ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಕ್‌ಫಂಗಸ್; ಆಂಫೊಟೆರಿಸಿನ್ ಬಿ ರಫ್ತಿನ ಮೇಲೆ ಕೇಂದ್ರ ನಿರ್ಬಂಧ

|
Google Oneindia Kannada News

ನವದೆಹಲಿ, ಜೂನ್ 01: ಬ್ಲ್ಯಾಕ್ ಫಂಗಸ್ (ಮ್ಯೂಕರ್ ಮೈಕೋಸಿಸ್) ಸಮಸ್ಯೆಗೆ ತುತ್ತಾದವರಿಗೆ ನೀಡಲಾಗುವ ಆಂಫೊಟೆರಿಸಿನ್ ಬಿ ಔಷಧಗಳ ರಫ್ತಿನ ಮೇಲೆ ಮಂಗಳವಾರ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.

ಡಿಜಿಎಫ್‌ಟಿ- ವಿದೇಶ ವ್ಯವಹಾರ ಮಹಾನಿರ್ದೇಶನಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಆಂಫೊಟೆರಿಸಿನ್ ಬಿ ಔಷಧ ರಫ್ತು ಮಾಡುವುದನ್ನು ನಿರ್ಬಂಧಿತ ವಿಭಾಗಕ್ಕೆ ಸೇರಿಸಿರುವುದಾಗಿ ತಿಳಿಸಿದೆ.

ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ಇಬ್ಬರು ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕುಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ಇಬ್ಬರು ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು

ಬೇರೆ ದೇಶಗಳಿಗೆ ಈ ಔಷಧಗಳನ್ನು ರಫ್ತು ಮಾಡಲು ಡಿಜಿಎಫ್‌ಟಿಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಈ ಕ್ರಮ ತಕ್ಷಣವೇ ಜಾರಿಗೆ ಬರಬೇಕಾಗಿ ಆದೇಶಿಸಿದೆ.

Black Fungus Cases: Centre Ban On Export Of Amphotericin B Vials

ಸೋಮವಾರ ವಿವಿಧ ರಾಜ್ಯಗಳಿಗೆ ಹೆಚ್ಚುವರಿ 30,100 ವಯಲ್ ಆಂಫೊಟೆರಿಸಿನ್ ಬಿ ವಯಲ್ಸ್‌ ಹಂಚಿಕೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ವಿವಿಧ ರಾಜ್ಯಗಳಲ್ಲಿ ದಾಖಲಾಗುತ್ತಿರುವ ಮ್ಯೂಕರ್‌ ಮೈಕೋಸಿಸ್ ರೋಗಿಗಳ ಸಂಖ್ಯೆಯನ್ನಾಧರಿಸಿ ಔಷಧ ಹಂಚಿಕೆ ಮಾಡುತ್ತಿರುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಪ್ಪು ಶಿಲೀಂಧ್ರ ಸಮಸ್ಯೆ: ಕರ್ನಾಟಕದಲ್ಲಿ ಒಟ್ಟು 1370 ಮ್ಯೂಕರ್ ಮೈಕೋಸಿಸ್ ಪ್ರಕರಣಗಳು ದಾಖಲಾಗಿದ್ದು, 27 ಮಂದಿ ಗುಣಮುಖರಾಗಿ 51 ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ರಾಜ್ಯಕ್ಕೆ ಈವರೆಗೆ 12,710 ವಯಲ್‌ಗಳ ಆಂಫೊಟೆರಿಸಿನ್ ಬಿ ಹಂಚಿಕೆಯಾಗಿದೆ.

English summary
Centre on tuesday imposed ban on export of amphotericin B vials which are used to treat black fungus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X