳಿಗೆ ತೆರಳಬೇಕಿದೆ ಎಂದು ಅರ್ಜಿಯಲ್ಲಿ ತಿಳಿಸಿರುವ ಖಾನ್, ಕೋರ್ಟಿನ ಅನುಮತಿ ಕೇಳಿದ್ದರು.

English summary
The Rajasthan government on Saturday said it would appeal before the High Court against the acquittal of actors Sonali Bendre, Neelam Kothari, Tabu, Saif Ali Khan and others in the Blackbuck poaching case, ANI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X