ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕ್ ಕಪ್ಪು ಹಣದ ಪ್ರಮಾಣ ಶೇ 80ರಷ್ಟು ಇಳಿಕೆ: ಕೇಂದ್ರ

|
Google Oneindia Kannada News

ನವದೆಹಲಿ, ಜುಲೈ 24: ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸುವ ಕಪ್ಪುಹಣದ ಪ್ರಮಾಣ ಶೇ 80ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

2014-2017ರ ಅವಧಿಯಲ್ಲಿ ಸ್ವಿಸ್‌ನಲ್ಲಿರುವ ಕಪ್ಪು ಹಣದ ಪ್ರಮಾಣ ಶೇ 80ರಷ್ಟು ತಗ್ಗಿದೆ ಎಂದು ಗೋಯಲ್ ರಾಜ್ಯಸಭೆಗೆ ಮಂಗಳವಾರ ತಿಳಿಸಿದರು.

ಸ್ವಿಸ್‌ ಬ್ಯಾಂಕ್‌ಗಳಲ್ಲಿರುವ ಎಲ್ಲ ಹಣವೂ ಕಪ್ಪುಹಣವಲ್ಲ: ಅರುಣ್ ಜೇಟ್ಲಿಸ್ವಿಸ್‌ ಬ್ಯಾಂಕ್‌ಗಳಲ್ಲಿರುವ ಎಲ್ಲ ಹಣವೂ ಕಪ್ಪುಹಣವಲ್ಲ: ಅರುಣ್ ಜೇಟ್ಲಿ

ಸ್ವಿಸ್ ಬ್ಯಾಂಕ್ ನಿರಂತರವಾಗಿ ಬಿಡುಗಡೆ ಮಾಡುವ ಅಂಕಿ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಮಾಧ್ಯಮಗಳು ಪ್ರಕಟಿಸುತ್ತಿವೆ. ತಪ್ಪುದಾರಿಗೆ ಎಳೆಯುವ ಶೀರ್ಷಿಕೆಗಳನ್ನು ನೀಡುತ್ತಿವೆ ಎಂದು ಅವರು ದೂರಿದ್ದಾರೆ.

 black money deposits in swiss bank down by 80%

2016-17ರ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸುವ ಒಟ್ಟಾರೆ ಠೇವಣಿ ಪ್ರಮಾಣದಲ್ಲಿ ಶೇ ಹೆಚ್ಚಳವಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಪ್ರಸ್ತಾಪಿಸಿದ ಅವರು, ಇದು ಠೇವಣಿಯೇತರ ಸಾಲ, ಭಾರತದಲ್ಲಿನ ಸ್ವಿಸ್‌ ಬ್ಯಾಂಕ್‌ಗಳ ವ್ಯವಹಾರ, ಅಂತರ್ ಬ್ಯಾಂಕ್ ವಹಿವಾಟು ಮುಂತಾದವುಗಳನ್ನು ಸಹ ಒಳಗೊಂಡಿರುತ್ತದೆ ಎಂದಿದ್ದಾರೆ.

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸ್ವಿಸ್ ಬ್ಯಾಂಕ್‌ನ ನಾನ್ ಬ್ಯಾಂಕ್ ಲೋನ್ ಮತ್ತು ಠೇವಣಿಗಳ ಪ್ರಮಾಣ ಶೇ 80.2ರಷ್ಟು ಇಳಿಕೆಯಾಗಿದೆ.

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆ

ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟ್ಲ್‌ಮೆಂಟ್ (ಬಿಐಎಸ್) ನೀಡಿರುವ ಮಾಹಿತಿಯು ನಾನ್ ಬ್ಯಾಂಕ್ ಲೋನ್‌ಗಳು ಮತ್ತು ಠೇವಣಿಗಳು 2016ರಲ್ಲಿದ್ದ $800 ಮಿಲಿಯನ್‌ನಿಂದ 2017ರಲ್ಲಿ $524 ಮಿಲಿಯನ್‌ಗೆ ಅಂದರೆ, ಶೇ 34.5 ರಷ್ಟು ಇಳಿಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

English summary
Union Finance Minister Piyush Goyal on Tuesday told that the black money deposited in Swiss National Bank has reduced by 80% since 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X